ನಹೀ ಜ್ಞಾನೇನ ಸದೃಶಂ :
ಜ್ಞಾನಕ್ಕಿಂತ ಮಿಗಿಲಾದದ್ದು ಈ ಜಗತ್ತಿನಲ್ಲಿ ಬೇರೆ ಯಾವುದೂ ಇಲ್ಲ…
ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನವನ್ನು ನೀಡುತ್ತಿರುವ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ ವಿಟ್ಲ ಇದರ 2025- 26 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಹಾಗೂ ನೂತನ ಮುಖ್ಯ ಶಿಕ್ಷಕರಾಗಿ ನಿಯೋಜನೆಗೊಂಡಿರುವ ವಂದನೀಯ ಫಾ. ಅಮಿತ್ ಪ್ರಕಾಶ್ ರೋಡ್ರಿಗಸ್ ಇವರ ಸ್ವಾಗತ ಕಾರ್ಯಕ್ರಮವನ್ನು ವಿನೂತನ ಶೈಲಿಯೊಂದಿಗೆ ಬಹಳ ಅದ್ದೂರಿಯಾಗಿ ಆಚರಿಸಲಾಯಿತು.
ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ದಾಖಲಾತಿ ಹೊಂದಿರುವ ವಿದ್ಯಾರ್ಥಿಗಳಿಗೆ ಹೂವಿನೊಂದಿಗೆ ಸ್ವಾಗತಿಸಿದ್ದು ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆ, ಸ್ವಾಗತ ನೃತ್ಯ ಕಾರ್ಯಕ್ರಮಕ್ಕೆ ಹೆಚ್ಚಿನ ಶೋಭೆ ತಂದಿತ್ತು. ಶಾಲಾ ಸಂಚಾಲಕರು ಸಂಸ್ಥೆಗೆ ಮುಖ್ಯ ಶಿಕ್ಷಕರಾಗಿ ನಿಯೋಜನೆಗೊಂಡಿರುವ ವಂದನೀಯ ಫಾ. ಅಮಿತ್ ಪ್ರಕಾಶ್ ರೋಡ್ರಿಗಸ್ ಇವರನ್ನು ಸಂಸ್ಥೆಗೆ ಅದ್ದೂರಿಯಾಗಿ ಸ್ವಾಗತಿಸಿದರು.
ವಂದನೀಯ ಫಾ. ಅಮಿತ್ ಪ್ರಕಾಶ್ ರೋಡ್ರಿಗಸ್ ಇವರು ಮಾತನಾಡಿ ಹೊಸ ಯೋಜನೆ ಹೊಸ ಆಲೋಚನೆಯೊಂದಿಗೆ ಶಾಲಾ ಪ್ರಗತಿಗೆ ಸದಾ ಶ್ರಮಿಸುತ್ತೇನೆ ಎಲ್ಲರ ಸಹಕಾರವನ್ನು ಯಾಚಿಸಿದರು. ತದನಂತರ 2025 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ಶಾಲಾ ಕೀರ್ತಿಯನ್ನು ಬೆಳಗಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲಾ ಸಂಚಾಲಕರಾಗಿರುವ ವಂದನೀಯ ಫಾ. ಐವನ್ ಮೈಕಲ್ ರೋಡ್ರಿಗಸ್,ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷರಾದ ಶ್ರೀ ವಿಜಯ್ ಪಾಯ್ಸ್, ಕಾರ್ಯದರ್ಶಿ ಶ್ವೇತಾ ಪಾಯ್ಸ್ ಮುಖ್ಯ ಶಿಕ್ಷಕರಾಗಿ ವಂದನೀಯ ಫಾ. ಅಮಿತ್ ಪ್ರಕಾಶ್ ರೋಡ್ರಿಗಸ್, ಸಿ| ಮರೀನಾ, ಆಡಳಿತ ಮಂಡಳಿಯ ಸದಸ್ಯರು ಥೋಮಸ್ ಮಸ್ಕರೇನಸ್, ಮನೋಹರ್ ಲಾನ್ಸಿ ಉಪಸ್ಥಿತರಿದ್ದು,
ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ದಾಖಲಾತಿ ಹೊಂದಿರುವ ವಿದ್ಯಾರ್ಥಿಗಳಿಗೆ ಹೂವಿನೊಂದಿಗೆ ಸ್ವಾಗತಿಸಿದ್ದು ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆ, ಸ್ವಾಗತ ನೃತ್ಯ ಕಾರ್ಯಕ್ರಮಕ್ಕೆ ಹೆಚ್ಚಿನ ಶೋಭೆ ತಂದಿತ್ತು. ಶಾಲಾ ಸಂಚಾಲಕರು ಸಂಸ್ಥೆಗೆ ಮುಖ್ಯ ಶಿಕ್ಷಕರಾಗಿ ನಿಯೋಜನೆಗೊಂಡಿರುವ ವಂದನೀಯ ಫಾ. ಅಮಿತ್ ಪ್ರಕಾಶ್ ರೋಡ್ರಿಗಸ್ ಇವರನ್ನು ಸಂಸ್ಥೆಗೆ ಅದ್ದೂರಿಯಾಗಿ ಸ್ವಾಗತಿಸಿದರು.
ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದ ಶಾಲಾ ಸಂಚಾಲಕರು ಎಲ್ಲರಿಗೂ ಶುಭ ಹಾರೈಸಿದರು. ಕಾರ್ಯಕ್ರಮವನ್ನು ಸಿ. ಮೌನಿಕಾ ನಿರೂಪಿದರು. ಸಹ ಶಿಕ್ಷಕಿ ಸಂಧ್ಯಾ ಎಮ್ ಡಿ ಸ್ವಾಗತಿಸಿದ್ದು, ಸಹಶಿಕ್ಷಕಿ ಜಾನೆಟ್ ಎಲ್ಲರಿಗೂ ವಂದಿಸಿದರು.