canaratvnews

*ಮಂಗಳೂರು ಕದ್ರಿ ಪಾರ್ಕ್‌ನಲ್ಲಿ :ಡಿ.13 ಮತ್ತು14 ಸೌಹಾರ್ದಕ್ರಿಸ್ಮಸ್ಉತ್ಸವ– ಹಬ್ಬದ ಸಂಭ್ರಮದ*

ಮಂಗಳೂರು, ಡಿ.09 : ಸಂತ ಮದರ್ ತೆರೆಸಾ ವಿಚಾರ ವೇದಿಕೆ, ಮಂಗಳೂರು ಮತ್ತು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಂಯುಕ್ತ ಆಶ್ರಯದಲ್ಲಿ, ಅತ್ಯಂತ ನಿರೀಕ್ಷಿತ “ಸೌಹಾರ್ದ ಕ್ರಿಸ್ಮಸ್ ಉತ್ಸವ 2025” ವನ್ನು ಘೋಷಿಸಲು ಸಂತೋಷಪಡುತ್ತೇವೆ. ಕ್ರಿಸ್ಮಸ್ ಹಬ್ಬದ ನಿಜವಾದ ಸಂದೇಶವಾದ ಶಾಂತಿ, ಸೌಹಾರ್ದ ಮತ್ತು ಸಹಭಾಗಿತ್ವವನ್ನು ಉತ್ತೇಜಿಸುವ ಈ ಸಂಭ್ರಮಭರಿತ ಉತ್ಸವ ಡಿಸೆಂಬರ್ 13 ಮತ್ತು 14 ರಂದು, ಮಂಗಳೂರು ಕದ್ರಿ ಪಾರ್ಕ್‌ನಲ್ಲಿ, ಮಧ್ಯಾಹ್ನ 2:30ರಿಂದ ರಾತ್ರಿ 9:30ರವರೆಗೆ ನಡೆಯಲಿದೆ.
ಈ ಉತ್ಸವವು ಎಲ್ಲಾ ಧರ್ಮಗಳ, ಸಮುದಾಯಗಳ ಮತ್ತು ವಯಸ್ಸಿನ ಜನರನ್ನು ಒಗ್ಗೂಡಿಸಿ, ಮಾನವೀಯತೆ, ಸ್ನೇಹ ಮತ್ತು ಹಬ್ಬದ ಸಂತೋಷವನ್ನು ಹಂಚಿಕೊಳ್ಳುವ ವೇದಿಕೆಯಾಗಿ ರೂಪುಗೊಂಡಿದೆ. ಎಂದು ಮದರ್ ತೆರೇಸಾ ವಿಚಾರ ವೇದಿಕೆ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು

ಉತ್ಸವದ ಪ್ರಮುಖ ಆಕರ್ಷಣೆಗಳು. ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳು, ಯುವಕರು ಮತ್ತು ಕುಟುಂಬಗಳಲ್ಲಿನ ಪ್ರತಿಭೆಯನ್ನು ಉತ್ತೇಜಿಸಲು ಹಲವಾರು ಮನರಂಜನೀಯ ಸ್ಪರ್ಧೆಗಳು ಆಯೋಜಿಸಲಾಗಿದೆ:

Share News
Exit mobile version