ವಿಟ್ಲ: ಬಂಟ್ವಾಳ ತಾಲೂಕಿನ ಪುತ್ತೂರು ವಿಧಾನಸಭಾ ಕ್ಷೇತ್ರದ ಅಳಿಕೆ ಗ್ರಾಮದ ಒಟ್ಟು 22 ಕಾಮಗಾರಿಗಳಿಗೆ ಪುತ್ತೂರು ಶಾಸಕ ಅಶೋಕ್ ರೈ ಶಂಕುಸ್ಥಾಪನೆ ಮಾಡಿದರು. ಅದೇ ರೀತಿ 2.45 ಲಕ್ಷ ರೂ. ಅನುದಾನದ ಕಾಮಾಗಾರಿಯನ್ನು ಉದ್ಘಾಟಿಸಿದರು. ಈ ವೇಳೆ ಅಳಿಕೆ ಗ್ರಾಮದ ನಿಕಟಪೂರ್ವ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಎಸ್.ಎಸ್. ಮಹಮ್ಮದ್, ಡಾ.ರಾಜಾರಾಮ್ ಸೇರಿ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.


ಅಳಿಕೆ ಗ್ರಾಮದ ಕಾನತ್ತಡ್ಕ- ಗೋಳಿದಡಿ ರಸ್ತೆ ಅಭಿವೃದ್ದಿಗೆ 10 ಲಕ್ಣ ಅನುದಾನ ಮಂಜೂರುಗೊಂಡಿದ್ದು ಕಾಮಗಾರಿಗೆ ಶಾಸಕರು ಶಿಲಾನ್ಯಾಸ ನಡೆಸಿದರು.

5 ಲಕ್ಷ ಅನುದಾನದಲ್ಲಿ ಶ್ರೀ ಧೂಮಾವತಿ ದೈವಸ್ಥಾನ, ಕಾನ ಮೂವಜೆ ಇದರ ಅಭಿವೃದ್ದಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು.

15 ಲಕ್ಣ ಅನುದಾನದಲ್ಲಿಅಳಿಕೆ ಗ್ರಾಮದ ಅದಳ- ಬಿಟ್ಟಿಮೂಲೆ-ಕೊಲ್ಲಗುಳಿ- ನೆಲಗುಳಿ ಪರಿಶಿಷ್ಟ ಪಂಗಡ ಕಾಲನಿ ರಸ್ತೆ ಕಾಂಕ್ರೀಟ್ ಮಾಡಲಾಗಿದ್ದು ಕಾಮಗಾರಿಯನ್ನು ಶಾಸಕ ಅಶೋಕ್ ರೈ ಉದ್ಘಾಟಿಸಿದರು.

65 ಲಕ್ಷ ಅನುದಾನದಲ್ಲಿ ಅಳಿಕೆ ಗ್ರಾಮದ ಬಿಲ್ಲಂಪದವು ಎಂಬಲ್ಲಿ ಪ್ರಾಥಮಿಕ ಆರೋಗ್ಯ ಉಪಕೇಂದ್ರಕ್ಕೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು.

10 ಲಕ್ಷ ಅನುದಾನದಲ್ಲಿ ಅಳಿಕೆ ಗ್ರಾಮದ ಕೊಟ್ಟೆತ್ತಡ್ಕ ರಸ್ತೆ ಅಭಿವೃದ್ದಿಗೆ ಶಾಸಕ ಅಶೋಕ್ ರೈ ಶಿಕಾನ್ಯಾಸ ನೆರವೇರಿಸಿದರು.

8 ಲಕ್ಷ ಅನುದಾನದಲ್ಲಿ ಅಳಿಕೆ ಗ್ರಾಮದ ಮುಳಿಯ ದಂಬೆ ಅಂಗನವಾಡಿ ಕೇಂದ್ರದ ಶಿಲಾನ್ಯಾಸ ನಡೆಯಿತು.

5 ಲಕ್ಷ ಅನುದಾನದಲ್ಲಿ ಮುಳಿಯ ಸೀತಾರಾಮ ಶೆಟ್ಟಿ ಅವರ ಮನೆ ಬಳಿಯಿಂದ ತೆರಳುವ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ ನಡೆಯಿತು.

10 ಲಕ್ಷ ಅನುದಾನದಲ್ಲಿ ಅಳಿಕೆ ಗ್ರಾಮದ ಎರುಂಬು- ತಾಮ್ರಕಜೆ- ಬಿಲ್ಲಂಪದವು ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ ನಡೆಯಿತು.

10 ಲಕ್ಷ ಅನುದಾನದಲ್ಲಿ ಅಳಿಕೆ ಗ್ರಾಮದ ಗಂಗೆ ಮೂಲೆ- ಎರುಂಬು ಶಂಕರ ನಾರಾಯಣ ದೃವಸ್ಥಾನದ ಸಂಪರ್ಕ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ ನಡೆಯಿತು.

10 ಲಕ್ಷ ಅನುದಾನದಲ್ಲಿ ಅಳಿಕೆ ಗ್ರಾಮದ ಎರುಂಬು ಶ್ರೀ ಶಂಕರ ನಾರಾಯಣ ದೇವಸ್ಥಾನದ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ ನಡೆಯಿತು.

20 ಲಕ್ಷ ಅನುದಾನದಲ್ಲಿ ಅಳಿಕೆ ಗ್ರಾಮದ ಎರುಂಬು ಹೊಳೆ ಬದಿ ತಡೆಗೋಡೆ ಕಾಮಗಾರಿ ಗೆ ಶಾಸಕ ಅಶೋಕ್ ರೈ ಉದ್ಘಾಟನೆ ನಡೆಸಿದರು.

10 ಲಕ್ಷ ಅನುದಾನದಲ್ಲಿ ಅಳಿಕೆ ಗ್ರಾಮದ ಕೊಲ್ಯ – ಓಟೆಮಾರು ರಸ್ತೆ ಅಭಿವೃದ್ದಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು.

10 ಲಕ್ಷ ಅನುದಾನದಲ್ಲಿ ಅಳಿಕೆ ಗ್ರಾಮದ ಕಲ್ಲಜೀರ- ಮಡಿಯಾಳ- ಕಟ್ಟತ್ತೋಡು ರಸ್ತೆ ಅಭಿವೃದ್ದಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನಡೆಸಿದರು.

10 ಲಕ್ಷ ಅನುದಾನದಲ್ಲಿ ಅಳಿಕೆ ಗ್ರಾಮದ ಕಲ್ಲಜೇರ – ಕೇಕನಾಜೆ ರಸ್ತೆ ಅಭಿವೃದ್ದಿಗೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನೆರವೇರಿಸುವ ಮೂಲಕ ಗ್ರಾಮದ ಬಹುಕಾಲದ ಬೇಡಿಕೆ ಈಡೇರಿಸಿದರು.

2 ಕೊಟಿ ಅನುದಾನದಲ್ಲಿ ದೂಜಮೂಲೆ- ನೆಕ್ಕರೆ-ಮುಳಿಯ- ನೆಕ್ಕಿತಪುಣಿ ಗೆ ಸುಮಾರು ಎರಡು ಕಿಮೀ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಾಸಕ ಅಶೋಕ್ ರೈ ಅನುದಾನ ನೀಡಿದ್ದು ಕಾಮಗಾರಿ ಪೂರ್ಣಗೊಂಡಿದ್ದು ಕಾಮಗಾರಿಯ ಉದ್ಘಾಟನೆ ನಡೆಯಿತು


