• Home  
  • *ಖ್ಯಾತ ಬಹುಭಾಷಾ ನಟ, ಉದ್ಯಮಿ ಲೊರೆಟ್ಟೊ ನಿವಾಸಿ ರೋನ್ ರೋಡ್ರಿಗಸ್ ನಿಧನ*
- COMMUNITY NEWS - HOME

*ಖ್ಯಾತ ಬಹುಭಾಷಾ ನಟ, ಉದ್ಯಮಿ ಲೊರೆಟ್ಟೊ ನಿವಾಸಿ ರೋನ್ ರೋಡ್ರಿಗಸ್ ನಿಧನ*

ಮಂಗಳೂರು, ಮಾ.27: ಕೊಂಕಣಿ ಹಾಗೂ ತುಳು ಸಿನೆಮಾ ನಟ, ನಿರ್ಮಾಪಕ ಬಂಟ್ವಾಳದ ಲೊರೆಟ್ಟೊ ನಿವಾಸಿ ರೋನ್ ರೋಡ್ರಿಗಸ್(67) ಅವರು ಮಾ.26 ರಂದು ಲಂಡನ್ ನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಕಳೆದ ಹಲವು ವರ್ಷಗಳಿಂದ ಲಂಡನ್ ನಲ್ಲಿ ನೆಲೆಸಿರುವ ಅವರು, ಆಗಿಂದಾಗೆ ಊರಿಗೆ ಬಂದು ಹೋಗುತ್ತಿದ್ದರು. ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಲಂಡನ್ ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ರಾತ್ರಿ ಅವರು ಮೃತಪಟ್ಟಿದ್ದಾರೆ. ರೋನ್ ರೋಡ್ರಿಗಸ್ ಕೊಂಕಣಿ-ತುಳು ಅಲ್ಲದೇ ಬಾಲಿವುಡ್ಡಿನಲ್ಲೂ ನಟಿಸುವ ಅವಕಾಶಗಳನ್ನು ಪಡೆದಿದ್ದಾರೆ. ’ಬಾಪಾಚೆ ಪುತಾಚೆ […]

Share News

ಮಂಗಳೂರು, ಮಾ.27: ಕೊಂಕಣಿ ಹಾಗೂ ತುಳು ಸಿನೆಮಾ ನಟ, ನಿರ್ಮಾಪಕ ಬಂಟ್ವಾಳದ ಲೊರೆಟ್ಟೊ ನಿವಾಸಿ ರೋನ್ ರೋಡ್ರಿಗಸ್(67) ಅವರು ಮಾ.26 ರಂದು ಲಂಡನ್ ನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಕಳೆದ ಹಲವು ವರ್ಷಗಳಿಂದ ಲಂಡನ್ ನಲ್ಲಿ ನೆಲೆಸಿರುವ ಅವರು, ಆಗಿಂದಾಗೆ ಊರಿಗೆ ಬಂದು ಹೋಗುತ್ತಿದ್ದರು. ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಲಂಡನ್ ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ರಾತ್ರಿ ಅವರು ಮೃತಪಟ್ಟಿದ್ದಾರೆ.

ರೋನ್ ರೋಡ್ರಿಗಸ್ ಕೊಂಕಣಿ-ತುಳು ಅಲ್ಲದೇ ಬಾಲಿವುಡ್ಡಿನಲ್ಲೂ ನಟಿಸುವ ಅವಕಾಶಗಳನ್ನು ಪಡೆದಿದ್ದಾರೆ. ’ಬಾಪಾಚೆ ಪುತಾಚೆ ನಾಂವಿಂ’ ಚಿತ್ರದಲ್ಲಿ ರೋನ್ ಲಂಡನ್ ಕೊನೆಯದಾಗಿ ನಟಿಸಿದ್ದರು. 1992ರಲ್ಲಿ ತಮ್ಮ ಸಿನೆಮಾ ಪಯಣವನ್ನು ಆರಂಭಿಸಿದ ರೋನ್ ಲಂಡನ್ ಆಪ್ಪೆ ಟೀಚರ್, ಪಮ್ಮಣ್ಣೆ ದಿ ಗ್ರೇಟ್, ಭೋಜರಾಜ್ ಎಂಬಿಬಿಎಸ್ ಮೊದಲಾದ ತುಳು ಸಿನೆಮಾಗಳಲ್ಲಿ ನಟಿಸಿದ್ದಾರೆ. ’ ಏಕ್ ಅಸ್ಲ್ಯಾರ್ ಏಕ್ ನಾ ’ ಕೊಂಕಣಿ ಸಿನೆಮಾದಲ್ಲಿನ ನಟನೆಗಾಗಿ ಹಿಸ್ನಾ- ಗ್ಲೋಬಲ್ ಸಿನಿ ಅವಾರ್ಡ್ಸ್ ನಲ್ಲಿ ಶ್ರೇಷ್ಟ ಸಹನಟ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.

ನಟನೆಯ ಜೊತೆಗೆ ಲಂಡನಿನಲ್ಲಿ ಯಶಸ್ವಿ ಉದ್ಯಮಿಯಾಗಿ ಹೆಸರು ಮಾಡಿದ ರೋನ್ ಲಂಡನ್ ಇಂಗ್ಲೆಂಡಿನ ಕೊಂಕಣಿ ಸಂಘಟನೆಗಳ ಸ್ಥಾಪನೆಯಲ್ಲಿ ವಿಶೇಷ ಪಾತ್ರವಹಿಸಿದ್ದರು. ಕರಾವಳಿ ಹಾಗೂ ಯುರೋಪಿನ ನಡುವೆ ಕಲೆ ಹಾಗೂ ಸಂಘಟನೆಗಳ ಮುಖಾಂತರ ನಿರಂತರವಾದ ಬಾಂಧ್ಯವ್ಯವನ್ನು ಸೃಷ್ಟಿಸುವಲ್ಲಿ ವಿಶೇಷ ಗಮನ ಹರಿಸಿದ್ದ ರೋನ್ ಲಂಡನ್ ಸರಕಾರದ ಜೊತೆಯೂ ಉತ್ತಮ ಸಂಬಂಧ ರೂಪಿಸುವಲ್ಲಿ ಯಶಸ್ವಿಯಾಗಿದ್ದರು. ಬಳ್ಪ ಗ್ರಾಮದಲ್ಲಿ ಐದು ಮನೆಗಳ ನಿರ್ಮಾಣಕ್ಕೆ ಇಪ್ಪತ್ತೈದು ಲಕ್ಷ ದಾನ ನೀಡುವ ಮೂಲಕ ಸಮಾಜಮುಖಿ ಕಾರ್ಯದಲ್ಲೂ ಅವರು ಕಾಣಿಸಿಕೊಂಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಲಂಡನ್ ನಲ್ಲಿ ನೆಲೆಸಿರುವ ಅವರು, ಆಗಿಂದಾಗೆ ಊರಿಗೆ ಬಂದು ಹೋಗುತ್ತಿದ್ದರು. ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಲಂಡನ್ ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ರಾತ್ರಿ ಅವರು ಮೃತಪಟ್ಟಿದ್ದಾರೆ.

Share News