ವಿಟ್ಲ: ಇಬ್ಬರು ಐಟಿಐ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿ ಚೂರಿ ಇರಿತಗೊಂಡ ಘಟನೆ ವಿಟ್ಲದ ಐಟಿಐ ತರಗತಿ ಒಳಗಡೆ ಸಂಭವಿಸಿದೆ.

ಚೂರಿ ಇರಿತದಿಂದ ಇಬ್ಬರು ಅಪ್ರಾಪ್ತರು ಗಾಯೊಂಡಿದ್ದಾರೆ, ವಿಟ್ಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಥಮ ವರ್ಷದ ಎಲೆಕ್ಟಿಷಿಯನ್ ಐಟಿಐ ಕಲಿಯುತ್ತಿರುವ ಅಪ್ರಾಪ್ತ ಮತ್ತು ವಿಟ್ಲ ನಿವಾಸಿ ಹೇಮಂತ್ ಎಂಬವರ ನಡುವೆ ಜಗಳ ಉಂಟಾಗಿತ್ತು. ಬಳಿಕ ಹೇಮಂತ್ ಚೂರಿ ತಂದಿದ್ದು, ಅದರಿಂದ ಅಪ್ರಾಪ್ತನಿಗೆ ಇರಿದಿದ್ದಾನೆ. ಅದನ್ನು ತಡೆಯಲು ಬಂದ ಮತ್ತೋರ್ವ ವಿದ್ಯಾರ್ಥಿಗೂ ಗಾಯವಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಚೂರಿ ಇರಿದ ಹೇಮಂತ್ ಎಂಬಾತನ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ-32/2026 ಕಲಂ115(1) 352 109 118(1) ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ.