ಮಂಗಳೂರು: ಮೇ 1ರಂದು ಬಜ್ಪೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆಯ ಹಿಂದೆ ನಿಷೇಧಿತ ಭಯೋತ್ಪಾದಕ ಸಂಘಟನೆ PFI ಕೈವಾಡವಿದೆ ಅದಕೋಸ್ಕರ ಈ ಪ್ರಕ್ರರಣವನ್ನNIA ತನಿಖೆಗೆ ನೀಡಬೇಕೆಂದು ವಿಶ್ವ ಹಿಂದೂ ಪರಿಷದ್ ಬಲವಾಗಿ ಆಗ್ರಹಿಸಿ ಬಜಪೆಯಲ್ಲಿ ಬ್ರಹತ್ ಜನಾಗ್ರಹ ಸಬೆ ನಡೆಸಿತ್ತು. ಇದೀಗ ಕೇಂದ್ರ ಸರಕಾರದ ಗೃಹ ಇಲಾಖೆಯು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು NIA ತನಿಖೆಗೆ ನೀಡಿರುವುದನ್ನು ವಿಶ್ವ ಹಿಂದೂ ಪರಿಷದ್ ಸ್ವಾಗತಿಸುತ್ತದೆ. ಈ ಹತ್ಯೆಯ ಹಿಂದೆ ಇರುವ ಎಲ್ಲಾ ಹಂತಕರನ್ನು ಮತ್ತು ಸಂಚುಕೋರರನ್ನು, ಹತ್ಯೆಗೆ ಹಣಕಾಸಿನ ಸಹಕಾರ ನೀಡಿದವರನ್ನು ಬಂಧಿಸಿ ಸುಹಾಸ್ ಶೆಟ್ಟಿ ಹತ್ಯೆಗೆ ನ್ಯಾಯ ಸಿಗುವ ವಿಶ್ವಾಸವಿದೆ. ಈ ಬಗ್ಗೆ ರಾಜ್ಯದ ಲಕ್ಷಾಂತರ ಹಿಂದೂಗಳು ಒಕ್ಕೊರಳಲ್ಲಿ ಆಗ್ರಹಿಸಿದ್ದು, ಇದು ಹಿಂದೂ ಸಮಾಜದ ಹೋರಾಟಕ್ಕೆ ಸಂದ ಜಯ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಪ್ರಕಟಣೆಯಲ್ಲಿ ತಿಳಿಸಿದರು.
