canaratvnews

2026ನೇ ಸಾಲಿನ ‘ಸಂದೇಶ ಪ್ರಶಸ್ತಿ’: ಸಾಹಿತಿ ಡಾ.ನಾ.ಮೊಗಸಾಲೆ ಸೇರಿ 7 ಮಂದಿಗೆ ಗೌರವ

ಮಂಗಳೂರು: ಸಾಹಿತಿ ಡಾ.ನಾ.ಮೊಗಸಾಲೆ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಸೇರಿದಂತೆ ವಿವಿಧ ಕ್ಷೇತ್ರಗಳ ಏಳು ಸಾಧಕರು ಹಾಗೂ ಒಂದು ಸಂಸ್ಥೆಗೆ 2026ನೇ ಸಾಲಿನ ‘ಸಂದೇಶ ಪ್ರಶಸ್ತಿ’ ಘೋಷಿಸಲಾಗಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಯ್ಕೆಸಮಿತಿ ಸದಸ್ಯೆ ಕನ್ಸೆಪ್ಟಾ ಫರ್ನಾಂಡಿಸ್, ‘ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ನೀಡುವ ಪ್ರಶಸ್ತಿ ತಲಾ ₹25 ಸಾವಿರ ನಗದು ಒಳಗೊಂಡಿದೆ’ ಎಂದರು.

ಪ್ರಶಸ್ತಿ ಪುರಸ್ಕೃತರು: ಡಾ.ನಾ.ಮೊಗಸಾಲೆ (ಕನ್ನಡ ಸಾಹಿತ್ಯ) ಪ್ಯಾಟ್ರಿಕ್ ಕಾಮಿಲ್‌ ಮೋರಸ್ (ಕೊಂಕಣಿ ಸಾಹಿತ್ಯ), ಇಂದಿರಾ ಹೆಗ್ಗಡೆ (ತುಳು ಸಾಹಿತ್ಯ) ತುಂಗರೇಣುಕಾ (ಮಾಧ್ಯಮ) ಸೈಮನ್ ಪಾಯ್ಸ್ (ಕೊಂಕಣಿ ಸಂಗೀತ) ಶ್ರೀನಿವಾಸ ಜಿ. ಕಪ್ಪಣ್ಣ (ಕಲೆ) ದತ್ತಾತ್ರೇಯ ಅರಳಿಕಟ್ಟೆ (ಶಿಕ್ಷಣ), ನವಜೀವನ ಅಂಗವಿಕಲರ ಪುನರ್ವಸತಿ ಕೇಂದ್ರ (ವಿಶೇಷ ಪ್ರಶಸ್ತಿ).

 

‘ಜ.21ರಂದು ಸಂಜೆ 5.30ಕ್ಕೆ ಇಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂಸ್ಥೆಯ ಅಧ್ಯಕ್ಷ ಬಳ್ಳಾರಿಯ ಬಿಷಪ್ ಹೆನ್ರಿ ಡಿಸೋಜ ಅಧ್ಯಕ್ಷತೆ ವಹಿಸುವರು. ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು’ ಎಂದು ಪ್ರತಿಷ್ಠಾನದ ಟ್ರಸ್ಟಿ ರಾಯ್ ಕ್ಯಾಸ್ತಲಿನೊ ಅವರು ತಿಳಿಸಿದರು.

ಪ್ರತಿಷ್ಠಾನದ ನಿರ್ದೇಶಕ ಫಾ. ಸುದೀಪ್ ಪಾಲ್, ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ರೂಪಕಲಾ ಆಳ್ವ, ಬಿ.ಎ. ಮೊಹಮ್ಮದ್ ಹನೀಫ್‌ ಉಪಸ್ಥಿತರಿದ್ದರು.

Share News
Exit mobile version