ಮಂಗಳೂರು: ಪ್ರಭು ಏಸುವಿನ ಜನನದ ಜುಬಿಲಿ ವರ್ಷದ ಪ್ರಯುಕ್ತ ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದ ಕಳವಾರು ಪೆಜಾರ್ ಸಂತ ಜೋಸಫರಿಗೆ ಸಮರ್ಪಿಸಿದ ಚರ್ಚಿನಲ್ಲಿ ಈ ಬಾರಿ 241 ನೇ ಚಾರಿತ್ರಿಕ ಪವಿತ್ರ ಶಿಲುಬೆಯ ಹಾದಿ ಏ.15 ರಂದು ನಡೆಯಲಿದೆ ಎಂದು ಚರ್ಚ್‌ನ ಧರ್ಮಗುರು ವಂ.ಲಾರೆನ್ಸ್ ರೊನಾಲ್ಡ್ ಡಿಸೋಜ ಅವರು ತಿಳಿಸಿದರು.
ಈ ಬಗ್ಗೆ ನಗರದ ಪತ್ರಿಕಾಭವನದಲ್ಲಿ ಮಾಹಿತಿ ನೀಡಿದ ಅವರು, 240 ವರ್ಷಗಳ ಹಿಂದೆ ಬೂದಿ ಬುಧವಾರ (ash wednesday) ದಂದು ಪ್ರಾರಂಭಗೊಂಡು ನಿರಂತರವಾಗಿ ನಡೆಯುತ್ತಾ ಬಂದ ಪವಿತ್ರ ಶಿಲುಬೆ ಯಾತ್ರೆಯನ್ನು ಇದೇ ಬರುವ ತಾರೀಕು ಏಪ್ರಿಲ್ 15ರಂದು ಮಂಗಳವಾರ ನಡೆಸಲಿದ್ದೇವೆ.
241ನೇ ವರ್ಷದ ಚಾರಿತ್ರಿಕ ಶಿಲುಬೆಯ ಹಾದಿಯು “ಪವಿತ್ರ ಶಿಲುಬೆಯ ನೆರಳಲ್ಲಿ ಭರವಸೆಯ ಪಯಣಿಗರು” ಎಂಬ ಧ್ಯೇಯ ವಾಕ್ಯದೊಂದಿಗೆ” ನಡೆಯಲಿದೆ.
ಆ ದಿನ ಬೆಳಗ್ಗೆ ಗಂಟೆ 9 ರಿಂದ ಸಂಜೆ 3ರ ವರೆಗೆ ದೇವರ ವಾಕ್ಯದ ಧ್ಯಾನಕೂಟ, ಸ್ತುತಿ ಆರಾಧನೆ ನಡೆಯಲಿದೆ. ಇದನ್ನು ಕಾರಿಸ್ಮಾತಿಕ್ ಸಂಚಾಲನದ ಸದಸ್ಯರು ನಡೆಸಿಕೊಡಲಿದ್ದಾರೆ.
ಸಂಜೆ 3 ಗಂಟೆಯಿಂದ ಕರುಣೆಯ ಜಪಸರ ಪ್ರಾರ್ಥನೆ ಹಾಗೂ 3.30 ಗಂಟೆಗೆ ಪರಮ ಪ್ರಸಾದದ ಆರಾಧನೆ ನಡೆಯಲಿದೆ. ಇದನ್ನು ಕೊರ್ಡೆಲ್ ಚರ್ಚ್‌ನ ಧರ್ಮ ಗುರು ವಂ. ಕ್ಲಿಫರ್ಡ್ ಫೆರ್ನಾಂಡಿಸ್, ಕುಲಶೇಖರ ಇವರು ನಡೆಸಿಕೊಡಲಿದ್ದಾರೆ.
ಸಂಜೆ 5 ಗಂಟೆಗೆ ಸಾಂಭ್ರಮಿಕ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂ. ಡಾ. ಪೀಟರ್ ಪಾವ್ಲ್ ಸಲ್ದಾನರವರು ನೆರವೇರಿಸಲಿದ್ದಾರೆ. ತದನಂತರ ನಡೆಯುವ ಚಾರಿತ್ರಿಕ ಶಿಲುಬೆಯ ಹಾದಿಯನ್ನು ಕಥೋಲಿಕ ಉಡುಪಿ ಧರ್ಮ ಪ್ರಾಂತ್ಯದ ತೊಟ್ಟಂ ಚರ್ಚಿನ ಧರ್ಮಗುರು ಹಾಗೂ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ ಡೆನಿಸ್ ಡೆಸಾರವರು ಪ್ರಭೋದನೆಯನ್ನು ಭೋದಿಸುವರು.
ರಾತ್ರಿ 9 ಗಂಟೆಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದ್ದು,. ನಂತರ ಭಕ್ತಾಧಿಗಳಿಗೆ ಬಸ್ಸಿನ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವಲಯದ ಶ್ರೇಷ್ಠ ಧರ್ಮಗುರು ವಂ. ಫಾ. ರೂಡಾಲ್ಫ್ ಡೆಸಾ, ಉಪಾಧ್ಯಕ್ಷ ಅನಿಲ್ ಪೆರಿಸ್, ಕಾರ್ಯದರ್ಶಿ ಫಿಲೋಮಿನಾ ಫೆರ್ನಾಂಡೀಸ್, ಮಾಧ್ಯಮ ಸಲಹೆಗಾರ ಎಲಿಯಾಸ್ ಫೆರ್ನಾಂಡಿಸ್, , ವಲಯ ಪ್ರತಿನಿಧಿ ಪ್ರಮೀಳಾ ಪೇರಿಸ್, ವಾಲ್ಟರ್ ಮೊಂತೇರೊ, ಆಲ್ವಿನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.