• Home  
  • ವಿಟ್ಲ: ಕ್ರೈಸ್ತ ಶಿಕ್ಷಣ & ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ಸಂತ ರೀಟಾ ಶಾಲೆಯ ರೆನಿಶಾ ಡಿಸೋಜ ಸಾಧನೆ
- HOME - LATEST NEWS

ವಿಟ್ಲ: ಕ್ರೈಸ್ತ ಶಿಕ್ಷಣ & ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ಸಂತ ರೀಟಾ ಶಾಲೆಯ ರೆನಿಶಾ ಡಿಸೋಜ ಸಾಧನೆ

ವಿಟ್ಲ: ಮಂಗಳೂರು ಧರ್ಮಪ್ರಾಂತ್ಯದ ಮಂಗಳಜ್ಯೋತಿ ಇದರ ವತಿಯಿಂದ ನಡೆದ ಕ್ರೈಸ್ತ ಶಿಕ್ಷಣ ಹಾಗೂ ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ವಿಟ್ಲದ ಸಂತ ರೀಟಾ ಶಾಲೆಯ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. 10ನೇ ತರಗತಿಯವರಿಗೆ ನಡೆದ ಕ್ರೈಸ್ತ ಶಿಕ್ಷಣ ಹಾಗೂ ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ಪೆರುವಾಯಿಯ ರಾಜೇಶ್‌ ಡಿಸೋಜ ಹಾಗೂ ರೆನಿಟಾ ರೊಡ್ರಿಗಸ್‌ ಇವರ ಮಗಳಾದ ರೆನಿಶಾ ಡಿಸೋಜ ಅವರು ಶೇ 100% ಫಲಿತಾಂಶವನ್ನು ಗಳಿಸಿ ಮಂಗಳೂರು ಧರ್ಮಪ್ರಾಂತ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹಾಗೆಯೇ ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ಹಸೀಫಾ ಝಹೀಮ. ಬಿ […]

Share News

ವಿಟ್ಲ: ಮಂಗಳೂರು ಧರ್ಮಪ್ರಾಂತ್ಯದ ಮಂಗಳಜ್ಯೋತಿ ಇದರ ವತಿಯಿಂದ ನಡೆದ ಕ್ರೈಸ್ತ ಶಿಕ್ಷಣ ಹಾಗೂ ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ವಿಟ್ಲದ ಸಂತ ರೀಟಾ ಶಾಲೆಯ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.

10ನೇ ತರಗತಿಯವರಿಗೆ ನಡೆದ ಕ್ರೈಸ್ತ ಶಿಕ್ಷಣ ಹಾಗೂ ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ಪೆರುವಾಯಿಯ ರಾಜೇಶ್‌ ಡಿಸೋಜ ಹಾಗೂ ರೆನಿಟಾ ರೊಡ್ರಿಗಸ್‌ ಇವರ ಮಗಳಾದ ರೆನಿಶಾ ಡಿಸೋಜ ಅವರು ಶೇ 100% ಫಲಿತಾಂಶವನ್ನು ಗಳಿಸಿ ಮಂಗಳೂರು ಧರ್ಮಪ್ರಾಂತ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹಾಗೆಯೇ ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ಹಸೀಫಾ ಝಹೀಮ. ಬಿ ಇವರು 97% ಪಡೆದು ಸಂಸ್ಥೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಬಿ. ಮಹಮ್ಮದ್‌ ಹನೀಫ್‌ ಹಾಗೂ ಜಾಕಿರ ಬಾನು ಅವರ ಮಗಳಾಗಿದ್ದಾರೆ.
ಮಹಾಬಲಕೃಷ್ಣ ವಿ.ಎಸ್‌ ಹಾಗೂ ಭವ್ಯಶ್ರೀ.ವಿ ಅವರ ಮಗಳಾದ ಅಕ್ಷರಾ ವಿ ಇವರೂ 98% ಅಂಕ ಪಡೆದಿದ್ದಾರೆ. 7ನೇ ತರಗತಿಯಲ್ಲಿ ವಿಜಯ್‌ ಪಾಯಸ್‌ ಹಾಗೂ ವಿಲ್ಮಾ ಕ್ರಾಸ್ತಾ ಇವರ ಮಗನಾದ ವೇಲೆನ್‌ ರೋಹನ್‌ ಪಾಯಸ್‌ 97% ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಲಾ ಜೊತೆ ಕಾರ್ಯದರ್ಶಿಗಳಾದ ವಂ.ಫಾ. ಐವನ್‌ ಮೈಕಲ್‌ ರೊಡ್ರಿಗಸ್‌, ಶಾಲಾ ಮುಖ್ಯಸ್ಥರಾದ ವಂ.ಫಾ. ಅಮಿತ್‌ ಪ್ರಕಾಶ್‌ ರೊಡ್ರಿಗಸ್‌, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಭ.ಮರಿನಾ ಸೇರಿ ಶಿಕ್ಷಕ ಹಾಗೂ ವಿದ್ಯಾರ್ಥಿ ವೃಂದ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದೆ.

Share News