canaratvnews

ಬಿಜೈ ಸಂತ ಕ್ಷೇವಿಯರ್ ಚರ್ಚ್‌ನ ನೂತನ ಧರ್ಮಗುರುಗಳಾಗಿ ವಂ| ಸ್ಪ್ಯಾನಿ ಪಿರೇರಾ ಪದಗ್ರಹಣ

ಮಂಗಳೂರು. ಮೇ 21: ನಗರದ ಬಿಜೈ ಸಂತ ಕ್ಷೇವಿಯರ್‌ಚರ್ಚ್‌ಗೆ ನೂತನ ಧರ್ಮಗುರುಗಳಾಗಿ ವಂ। ಸ್ಪ್ಯಾನಿ ಪಿರೇರಾ ಅವರು ಪದಗ್ರಹಣ ಗೊಂಡಿದ್ದಾರೆ.

ಬಿಜೈ ಚರ್ಚ್‌ನ ಧರ್ಮಗುರುಗಳು ಹಾಗೂ ಸಿಬಿಎಸ್‌ಸಿ ಶಾಲೆಯ ಸಂಚಾಲಕರಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಅವರು ಈ ಹಿಂದೆ ಕಾಸರಗೋಡು ವಲಯ ಗುರುಗಳಾಗಿದ್ದರು. ಬೇಳಾ ಚರ್ಚ್‌ನ ಧರ್ಮಗುರುಗಳಾಗಿ ಕಳೆದ 5 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ.

1996ರಲ್ಲಿ ಯಾಜಕ ದೀಕ್ಷೆ ಪಡೆದ ಬಳಿಕ ವಂ। ಸ್ಪ್ಯಾನಿ ಪಿರೇರಾ ಅವರು ಕಳೆದ 30 ವರ್ಷಗಳಿಂದ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬೀದರ್‌ನಲ್ಲಿ ಸಹಾಯಕ ನಿರ್ದೇಶಕ, ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಬೀದರ್ ಹಾಸ್ಟೆಲ್‌ಗಳ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬಳಿಕ ಉರ್ವದಲ್ಲಿ ಸಹಾಯಕ ಧರ್ಮಗುರುಗಳಾಗಿ, ಗಂಗೊಳ್ಳಿ ಫಜೀರು, ಉರ್ವ, ಬೇಳಾ ಚರ್ಚ್‌ಗಳಲ್ಲಿ ಧರ್ಮ ಗುರುಗಳಾಗಿಸೇವೆ ಸಲ್ಲಿಸಿದ್ದಾರೆ.

ಪದಗ್ರಹಣ ಸಮಾರಂಭದಲ್ಲಿವಂ। ಡಾ। ಜೆ.ಬಿ. ಸಲ್ಮಾನ್ಯಾ ಸಹಾಯಕ ಧರ್ಮಗುರು ವಂ। ಜೀವನ್ ಡಿ’ಸೋಜಾ, ಪ್ರಾಂಶುಪಾಲರಾದ ವಂ। ಜಾನ್ಸನ್ ಎಲ್. ಸಿಕ್ಖೇರಾ, ಬೇಳಾ ಚರ್ಚ್ ನ ನೂತನ ಧರ್ಮಗುರು ವಂ| ಹೆರಾಲ್ಡ್ ಮಸ್ಕರೇನಸ್ ಸೇರಿದಂತೆ ಹಲವು ಪ್ರಮುಖರು ಹಾಗೂ ಸದ್ಭಕ್ತರು ಉಪಸ್ಥಿತರಿದ್ದು, ನೂತನ ಧರ್ಮಗುರುಗಳಿಗೆ ಶುಭ ಹಾರೈಸಿದರು.

Share News
Exit mobile version