Site icon canaratvnews

ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿ.ಜೆ.ಪಿ ಬದುಕು – ಬರಹ: ರಾಷ್ಟ್ರ‍ೀಯ ವಿಚಾರ ಸಂಕಿರಣ

ಮಂಗಳೂರು: ಖ್ಯಾತ ಕೊಂಕಣಿ ಸಾಹಿತಿ ವಿ.ಜೆ.ಪಿ. ಸಲ್ಡಾನ್ಹಾ ಜನ್ಮಶತಾಬ್ದಿಯ ಪ್ರಯುಕ್ತ ಸಾಹಿತ್ಯ ಅಕಾಡೆಮಿ, ಹೊಸದೆಹಲಿ, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲ್ಯದ ಕೊಂಕಣಿ ಸಂಸ್ಥೆ – ಮೈಕಲ್ ಡಿ ಸೊಜಾ ವಿಶನ್ ಕೊಂಕಣಿ ಸಹಯೋಗದೊಂದಿಗೆ ನಗರದ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಹಾಲ್‌ನಲ್ಲಿ ವಿ.ಜೆ.ಪಿ ಬದುಕು – ಬರಹದ ಬಗ್ಗೆ ಆಗಸ್ಟ್ 13, 14 ರಂದು ಎರಡು ದಿನಗಳ ರಾಷ್ಟ್ರ‍ೀಯ ವಿಚಾರ ಸಂಕಿರಣ ಆಯೋಜಿಸಿಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆ ಆ.12 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಇದೇ ವೇಳೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರದರ್ಶನ ಮತ್ತು ರಿಯಾಯತಿ ದರದಲ್ಲಿ ಮಾರಾಟ ನಡೆಯಲಿದೆ.

ಇದರ ಸಲುವಾಗಿ ಸಹೋದಯ ಸಭಾಂಗಣದಲ್ಲಿ ಆಗಸ್ಟ್ 12,13,14 ರಂದು ಮೂರು ದಿನ ಸಾಹಿತ್ಯ ಅಕಾಡೆಮಿ ವತಿಯಿಂದ ಪುಸ್ತಕ ಪ್ರದರ್ಶನ ಮತ್ತು ರಿಯಾಯತಿ ದರದಲ್ಲಿ ಪುಸ್ತಕ ಮಾರಾಟ ಏರ್ಪಡಿಸಲಾಗಿದೆ. ಕನ್ನಡ, ಕೊಂಕಣಿ, ಮಲಯಾಳಂ, ಮರಾಠಿ, ಇಂಗ್ಲಿಷ್ ಮತ್ತು ಹಿಂದೀ ಭಾಷೆಯ ಪುಸ್ತಕಗಳ ಮೇಲೆ ವಿಶೇಷ ರಿಯಾಯತಿ ಲಭ್ಯ ವಿದ್ದು, ಶಾಲಾ – ಕಾಲೇಜು ವಿದ್ಯಾರ್ಥಿಗಳು, ಸಂಘ – ಸಂಸ್ಥೆ, ಶಿಕ್ಷಣಸಂಸ್ಥೆಯ ಗ್ರಂಥಾಲಯಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Share News
Exit mobile version