• Home  
  • ಕದ್ರಿ ಯುದ್ಧ ಸ್ಮಾರಕದಲ್ಲಿ ಜುಲೈ 26 ರಂದು ಐತಿಹಾಸಿಕ ‘ಟಿ-55’ ಯುದ್ಧ ಟ್ಯಾಂಕ್ ಲೋಕಾರ್ಪಣೆ:
- HOME - LATEST NEWS

ಕದ್ರಿ ಯುದ್ಧ ಸ್ಮಾರಕದಲ್ಲಿ ಜುಲೈ 26 ರಂದು ಐತಿಹಾಸಿಕ ‘ಟಿ-55’ ಯುದ್ಧ ಟ್ಯಾಂಕ್ ಲೋಕಾರ್ಪಣೆ:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಆಶ್ರಯದಲ್ಲಿ ಜುಲೈ 26ರ ಭಾನುವಾರ ಬೆಳಿಗ್ಗೆ 9:00 ಗಂಟೆಗೆ ಕದ್ರಿ ಹಿಲ್ಸ್‌ನ ಯುದ್ಧ ಸ್ಮಾರಕದಲ್ಲಿ ‘ಕಾರ್ಗಿಲ್ ವಿಜಯ್ ದಿವಸ್’ ಆಚರಣೆ ಹಾಗೂ ಐತಿಹಾಸಿಕ ‘ಟಿ-55’ ಯುದ್ಧ ಟ್ಯಾಂಕ್‌ನ ಸಾರ್ವಜನಿಕ ಲೋಕಾರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಜಿ ಸೈನಿಕರೂ ಆಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ವಿಶೇಷ ಪ್ರಯತ್ನದಿಂದ ಕೇಂದ್ರ ರಕ್ಷಣಾ ಸಚಿವಾಲಯದಿಂದ ಈ ಯುದ್ಧ ಟ್ಯಾಂಕ್ ಮಂಗಳೂರಿಗೆ ಮಂಜೂರಾಗಿದೆ. ಟಿ-55 ಯುದ್ಧ […]

Share News

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಆಶ್ರಯದಲ್ಲಿ ಜುಲೈ 26ರ ಭಾನುವಾರ ಬೆಳಿಗ್ಗೆ 9:00 ಗಂಟೆಗೆ ಕದ್ರಿ ಹಿಲ್ಸ್‌ನ ಯುದ್ಧ ಸ್ಮಾರಕದಲ್ಲಿ ‘ಕಾರ್ಗಿಲ್ ವಿಜಯ್ ದಿವಸ್’ ಆಚರಣೆ ಹಾಗೂ ಐತಿಹಾಸಿಕ ‘ಟಿ-55’ ಯುದ್ಧ ಟ್ಯಾಂಕ್‌ನ ಸಾರ್ವಜನಿಕ ಲೋಕಾರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಜಿ ಸೈನಿಕರೂ ಆಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ವಿಶೇಷ ಪ್ರಯತ್ನದಿಂದ ಕೇಂದ್ರ ರಕ್ಷಣಾ ಸಚಿವಾಲಯದಿಂದ ಈ ಯುದ್ಧ ಟ್ಯಾಂಕ್ ಮಂಗಳೂರಿಗೆ ಮಂಜೂರಾಗಿದೆ.ಟಿ-55 ಯುದ್ಧ ಟ್ಯಾಂಕ್‌ನ ಐತಿಹಾಸಿಕ ಹಿನ್ನೆಲೆ: ಈ ಟ್ಯಾಂಕ್ ಭಾರತೀಯ ಸೇನೆಯ ಶೌರ್ಯ ಹಾಗೂ ವಿಜಯದ ಸಂಕೇತವಾಗಿದೆ. 1960ರ ದಶಕದ ಮಧ್ಯಭಾಗದಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದ ಈ ಟ್ಯಾಂಕ್, 1965 ಮತ್ತು 1971ರ ಭಾರತ-ಪಾಕಿಸ್ತಾನ ಯುದ್ಧಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿತ್ತು. ವಿಶೇಷವಾಗಿ 1971ರ ಯುದ್ಧದ ಗರಿಬ್‌ಪುರ, ನೈನಾಕೋಟ್ ಮತ್ತು ಬಸಂತರ್ ಕದನಗಳಲ್ಲಿ ಶತ್ರು ಸೈನ್ಯದ ಹೆಡೆಮುರಿ ಕಟ್ಟಲು ಇದು ನೆರವಾಗಿತ್ತು. ಸುಮಾರು ನಾಲ್ಕು ದಶಕಗಳ ಕಾಲ ದೇಶದ ಗಡಿಯಲ್ಲಿ ಸಕ್ರಿಯ ಸೇವೆ ಸಲ್ಲಿಸಿದ ಈ ಯುದ್ಧ ಟ್ಯಾಂಕ್, 2011ರ ಮೇ ತಿಂಗಳಲ್ಲಿ ನಿವೃತ್ತಿಗೊಂಡಿತು.ಮಂಗಳೂರಿಗೆ ಬಂದ ಹಾದಿ ಮತ್ತು ವ್ಯವಸ್ಥೆ: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ವಿಶೇಷ ಮನವಿ ಸಲ್ಲಿಸಿ ಈ ಯುದ್ಧ ಟ್ಯಾಂಕನ್ನು ಮಂಗಳೂರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಪುಣೆಯ ಕಿರ್ಕಿ ಡಿಪೋದಿಂದ ಇದನ್ನು ತರಲಾಗಿದ್ದು, ಮಂಗಳೂರು ಮಹಾನಗರ ಪಾಲಿಕೆಯು (MCC) ಸುಮಾರು ₹38 ಲಕ್ಷ ವೆಚ್ಚದಲ್ಲಿ ಕದ್ರಿ ಯುದ್ಧ ಸ್ಮಾರಕದ ಬಳಿ ಆಕರ್ಷಕವಾದ ವಿಶೇಷ ವೇದಿಕೆಯನ್ನು ನಿರ್ಮಿಸಿದೆ. ಜುಲೈ 15ರಂದು ಕ್ರೇನ್ ಮೂಲಕ ಈ ಟ್ಯಾಂಕನ್ನು ವೇದಿಕೆಯ ಮೇಲೆ ಪ್ರತಿಷ್ಠಾಪಿಸಲಾಗಿದ್ದು, ಇದರೊಂದಿಗೆ ಸಾರ್ವಜನಿಕರ ವೀಕ್ಷಣೆಗಾಗಿ ಒಂದು .303 ರೈಫಲ್ ಅನ್ನು ಕೂಡ ಪ್ರದರ್ಶನಕ್ಕಿಡಲಾಗುತ್ತಿದೆ.ವೀರ ಯೋಧರಿಗೆ ಗೌರವಾರ್ಪಣೆ: ಯುದ್ಧ ಟ್ಯಾಂಕ್ ಲೋಕಾರ್ಪಣೆಯ ಬೆನ್ನಲ್ಲೇ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಅಮರ ವೀರ ಯೋಧರ ಸ್ಮರಣಾರ್ಥವಾಗಿ ‘ಕಾರ್ಗಿಲ್ ವಿಜಯ್ ದಿವಸ್’ ಪ್ರಯುಕ್ತ ಯೋಧರಿಗೆ ವಿಶೇಷ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.ಯುವ ಪೀಳಿಗೆಯಲ್ಲಿ ದೇಶಪ್ರೇಮ ಹಾಗೂ ಸೇನಾ ಸೇರ್ಪಡೆಯ ಉತ್ಸಾಹ ಮೂಡಿಸುವ ಈ ರಾಷ್ಟ್ರಪ್ರೇಮದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸಾರ್ವಜನಿಕರಿಗೆ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಆತ್ಮೀಯ ಆಹ್ವಾನ ನೀಡಲಾಗಿದೆ.

Share News