canaratvnews

ಬೆಳ್ತಂಗಡಿ: ಶಾಲೆಗೆ ಹೋಗುತ್ತಿದ್ದ ಬಾಲಕಿಯ ಕಿಡ್ನಾಪ್ ಯತ್ನ

ಬೆಳ್ತಂಗಡಿ: ಶಾಲೆಗೆ ತೆರಳುತ್ತಿದ್ದ  ಬಾಲಕಿಯೋರ್ವಳನ್ನು ಕಿಡ್ನಾಪ್ ಮಾಡಲು ವಿಫಲ ಯತ್ನ ನಡೆಸಿ ಬಾಲಕಿಗೆ ಚಾಕುವಿನಿಂದ ಇರಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ

ಫೆ.9 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೆಕಟ್ಟೆ ಬಳಿ ಬೆಳಗ್ಗೆ 8:30 ಗಂಟೆಗೆ ತನ್ನ ತಂದೆಯ ಜೊತೆ ಶಾಲೆಗೆ ಸ್ಕೂಟಿಯಲ್ಲಿ ‌ತೆರಳಿ ಬಸ್ ನಿಲ್ದಾಣದಿಂದ ಬಸ್ ಗಾಗಿ ಕಾಯುತ್ತಿದ್ದ ವೇಳೆ ತನ್ನ ಮನೆಯ 300 ಮೀಟರ್ ದೂರದಲ್ಲಿ, ಮಾರುತಿ ಓಮ್ನಿ ವಾಹನದಲ್ಲಿ ಬಂದ ಮೂವರು ಮುಖ ಮುಚ್ಚಿಕೊಂಡಿದ್ದ ವ್ಯಕ್ತಿಗಳು ಆಕೆಯನ್ನು ತಡೆದು ಅಪಹರಿಸಲು ಪ್ರಯತ್ನಿಸಿದ್ದಾರೆ.

ಈ ವೇಳೆ ಅವಳು ಪ್ರತಿರೋಧಿಸಿದಾಗ, ಅವರು ಚಾಕುವಿನಿಂದ ಅವಳ ಎಡ ಕೈಗೆ ನಾಲ್ಕು ಬಾರಿ ಇರಿದಿರುತ್ತಾರೆ ಗಾಯಗಳು ಮೇಲ್ಮೈಯಾಗಿದ್ದು, ಈ ಬಗ್ಗೆ ಬಾಲಕಿಯು ತನ್ನ ಪೋಷಕರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ  ಬಾಲಕಿ ಗಾಯಗೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share News
Exit mobile version