canaratvnews

*ಎಲ್ಲಾ ಸರ್ವ ಧರ್ಮದವರು ಖುಷಿಯನ್ನು ದೇಶದಲ್ಲಿ ಹಂಚಿದರೆ ಜಾತಿ ಬೇದ ಮರೆತು ಎಲ್ಲಾರೂ ಖುಷಿಯಲ್ಲಿ ಜೀವನ ನಡೆಸಲು ಸಾಧ್ಯ ಸೌಹಾರ್ದ ಕ್ರಿಸ್ಮಸ್ ಉತ್ಸವ ದಲ್ಲಿ ಜಿಲ್ಲಾ ಧಿಕಾರಿ ದರ್ಶನ್ ಎಚ್. ವಿ ಕರೆ*

ಮಂಗಳೂರು: ಸಂತ ಮದರ್ ತೆರೆಸಾ ವಿಚಾರ ವೇದಿಕೆ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಸಹಯೋಗದಲ್ಲಿ ಕದ್ರಿ ಪಾರ್ಕಿನಲ್ಲಿ ಹಮ್ಮಿಕೊಂಡಿದ್ದ ಸೌಹಾರ್ದ ಕ್ರಿಸ್ಮಸ್ ಉತ್ಸವ ಅದ್ಧೂರಿಯಾಗಿ ನೆರವೇರಿತು. ಎರಡು ದಿನ ನಡೆದ ಸಂಭ್ರಮದಲ್ಲಿ ನಗರದ ಎಲ್ಲಾ ಜಾತಿ ಧರ್ಮದ ಜನರು ಉತ್ಸಾಹದಿಂದ ಭಾಗವಹಿಸಿ ಸೌಹಾರ್ದತೆ ಮೆರೆದರು.ಮುಖ್ಯ ಅತಿಥಿಯಾಗಿದ್ದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೌಹಾರ್ದ ಕ್ರಿಸ್ಮಸ್ ಉತ್ಸವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದನ್ನು ಶ್ಲಾಘಿಸಿದರು. ಎಲ್ಲರಿಗೂ ಖುಷಿಯನ್ನು ಹಂಚುವ ಕಾರ್ಯ ಪ್ರಶಂಸನೀಯವೆಂದರು. ಎಲ್ಲಾ ಸರ್ವ ಧರ್ಮ ದವರು ಖುಷಿ ಯನ್ನು ದೇಶದಲ್ಲಿ ಹಂಚಿ ದರೆ ಖುಷಿ ಯೂ ದೇಶದಲ್ಲಿ ಯಾವ ಜಾತಿ ಧರ್ಮ ಬೇದ ಭಾವ ವಿಲ್ಲದೆ ಎಲ್ಲರನ್ನೂ ಖುಷಿ ಯಾಗಿ ಇರುತ್ತೆ ನಾವೂ ಎಲ್ಲಾರೂ ಈ ಕಾರ್ಯಕ್ರಮ ದಿಂದ ಮನೆಗೆ ಹೋಗು ವಾಗ ಈ ಖುಷಿ ಯನ್ನು ನೆರೆ ಹೊರೆ ಯೊಡನೆ ಹಂಚೋಣ ಎಲ್ಲಾರೂ ಖುಷಿ ಯಿಂದ ಸೌಹಾರ್ದ ಯಿಂದ ಬಾಳೋಣ ಎಂದು ದ. ಕ ಜಿಲ್ಲಾಧಿ ಕಾರಿ ದರ್ಶನ್ ಎಲ್ಲರಿಗೂ ಕರೆ ನೀಡಿದರುಕಾರ್ಯಕ್ರಮದಲ್ಲಿ ಕ್ರಿಸ್ಮಸ್ ಸಂದೇಶ ನೀಡಿದ ಮಂಗಳೂರಿನ ಕಥೊಲಿಕ್ ಧರ್ಮಪ್ರಾಂತ್ಯದ ಬಿಶಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹ, ಯೇಸುಕ್ರಿಸ್ತರ ಜನನ ಜಗತ್ತಿಗೆ ಶಾಂತಿಯ ಸಂದೇಶ ನೀಡಿದೆ. ಎಲ್ಲರಿಗೂ ಶಾಂತಿ ಸಮಾಧಾನ ಬೇಕಿದೆ. ಕಷ್ಟದಲ್ಲಿರುವವರಿಗೆ ನೆರವು, ಸಾಂತ್ವನ ನೀಡುವುದು ಒಳ್ಳೆಯ ಕೈಂಕರ್ಯ. ದಕ್ಷಿಣ ಕನ್ನಡವು ಶಾಂತಿ ಸಾಮರಸ್ಯಕ್ಕೆ ಹೆಸರಾಗಿತ್ತು. ಪ್ರಸ್ತುತ ಜಿಲ್ಲಾಧಿಕಾರಿ, ಪೊಲೀಸ್ ಕಮಿಶನರ್ ಮತ್ತು ಎಸ್.ಪಿ.ಯವರು ಉತ್ತಮ ಸಮನ್ವಯದೊಂದಿಗೆ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ ಎಂದು ಪ್ರಶಂಶಿಸಿದರು.ಅಧ್ಯಕ್ಷ ರಾಯ್ ಕ್ಯಾಸ್ತೆಲಿನೊ, ನಾಡಿನಲ್ಲಿ ಸೌಹಾರ್ದತೆಯ ವಾತಾವರಣ ಮರಳಿದೆ, ಪ್ರಸ್ತುತ ಜಿಲ್ಲಾಡಳಿತದ ಮುಂಚೂಣಿಯಲ್ಲಿರುವ ಜಿಲ್ಲಾಧಿಕಾರಿ ಹಾಗೂ ಕಮಿಶನರ್ ಅವರ ನೇತೃತ್ವದಲ್ಲಿ ನಗರದಲ್ಲಿ ಭಯಮುಕ್ತ ವಾತಾವರಣ ನಿರ್ಮಾಣವಾಗಿದೆ ಎಂದರು. ಯೇಸುಕ್ರಿಸ್ತರು ಬೋಧಿಸಿದಂತೆ ನೆರೆಹೊರೆಯರನ್ನು ಪ್ರೀತಿಸುವುದರಿಂದ ಸಾಮರಸ್ಯದ ವಾತಾವರಣ ಏರ್ಪಡುತ್ತದೆ. ಮದರ ತೆರೆಸಾ ವಿಚಾರ ವೇದಿಕೆಯು 8 ವರ್ಷಗಳಿಂದ ಶಾಂತಿ, ಪ್ರೀತಿ, ಸೌಹಾರ್ದತೆಗಾಗಿ ಶ್ರಮಿಸುತ್ತಿದ್ದು, ಅದರ ಫಲಶೃತಿ ಎಂಬಂತೆ ಇಂದಿನ ಉತ್ಸವ ವಿಜೃಂಭಣೆಯಿಂದ ಜರಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಆನಂದ್ ಸೋನ್ಸ್ ಅಂತಾರಾಷ್ಟ್ರೀಯ ಕ್ರೀಡಾ ಪಟು ಮತ್ತು ಈ ಸಂದರ್ಭ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ನಿರ್ಮಿಸಿದ ಭರತನಾಟ್ಯ ಕಲಾವಿದೆ ರೆಮೊನಾ ಇವೆಟ್ ಪಿರೇರ ಅವರನ್ನು ಸನ್ಮಾನಿಸಲಾಯಿತು. ಭಾನುವಾರ ನಡೆದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕ್ಯಾರಲ್ ಸಿಂಗಿಂಗ್‍ನಲ್ಲಿ ಸಂತ ಆಗ್ನೆಸ್ ಪಿಯು ಕಾಲೇಜ್ ಪ್ರಥಮ, ಸಂತ ಅಲೋಶಿಯಸ್ ಕಾಲೇಜು ದ್ವಿತೀಯ, ಮದರ್ ತೆರೆಸಾ ಅಭಿಮಾನಿ ಬಳಗ ತೃತೀಯ ಸ್ಥಾನ ಪಡೆದರು. ನಕ್ಷತ್ರ ಸ್ಪರ್ಧೆಯಲ್ಲಿ ಪದುವಾ ಫ್ರೆಂಡ್ಸ್ ಕ್ಲಬ್ ಪ್ರಥಮ, ಸೋನಲ್ ಕಿಶೋರ್ ಲೋಬೊ ಪೆರ್ಮನ್ನೂರು ದ್ವಿತೀಯ, ರೊಬಿ ಮಿರಾಂದ ದೇರೆಬೈಲ ತೃತೀಯ ಸ್ಥಾನ ಗಳಿಸಿದರು. ಕೇಕ್ ಸ್ಪರ್ಧೆಯಲ್ಲಿ ಶಿರ್ಲಿ ರೇಗೊ ಪ್ರಥಮ, ಪ್ರಮೀಳ ಮೆಂಡೋನ್ಸ ದ್ವಿತೀಯ, ಸ್ನೇಹಾ ಕುಡ್ವ ತೃತೀಯ ಬಹುಮಾನ ಗಳಿಸಿದರು.ಸಾಂಸ್ಕೃತಿಕ ಕಾರ್ಯಕ್ರಮ ಜನರನ್ನು ಭರ್ಪೂರ ರಂಜಿಸಿತು. ರೆಮೋನ ಪಿರೇರಾ ತಂಡದಿಂದ ನೃತ್ಯ ಹಾಗೂ ರೂಪಕ ಪ್ರದರ್ಶನ ಜರಗಿತು. ಜೊಯೆಲ್ ಅತ್ತೂರ್ ಬಳಗದಿಂದ ರಸಮಂಜರಿ ಕಾರ್ಯಕ್ರಮ ಜನರನ್ನು ರೋಮಾಂಚಿತಗೊಳಿಸಿತು.ಮುಖ್ಯ ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಪಿ.ಆರ್.ಒ. ಫಾ. ಜೆ.ಬಿ. ಸಲ್ಡಾನ್ಹ.ಅರಣ್ಯಾಧಿಕಾರಿ ಅಂತೋಣಿ ಮರಿಯಪ್ಪ, ಜಂಗಲ್ ಲಾಡ್ಜಸ್ ರೆಸಾರ್ಟ್‍ನ ನಿರ್ದೇಶಕ ಕ್ಲಿಫರ್ಡ್ ಲೋಬೊ. ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರ್ವಹಿಸಿದರು. ಕಥೊಲಿಕ್ ಸಭಾ ಅಧ್ಯಕ್ಷ ಸಂತೋಷ್ ಡಿಸೋಜ ಧನ್ಯವಾದ ಸಮರ್ಪಿಸಿದರು.ಈ ಕಾರ್ಯಕ್ರಮ ದಲ್ಲಿ ಕಾರ್ಯಕ್ರಮ ಸಂಚಾಲಕರಾದ ಸ್ಟೇನಿ ಲೋಬೊ, ವಂದನಿಯ ಗುರು ಸುದೀಪ್ ಪೌಲ್,ವಿಲ್ಮಾ ಮೊಂತೆ ರೋ, ಸಮರ್ಥ್ ಭಟ್,ಸ್ಟ್ಯಾನ್ಲಿ ಬಂಟ್ವಾಳ್, ಡೊಲ್ಪಿ. ಡಿಸೋಜಾ, ಅರುಣ್ ಡಿಸೋಜಾ, ರೆಹಮಾನ್ ಕುಂಜಾತ್ತ ಬೈಲ್ ಜೇಮ್ಸ್ ಪ್ರವೀಣ್ ಮತ್ತು ಇನ್ನಿತರ ಸದಸ್ಯರ ಸಹಕರ ದಿಂದ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನಡೆಯಿತು

Share News
Exit mobile version