ಸುಳ್ಯ:ಜುಲೈ 23: ಸುಳ್ಯದ ಬಿಜೆಪಿ ಕಾರ್ಯಾಲಯದಲ್ಲಿ ಸುಳ್ಯ ಮಂಡಲದ ಕಾನೂನು ಪ್ರಕೋಷ್ಠದ ಪದಾಧಿಕಾ ರಿಗಳ ಘೋಷಣಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.ಕಾರ್ಯಕ್ರಮವನ್ನು ಬಿಜೆಪಿ ಮಂಡಲ ಅಧ್ಯಕ್ಷರಾದ ವೆಂಕಟ ವಳಲಂಬೆ ಅವರು ದೀಪ ಬೆಳಗಿಸಿ, ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.

ಈ ವೇಳೆ ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಶ್ರೀಧರ ಶೆಟ್ಟಿ ಪುಳಿಂಚ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಹ ಸಂಚಾಲಕರಾದ ಪ್ರಮೋದ್ ಪೂಜಾರಿ ಕೆರ್ವಾಶೆ ಅವರು ಸಂಘಟನೆಯಲ್ಲಿ ಕಾನೂನು ಪ್ರಕೋಷ್ಠದ ಮಹತ್ವ ಹಾಗೂ ಅದರ ಕಾರ್ಯವೈಖರಿಯನ್ನು ಸಭೆಗೆ ವಿವರಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ ಅವರು ನೂತನ ಪದಾಧಿಕಾರಿಗಳಿಗೆ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಮಂಡಲ ಪ್ರಕೋಷ್ಠದ ಸಂಚಾಲಕರಾದ ಮಹೇಶ್ ಸವಣೂರು ಅವರು ಪ್ರಕೋಷ್ಠದ ಮುಂದಿನ ಕಾರ್ಯಯೋಜನೆಗಳ ಕುರಿತು ಭರವಸೆಯ ಮಾತುಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಕಾನೂನು ಪ್ರಕೋಷ್ಠದ ನೂತನ ಸಮಿತಿ ಸದಸ್ಯರಾಗಿ ಹರೀಶ್ ಬೂಡುಪನ್ನೆ, ಹರೀಶ್ ಕುಮಾರ್ ಎಂ. ಬೂಡಿಯಾರ್,ವಿನೋದ್ ಕುಮಾರ್ ನೆಲ್ಯಾಡಿ,ಹರ್ಷಿತ್ ಕಾರ್ಜ,ಕುಮಾರಿ ಶೈಲಿ, ಅಧಿಕೃತವಾಗಿ ಘೋಷಿಸಲಾಯಿತು:
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ರೈ ಮನವಳಿಕೆ, ವಿನಯ್ ಕುಮಾರ್ ಕಂದಡ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಪುಷ್ಪಾ ಮೇದಪ್ಪ, ಜಿಲ್ಲಾ ಲೀಗಲ್ ಸೆಲ್ ಸದಸ್ಯರಾದ ವೇಣು ಕುಮಾರ್ ಮತ್ತು ಸಂದೀಪ್ ವಳಲಂಬೆ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಮಂಡಲದ ಸಹ ಸಂಚಾಲಕರಾದ ಸಂದೀಪ್ ಮದುವೆಗದ್ದೆ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಂಡಲ ಸದಸ್ಯರಾದ ಹರ್ಷಿತ್ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.