canaratvnews

ಪುಂಜಾಲಕಟ್ಟೆ ನಿವಾಸಿ ಕೃಷ್ಣಪ್ಪ ನಲಿಕೆ ಕ್ಯಾನ್ಸರ್ ನಿಂದ ಬಳಲುತ್ತಿದ್ದು  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಟುಂಬಕ್ಕೆ  ದಾನಿಗಳು ನೀಡಿರುವ 9,772ರೂ.ವನ್ನು ಅವರ ಕುಟುಂಬದವರಿಗೆ ಹಸ್ತಾಂತರ

ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ನಿವಾಸಿ ಕೃಷ್ಣಪ್ಪ ನಲಿಕೆ ಎಂಬುವವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು ದೇರಳಕಟ್ಟೆ ಕೆ. ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿಸಿ ಪಡೆಯುತ್ತಿರುವ ಆಸ್ಪತ್ರೆ ಸಂಘಟನೆ ಸ್ಥಾಪಕಧ್ಯಕ್ಷನಾದ ನಾನು ಬಿ. ಕೆ. ಸೇಸಪ್ಪ ಬೆದ್ರಕಾಡು, ಬಿ. ಕೆ. ಕೃಷ್ಣಪ್ಪ ಪಂಡಿತ್ ಬೆದ್ರಕಾಡು, ರಮೇಶ್ ಅಜ್ಜಿನಡ್ಕ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಲಾಗಿ ವೈದ್ಯರೊಂದಿಗೆ ಚರ್ಚಿಸಿ ಇವರಿಗೆ ತುರ್ತಾಗಿ 1,50,000 ( ಒಂದು ಲಕ್ಷದ ಐವತ್ತು ಸಾವಿರ ) ಹಣದ ಅವಶ್ಯಕತೆಯಿದ್ದು ಮುಂದಿನ ಸರ್ಜರಿಯು ಆಯುಷ್ಮಾನ್ ಭಾರತ್ ಇದರಲ್ಲಿ ನಡೆಸಲಾಗುವುದು ಎಂದು ವೈದ್ಯರು ತಿಳಿಸಿರುತ್ತಾರೆ. ನೊಂದ ಬಡ ಕುಟುಂಬಕ್ಕೆ ಧನಸಹಾಯದ ಅಗತ್ಯವಿರುವುದನ್ನು ನಿನ್ನೆ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ ಪ್ರಕಾರ ದಾನಿಗಳು ನೀಡಿರುವ ಒಟ್ಟು 9,772 ರೂ.ವನ್ನು ದಿನಾಂಕ 21/5/2025 ರಂದು ಸ್ಥಾಪಕ ಅಧ್ಯಕ್ಷರು ಆಸ್ಪತ್ರೆಗೆ ಭೇಟಿ ನೀಡಿ ಅವರ ಕುಟುಂಬದವರಿಗೆ ನೀಡಿದರು

. ಈ ಸಮಯದಲ್ಲಿ ಲೋಕಯ್ಯ ಶಿಶಿಲ, ರಫೀಕ್ ಬೆಳ್ತಂಗಡಿ, ಉದಯ್ ಮಂಗಳೂರು, ಗಣೇಶ್ ಸೀಗೆಬಲ್ಲೆ, ನಾಗೇಶ್ ಮುಡಿಪು ಉಪಸ್ಥಿತರಿದ್ದರು. ಇದಕ್ಕಿಂತ ಮುಂಚೆ ನಮ್ಮನ್ನಗಲಿದ ಹಿರಿಯ ದಲಿತ ಮುಖಂಡರಾದ ಜನಾರ್ಧನ ಚಂಡ್ತಿಮಾರ್ ಅವರ ಸಾರ್ವಜನಿಕ ಅಂತಿಮ ದರ್ಶನದಲ್ಲಿ ಭಾಗಿಯಾಗಿ ಅನಂತರ ಸಂಘದ ಹಿರಿಯ ಸದಸ್ಯೆ ರೇಣುಕಾ ಉಳ್ಳಾಲ ಇವರ ತಾಯಿ ಅನಾರೋಗ್ಯದಿಂದ ಯೆನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರ ಯೋಗ ಕ್ಷೇಮ ಸ್ಥಾಪಕ ಅಧ್ಯಕ್ಷರು ವಿಚಾರಿಸಿದರು. ಸಹಾಯ ಧನ ಒದಗಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.. ಚಂದ್ರಶೇಖರ್ ಯು. ವಿಟ್ಲ..ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Share News
Exit mobile version