ಮಂಗಳೂರು: ರಾಜ್ಯ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಕರಾವಳಿಯ ದೇವಾಲಯಗಳೇ ಅಗ್ರಸ್ಥಾನಗಳಲ್ಲಿವೆ. ಅದರಲ್ಲೂ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ 155.95 ಕೋಟಿ ರೂ. ಆದಾಯ ಮೂಲಕ ಮೊದಲನೇ ಸ್ಥಾನದಲ್ಲಿದೆ.

ಜೊತೆಗೆ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ದೇವಾಲಯಗಳಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ಶೇ.10ರಿಂದ 15 ಏರಿಕೆ ಕಂಡಿದೆ. ವರ್ಷಾಂತ್ಯ ಆಗಮಿಸುತ್ತಿದ್ದಂತೆ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಮಂದಾರ್ತಿ, ಕಟೀಲು, ಕದ್ರಿ, ಮಂಗಳಾದೇವಿ, ಕಮಲಶಿಲೆ ದೇವಸ್ಥಾನಗಳಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ.
ಜೊತೆ ಜೊತೆಗೆ ಪ್ರವಾಸಿಗರ ಹೆಚ್ಚಳದಿಂದ ಮಂಗಳೂರು ನಗರದ ಲಾಡ್ಜ್ಗಳಲ್ಲಿರೂಮುಗಳೇ ಸಿಗುತ್ತಿಲ್ಲ. ಇದರಿಂದ ಪ್ರವಾಸಿಗರು ನಗರ ಹೊರಭಾಗದ ಹೋಟೆಲ್, ರೆಸಾರ್ಟ್, ರೂಮುಗಳನ್ನು ಬುಕ್ ಮಾಡುತ್ತಿದ್ದಾರೆ. ಟೆಕ್ಸ್ಟೈಲ್ ಉದ್ಯಮ, ಮಾಲ್, ಶಾಪಿಂಗ್ ಮಾಲ್ಗಳಲ್ಲಿ ವ್ಯವಹಾರ ಹೆಚ್ಚಾಗಿದೆ.
ರಾಜ್ಯದ ದೇವಳಗಳ ಆದಾಯದಲ್ಲಿ ಮೊದಲ 10 ಸ್ಥಾನದಲ್ಲಿ ಕರಾವಳಿಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕೊಲ್ಲೂರು ಶ್ರೀಮೂಕಾಂಬಿಕಾ ದೇವಳ, ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಳ ಸ್ಥಾನ ಪಡೆದುಕೊಂಡಿವೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ 2023-24ರಲ್ಲಿ 146.01 ಕೋಟಿ ಆದಾಯ ಪಡೆದಿದ್ದರೆ, 2024-24ರಲ್ಲಿ 155.95 ಕೋಟಿ ರೂ. ಆದಾಯ ಗಳಿಸಿದೆ.

ಕರಾವಳಿ ದೇವಾಲಯದ ಆದಾಯದ ವಿವರ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ 2023-24ರಲ್ಲಿ 63.23 ಕೋಟಿ, 2024-25ರಲ್ಲಿ 71.93 ಕೋಟಿ ರೂ., ಮೈಸೂರು ಚಾಮುಂಡೇಶ್ವರಿ ದೇವಾಲಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ 2023-24ರಲ್ಲಿ 56.67 ಕೋಟಿ ರೂ., 2024-25ರಲ್ಲಿ50.68 ಕೋಟಿ ರೂ., ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇಗುಲ 2023-24ರಲ್ಲಿ 30.36 ಕೋಟಿ ರೂ., 2024-25ರಲ್ಲಿ 36.12 ಕೋಟಿ ರೂ., ಸವದತ್ತಿ ರೇಣುಕಾ ಯಲ್ಲಮ್ಮ ದೇವಳ 2023-24ರಲ್ಲಿ 25.80 ಕೋಟಿ ರೂ., 2024-25ರಲ್ಲಿ 29.95 ಕೋಟಿ ರೂ., ತುಮಕೂರಿನ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ದೇವಳ 2023-24ರಲ್ಲಿ 35.49 ಕೋಟಿ ರೂ., 2024-25ರಲ್ಲಿ 29.82 ಕೋಟಿ ರೂ., ಹುಲಿಗೆಮ್ಮ ದೇವಾಲಯ ಹುಲಿಗಿ ಕೊಪ್ಪಳ 2023-24ರಲ್ಲಿ 16.29 ಕೋಟಿ ರೂ., 2024-25ರಲ್ಲಿ 17.30 ಕೋಟಿ ರೂ., ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯ 2023-24ರಲ್ಲಿ15.27 ಕೋಟಿ ರೂ.


