• Home  
  • ಅಬುಧಾಬಿ: ಬಿಗ್ ಟಿಕೆಟ್ ಲೈವ್ ಡ್ರಾದಲ್ಲಿ 45 ಕೋಟಿ ರೂ. ಗೆದ್ದ ಉಡುಪಿಯ ಶಾಂತನು ಶೆಟ್ಟಿಗಾರ್
- DAKSHINA KANNADA - HOME - INETRNATIONAL - LATEST NEWS

ಅಬುಧಾಬಿ: ಬಿಗ್ ಟಿಕೆಟ್ ಲೈವ್ ಡ್ರಾದಲ್ಲಿ 45 ಕೋಟಿ ರೂ. ಗೆದ್ದ ಉಡುಪಿಯ ಶಾಂತನು ಶೆಟ್ಟಿಗಾರ್

ಅಬುಧಾಬಿ: ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಲೈವ್ ಡ್ರಾದಲ್ಲಿ ಉಡುಪಿಯ ಉದ್ಯಾವರದ ವ್ಯಕ್ತಿಯೊಬ್ಬರು 20 ಮಿಲಿಯನ್ ದಿರ್ಹಮ್ (ಸುಮಾರು 45 ಕೋಟಿ ರೂಪಾಯಿಗೂ ಅಧಿಕ) ಮೊತ್ತದ ಬೃಹತ್‌ ಬಹುಮಾನವನ್ನು ಗೆದ್ದಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಅರೆಬಿಯನ್‌ ಡೈಲಿಯು ಸುದ್ದಿ ಪ್ರಸಾರ ಮಾಡಿದೆ. ಉಡುಪಿ ಜಿಲ್ಲೆಯ ಉದ್ಯಾವರ ಮೂಲದ ಅನಿವಾಸಿ ಭಾರತೀಯ ಶಾಂತನು ಶೆಟ್ಟಿಗಾರ್ ಈ ಲಾಟರಿ ಗೆದ್ದಿದ್ದಾರೆ. ಪ್ರಸ್ತುತ ಓಮನ್‌ನ ರಿಟೇಲ್ ವಲಯದಲ್ಲಿ ಕೆಲಸ ಮಾಡುತ್ತಿರುವ ಇವರು ಖರೀದಿಸಿದ್ದ 305810 ಸಂಖ್ಯೆಯ ಟಿಕೆಟ್‌ಗೆ ‘ಸರಣಿ 283’ರ ಈ […]

Share News

ಅಬುಧಾಬಿ: ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಲೈವ್ ಡ್ರಾದಲ್ಲಿ ಉಡುಪಿಯ ಉದ್ಯಾವರದ ವ್ಯಕ್ತಿಯೊಬ್ಬರು 20 ಮಿಲಿಯನ್ ದಿರ್ಹಮ್ (ಸುಮಾರು 45 ಕೋಟಿ ರೂಪಾಯಿಗೂ ಅಧಿಕ) ಮೊತ್ತದ ಬೃಹತ್‌ ಬಹುಮಾನವನ್ನು ಗೆದ್ದಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಅರೆಬಿಯನ್‌ ಡೈಲಿಯು ಸುದ್ದಿ ಪ್ರಸಾರ ಮಾಡಿದೆ.


ಉಡುಪಿ ಜಿಲ್ಲೆಯ ಉದ್ಯಾವರ ಮೂಲದ ಅನಿವಾಸಿ ಭಾರತೀಯ ಶಾಂತನು ಶೆಟ್ಟಿಗಾರ್ ಈ ಲಾಟರಿ ಗೆದ್ದಿದ್ದಾರೆ. ಪ್ರಸ್ತುತ ಓಮನ್‌ನ ರಿಟೇಲ್ ವಲಯದಲ್ಲಿ ಕೆಲಸ ಮಾಡುತ್ತಿರುವ ಇವರು ಖರೀದಿಸಿದ್ದ 305810 ಸಂಖ್ಯೆಯ ಟಿಕೆಟ್‌ಗೆ ‘ಸರಣಿ 283’ರ ಈ ಬೃಹತ್ ಮೊತ್ತ ಒಲಿದಿದೆ. ಈ ಅದೃಷ್ಟದ ಸುದ್ದಿಯನ್ನು ಅವರಿಗೆ ಅನಿರೀಕ್ಷಿತ ಫೋನ್ ಕರೆ ಮೂಲಕ ತಿಳಿಸಲಾಯಿತು.

ವಿಶ್ವದಾದ್ಯಂತ ಕುತೂಹಲ ಕೆರಳಿಸಿದ್ದ ಈ ಲೈವ್ ಡ್ರಾವನ್ನು ಸಾವಿರಾರು ಜನರು ವೀಕ್ಷಿಸುತ್ತಿದ್ದರು. ಬಹುಮಾನ ಗೆದ್ದ ಸುದ್ದಿ ತಿಳಿಯುತ್ತಿದ್ದಂತೆ ಸಂಘಟಕರೊಂದಿಗೆ ಮಾತನಾಡಿದ ಶಂತನು ಶೆಟ್ಟಿಗಾರ್, “ಈ ಗೆಲುವಿನಿಂದ ಅತೀವ ಸಂತೋಷವಾಗಿದೆ. ಆದರೆ ಈ ಹಣವನ್ನು ಏನು ಮಾಡಬೇಕೆಂದು ಇನ್ನೂ ನಿರ್ಧರಿಸಿಲ್ಲ” ಎಂದು ತಿಳಿಸಿದರು.

ಅಲ್ಲದೆ, ಈ ಟಿಕೆಟ್ ಅನ್ನು ತಾವು ಒಬ್ಬರೇ ಖರೀದಿಸಿದ್ದಲ್ಲದೆ, ಸ್ನೇಹಿತನೊಬ್ಬನ ಜೊತೆಗೂಡಿ ಖರೀದಿಸಿದ್ದಾಗಿ ಅವರು ತಿಳಿಸಿದ್ದಾರೆ. ನಿಯಮದಂತೆ ಬಹುಮಾನದ ಮೊತ್ತವನ್ನು ಇಬ್ಬರೂ ಹಂಚಿಕೊಳ್ಳಲಿದ್ದಾರೆ. ಶಂತನು ಶೆಟ್ಟಿಗಾ‌ರ್ ಅವರು ಈ ಬೃಹತ್‌ ಮೊತ್ತದ ಮೂಲಕ ರಾತ್ರೋರಾತ್ರಿ ಬಿಗ್ ಟಿಕೆಟ್ ಇತಿಹಾಸದ ಕೋಟ್ಯಧಿಪತಿ ಆಗಿ ಹೊರಹೊಮ್ಮಿದ್ದಾರೆ.

Share News