• Home  
  • ಬೆಳ್ತಂಗಡಿ: ಅಪ್ರಾಪ್ತೆಯ ಮೇಲೆ ಇಬ್ಬರು ಅಪ್ರಾಪ್ತರಿಂದ ಅತ್ಯಾಚಾರ- FIR
- DAKSHINA KANNADA - HOME - LATEST NEWS

ಬೆಳ್ತಂಗಡಿ: ಅಪ್ರಾಪ್ತೆಯ ಮೇಲೆ ಇಬ್ಬರು ಅಪ್ರಾಪ್ತರಿಂದ ಅತ್ಯಾಚಾರ- FIR

ಬೆಳ್ತಂಗಡಿ: ಇಲ್ಲಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆಯ ಮೇಲೆ ಇಬ್ಬರು ಅಪ್ರಾಪ್ತರು ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಈ ಬಗ್ಗೆ ಅಪ್ರಾಪ್ತೆಯ ತಂದೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ವಿವರ 2023ರಲ್ಲಿ ಬೆಳ್ತಂಗಡಿಯಲ್ಲಿರುವ ಡ್ಯಾಂ ಒಂದರ ಬಳಿಯಿರುವ ಕಟ್ಟಡಕ್ಕೆ ಅಪ್ರಾಪ್ತ ಬಾಲಕಿಯನ್ನು ಆಕೆಯ ಸಂಬಂಧಿ ಅಪ್ರಾಪ್ತ ಹಾಗೂ ಆತನ ಸ್ನೇಹಿತ ಕರೆದುಕೊಂಡು ಹೋಗಿದ್ದರು. ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಾಲಕಿಗೆ ಜೀವಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ […]

Share News

ಬೆಳ್ತಂಗಡಿ: ಇಲ್ಲಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆಯ ಮೇಲೆ ಇಬ್ಬರು ಅಪ್ರಾಪ್ತರು ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಈ ಬಗ್ಗೆ ಅಪ್ರಾಪ್ತೆಯ ತಂದೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣದ ವಿವರ

2023ರಲ್ಲಿ ಬೆಳ್ತಂಗಡಿಯಲ್ಲಿರುವ ಡ್ಯಾಂ ಒಂದರ ಬಳಿಯಿರುವ ಕಟ್ಟಡಕ್ಕೆ ಅಪ್ರಾಪ್ತ ಬಾಲಕಿಯನ್ನು ಆಕೆಯ ಸಂಬಂಧಿ ಅಪ್ರಾಪ್ತ ಹಾಗೂ ಆತನ ಸ್ನೇಹಿತ ಕರೆದುಕೊಂಡು ಹೋಗಿದ್ದರು. ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಾಲಕಿಗೆ ಜೀವಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಅಪ್ರಾಪ್ತೆಯ ತಂದೆಗೆ ತಿಳಿದು ಬರುತ್ತದೆ.

ಈ ಬಗ್ಗೆ ಮಗಳಲ್ಲಿ ವಿಚಾರಿಸಿದಾಗ ಈ ವಿಷಯವನ್ನು ಬಾಯ್ಬಿಟ್ಟಿದ್ದಾಳೆ. ತಕ್ಷಣ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವೇಣೂರು ಪೊಲೀಸ್ ಠಾಣೆಯಲ್ಲಿ ಕಲಂ: 376, 376AB, 376DB, 506 ಜೊತೆಗೆ 34 ಐ.ಪಿ.ಸಿ ಮತ್ತು ಕಲಂ: 6 ಪೋಕ್ಸೋ ಕಾಯಿದೆ- 2012, ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share News