canaratvnews

ನಾಳೆಯಿಂದ ದ.ಕ- ಉಡುಪಿ ಜಿಲ್ಲೆಗಳಲ್ಲಿ ಪವಿತ್ರ ರಮಝಾನ್ ಉಪವಾಸ ಆರಂಭ

ಮಂಗಳೂರು: ಪವಿತ್ರ ರಮಝಾನ್‌ನ ಪ್ರಥಮ ಚಂದ್ರದರ್ಶನವು ಮಂಗಳವಾರ ಆಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದ ಕಾರಣ ಗುರುವಾರದಿಂದ ರಮಝಾನ್ ಉಪವಾಸ ಆಚರಿಸಲು ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರ ನಿರ್ದೇಶನದಂತೆ ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ. ರಶೀದ್ ಹಾಜಿ ತಿಳಿಸಿದ್ದಾರೆ.

ಗುರುವಾರದಿಂದ ರಮಝಾನ್ ಪ್ರಾರಂಭ ಎಂದು ಉಳ್ಳಾಲ ಖಾಝಿ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ತಿಳಿಸಿರುತ್ತಾರೆಂದು ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಉಡುಪಿ: ನಿನ್ನೆ ಚಂದ್ರದರ್ಶನವಾಗದ ಕಾರಣ ಗುರುವಾರದಿಂದ ರಮಝಾನ್ ಪ್ರಾರಂಭ ಎಂದು ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸಂಯುಕ್ತ ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ತಿಳಿಸಿದ್ದಾರೆ.

Share News
Exit mobile version