• Home  
  • ಕಬಕ : ರಸ್ತೆ ವಿವಾದ ಇತ್ಯರ್ಥಪಡಿಸಿದ ಶಾಸಕ ಅಶೋಕ್ ರೈ
- DAKSHINA KANNADA - HOME - LATEST NEWS

ಕಬಕ : ರಸ್ತೆ ವಿವಾದ ಇತ್ಯರ್ಥಪಡಿಸಿದ ಶಾಸಕ ಅಶೋಕ್ ರೈ

ಪುತ್ತೂರು: ಕಬಕ ಗ್ರಾಮದ ವಿದ್ಯಾಪುರ 9 ನೇ ಅಡ್ಡ ರಸ್ತೆಯಲ್ಲಿ ಸ್ಥಳೀಯ ಮನೆಗಳ ಸಂಪರ್ಕದ ರಸ್ತೆ ವಿವಾದ ಇತ್ಯರ್ಥವಾಗಿದೆ. ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ಸೌಹಾರ್ಧಸಭೆಯಲ್ಲಿ ವಿವಾದವನ್ನು ಇತ್ಯರ್ಥಪಡಿಸಲಾಗಿದೆ. ಈ ರಸ್ತೆಯ ಪಕ್ಕದಲ್ಲಿ 6 ಮನೆಗಳಿದ್ದು ಈ ಮನೆಗಳಿಗೆ ತೆರಳಲು ರಸ್ತೆಯೇ ಇರಲಿಲ್ಲ. ಅಲ್ಲಿಗೆ ತೆರಳುವ ರಸ್ತೆಯ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ರಸ್ತೆ ನಿರ್ಮಾಣಕ್ಕೆ ಅಡಚಣೆಯಾಗಿತ್ತು. ರಸ್ತೆಗಾಗಿ ಹಲವು ವರ್ಷಗಳಿಂದ ಇಲ್ಲಿನ ನಿವಾಸಿಗಳು ಹೋರಾಟವನ್ನೇ ಮಾಡಿದ್ದರು. ಕೆಲದಿನಗಳ ಹಿಂದೆ ಶಾಸಕರ ನೇತೃತ್ವದಲ್ಲಿ ಮಾತುಕತೆ ನಡೆದಿದ್ದು […]

Share News

ಪುತ್ತೂರು: ಕಬಕ ಗ್ರಾಮದ ವಿದ್ಯಾಪುರ 9 ನೇ ಅಡ್ಡ ರಸ್ತೆಯಲ್ಲಿ ಸ್ಥಳೀಯ ಮನೆಗಳ ಸಂಪರ್ಕದ ರಸ್ತೆ ವಿವಾದ ಇತ್ಯರ್ಥವಾಗಿದೆ. ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ಸೌಹಾರ್ಧಸಭೆಯಲ್ಲಿ ವಿವಾದವನ್ನು ಇತ್ಯರ್ಥಪಡಿಸಲಾಗಿದೆ.

ಈ ರಸ್ತೆಯ ಪಕ್ಕದಲ್ಲಿ 6 ಮನೆಗಳಿದ್ದು ಈ ಮನೆಗಳಿಗೆ ತೆರಳಲು ರಸ್ತೆಯೇ ಇರಲಿಲ್ಲ. ಅಲ್ಲಿಗೆ ತೆರಳುವ ರಸ್ತೆಯ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ರಸ್ತೆ ನಿರ್ಮಾಣಕ್ಕೆ ಅಡಚಣೆಯಾಗಿತ್ತು. ರಸ್ತೆಗಾಗಿ ಹಲವು ವರ್ಷಗಳಿಂದ ಇಲ್ಲಿನ ನಿವಾಸಿಗಳು ಹೋರಾಟವನ್ನೇ ಮಾಡಿದ್ದರು.

ಕೆಲದಿನಗಳ ಹಿಂದೆ ಶಾಸಕರ ನೇತೃತ್ವದಲ್ಲಿ ಮಾತುಕತೆ ನಡೆದಿದ್ದು ಈ ಮಾತುಕತೆಯ ವೇಳೆ ಜಾಗದ ಮಾಲಿಕರಾದ ಮುತ್ತಪ್ಪ ರವರು ರಸ್ತೆಗೆ ಜಾಗ ಬಿಟ್ಟು ಕೊಡಲು ಒಪ್ಪಿಗೆಯನ್ನು ಸೂಚಿಸಿ ಮಾನವೀಯತೆ ಮೆರೆದಿದ್ದರು. ರಸ್ತೆ ನಿರ್ಮಾಣವಾಗುವಲ್ಲಿ ಮುತುವರ್ಜಿ ವಹಿಸಿದ ಶಾಸಕರನ್ನು ಹಾಗೂ ಜಾಗ ಬಿಟ್ಟು ಕೊಟ್ಟ ಮುತ್ತಪ್ಪರವರಿಗೆ ಸನ್ಮಾನ ಮಾಡಲಾಯಿತು.

ಈ ವೇಳೆ ಸ್ಥಳೀಯರಾದ ಜಯಮ್ಮ, ಶಿಲ್ಪ, ಜಮೀಲಾ, ಪಲ್ಲವಿ, ಗೀತಾ, ಬ್ಲಾಕ್ ಮಹಿಳಾ ಘಟಕದ ಕಾರ್ಯದರ್ಶಿ ಸುಮಯ್ಯ, ಫಾತಿಮಾ, ಪುತ್ತೂರು ಸರಕಾರಿ ಆಸ್ಪತ್ರೆ ರಕ್ಷಾ ಸಮಿತಿ ಸದಸ್ಯ ಅನ್ವರ್, ಮುತ್ತಪ್ಪ ಗೌಡ, ಕಾಂಗ್ರೆಸ್ ಮುಖಂಡ ಸಾಬಾಸಾಹೇಬ್, ಅಬ್ದುಲ್ ಸಲೀಂ, ಬ್ಲಾಕ್ ಕೋಶಾಧಿಕಾರಿ ಮೂಸೆಕುಂಞಿ,ಅಬ್ದುಲ್ ಕುಂಞಿ ಉಪಸ್ಥಿತರಿದ್ದರು.

 

ಜಾಗ ಬಿಟ್ಟು ಕೊಡುವ ಮೂಲಕ ಮಾನವೀಯತೆ ತೋರಿದ್ದಾರೆ

ಸುಮಾರು 15 ವರ್ಷಗಳಿಂದ ನಾವು ರಸ್ತೆಯಿಲ್ಲದೆ ಪರದಾಡುವಂತಾಗಿತ್ತು. ಮನೆಗೆ ಸಾಮಾಗ್ರಿ ಕೊಂಡೊಯ್ಯಬೇಕಾದರೂ ನಡೆದುಕೊಂಡೇ ಹೋಗಬೇಕಿತ್ತು. ಈ ವಿಚಾರವನ್ನು ಶಾಸಕ ಅಶೋಕ್ ರೈ ಗಮನಕ್ಕೆ ತಂದಿದ್ದೆವು. ಅವರು ಮುಂಚೂಣಿಯಲ್ಲಿ ನಿಂತು ನಮ್ಮ ಸಮಸ್ಯೆ ಪರಿಹರಿಸಿದ್ದಾರೆ. ಮುತ್ತಪ್ಪ ಅವರು ಜಾಗ ಬಿಟ್ಟು ಕೊಡುವ ಮೂಲಕ ಮಾನವೀಯತೆ ತೋರಿದ್ದಾರೆ.

ಆಯಿಷಾ, ಸ್ಥಳೀಯರು

Share News