• Home  
  • ರೋಹನ್ ಕಾರ್ಪೊರೇಶನ್‌ನ Rohan Ethosಗೆ ಎ. 19 ರಂದು ಭೂಮಿಪೂಜೆ
- DAKSHINA KANNADA - LATEST NEWS

ರೋಹನ್ ಕಾರ್ಪೊರೇಶನ್‌ನ Rohan Ethosಗೆ ಎ. 19 ರಂದು ಭೂಮಿಪೂಜೆ

ಮಂಗಳೂರು: ಅತ್ಯುತ್ತಮ ಗುಣಮಟ್ಟ ಮತ್ತು ಸೇವಾ ಬದ್ಧತೆಯೊಂದಿಗೆ ಕಳೆದ 32 ವರ್ಷಗಳಿಂದ ಮಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿಸುವ ಪ್ರತಿಷ್ಠಿತ ರೋಹನ್ ಕಾರ್ಪೊರೇಶನ್ ಸಂಸ್ಥೆಯ ನೂತನ ಯೋಜನೆ ‘ರೋಹನ್ ಇಥೋಸ್’ ಇದರ ಭೂಮಿ ಪೂಜೆಯು ಏ. 19ರಂದು ಸಂಜೆ 5 ಗಂಟೆಗೆ ನಗರದ ಕಂಕನಾಡಿಯ ಫಾದರ್ ಮುಲ್ಲರ್ ಬಳಿ ನಡೆಯಲಿದೆ.

ಈ ಯೋಜನೆ ವಿಶಿಷ್ಟ ಶೈಲಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದು ಐಶಾರಾಮಿ ಹಾಗೂ ಆಧುನಿಕ ಸೌಕರ್ಯಗಳನ್ನು ಒಳಗೊಂಡಿದೆ. ಈ ಯೋಜನೆಯು 15 ಮಹಡಿಗಳನ್ನು ಹೊಂದಿದ್ದು, ಪ್ರತಿ ಮಹಡಿಯಲ್ಲಿ 1640 ರಿಂದ 2025 ಚದರ ಅಡಿಗಳ 3 ಬಿಎಚ್ಕೆಯ ಮತ್ತು 2515 ರಿಂದ 2975 ಚದರ ಅಡಿಗಳ 4 ಬಿಎಚ್ಕೆಯ ಎರಡು ಫ್ಲ್ಯಾಟ್ ಗಳಿದ್ದು, ಒಟ್ಟು 28 ಅಪಾರ್ಟ್’ಮೆಂಟ್’ಗಳಿರಲಿವೆ.

ರೋಹನ್ ಇಥೋಸ್ ವಿಶ್ವ ದರ್ಜೆಯ ಸೌಲಭ್ಯಗಳೊಂದಿಗೆ ಇನ್ಫಿನಿಟಿ ಸ್ವಿಮ್ಮಿಂಗ್ ಫೂಲ್, ಆಧುನಿಕ ಜಿಮ್, ಇಂಡೋರ್ಗೇಮ್ಸ್, ಯೋಗಾ ರೂಮ್, ಮಕ್ಕಳ ಆಟದ ವಲಯ ಮತ್ತು ಬಹು ಉಪಯೋಗಿ ಸಭಾಂಗಣವನ್ನು ಹೊಂದಿದೆ. ತಳ ಮತ್ತು ಕೆಳ ಅಂತಸ್ತುಗಳಲ್ಲಿ ವಿಶಾಲ ಪಾರ್ಕಿಂಗ್ ಸೌಲಭ್ಯವಿದೆ.

ಅಪಾರ್ಟ್’ಮೆಂಟ್’ಗಳು ವಾಸ್ತು ಪ್ರಕಾರವಾಗಿದ್ದು ಸಿಸಿ ಕೆಮರಾ, ಸ್ವಯಂಚಾಲಿತ ಲಿಫ್ಟ್, ಜನರೇಟರ್ ಮತ್ತು ಇಲೆಕ್ಟ್ರಿಕ್  ಕಾರ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.

ಆಸ್ಪತ್ರೆಗಳು, ಪೂಜಾ ಸ್ಥಳಗಳು, ರೈಲ್ವೆ ಸ್ಟೇಶನ್, ಸೂಪರ್ ಮಾರ್ಕೆಟ್, ಸಾರ್ವಜನಿಕ ಉದ್ಯಾನ ಮತ್ತು ಶಿಕ್ಷಣ ಸಂಸ್ಥೆಗಳು ಈ ಯೋಜನೆಯ ಸಮೀಪದಲ್ಲೇ ಇವೆ.

ರೋಹನ್ ಕಾರ್ಪೊರೇಶನ್ ಮಂಗಳೂರಿನಲ್ಲಿ ಐಶಾರಾಮಿ ಅಪಾರ್ಟ್’ಮೆಂಟ್’ಗಳನ್ನು ಗ್ರಾಹಕರಿಗೆ ನೀಡುವುದರಲ್ಲಿ ಮುಂಚೂಣಿಯಲ್ಲಿದೆ. ರೋಹನ್ ಇಥೋಸ್ ಯೋಜನೆ ಹೊಸ ಟ್ರೆಂಡ್, ಗುಣಮಟ್ಟ ಮತ್ತು ಗ್ರಾಹಕರ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣಗೊಳ್ಳುತ್ತಿದೆ.

ಮೂರು ದಶಕಗಳಿಗೂ ಹೆಚ್ಚು ಕಾಲದ ಉನ್ನತ ಪರಂಪರೆಯನ್ನು ಹೊಂದಿರುವ ರೋಹನ್ ಕಾರ್ಪೊರೇಶನ್ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರನ್ನು ಗಳಿಸಿದೆ. ಸಂಸ್ಥೆಯು ಕರಾವಳಿಯಲ್ಲಿ ಅನೇಕ ರೆಸಿಡೆನ್ಶಿಯಲ್, ಕಮರ್ಶಿಯಲ್ ಮತ್ತು ಲೇಔಟ್ ಯೋಜನೆಗಳನ್ನು  ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಹೆಚ್ಚಿನ ಮಾಹಿತಿ ಅಥವಾ ಬುಕಿಂಗ್‌ಗಾಗಿ, ರೋಹನ್ ಕಾರ್ಪೊರೇಶನ್ ದೂರವಾಣಿ ಸಂಖ್ಯೆ: 98454 90100, ಈಮೇಲ್: [email protected], ಜಾಲತಾಣ: www.rohancorporation.in ಅಥವಾ ರೋಹನ್ ಕಾರ್ಪೋರೇಶನ್, ರೋಹನ್ ಸಿಟಿ, ಬಿಜೈ, ಮಂಗಳೂರು ಕಚೇರಿಯನ್ನು ಸಂಪರ್ಕಿಸಬಹುದಾಗಿದೆ

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678