canaratvnews

ರಾಜ್ಯಸಭೆಯಲ್ಲಿ ಕರ್ನಾಟಕದ ಕ್ರಿಶ್ಚಿಯನ್ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ: ಕಾಂಗ್ರೆಸ್ ಹೈಕಮಾಂಡ್‌ಗೆ ಸಮುದಾಯದ ಆಗ್ರಹ

ಬೆಂಗಳೂರು , ಜೂನ್ 04 : ಕರ್ನಾಟಕದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕ್ರಿಶ್ಚಿಯನ್ ಸಮುದಾಯಕ್ಕೆ ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ಸಮುದಾಯದ ಮುಖಂಡರು ಜಂಟಿ ಮನವಿ ಮಾಡಿದ್ದಾರೆ. దಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿರಂತರ ಬೆಂಬಲ ನೀಡುತ್ತಾ ಬಂದಿದ್ದರೂ, ಪ್ರಸ್ತುತ ಸಂಸತ್ತಿನಲ್ಲಿ ಸಮುದಾಯಕ್ಕೆ ಯಾವುದೇ ಧ್ವನಿ ಇಲ್ಲದಿರುವುದಕ್ಕೆ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ದಿವಂಗತ ಶ್ರೀ ಆಸ್ಕರ್ ಫೆರ್ನಾಂಡಿಸ್ ಅವರ ನಂತರ ಕರ್ನಾಟಕದಿಂದ ಕ್ರಿಶ್ಚಿಯನ್ ಸಮುದಾಯದ ಯಾವುದೇ ಪ್ರಮುಖ ನಾಯಕರು ರಾಜ್ಯಸಭೆಯನ್ನು ಪ್ರತಿನಿಧಿಸಿಲ್ಲ. ಈ ಸುದೀರ್ಘ ಶೂನ್ಯತೆಯು ಸಮುದಾಯದಲ್ಲಿ ಆತಂಕ ಮೂಡಿಸಿದೆ.

ಪ್ರಾತಿನಿಧ್ಯದ ಕೊರತೆ: ಕರ್ನಾಟಕದ ಒಟ್ಟು 12 ರಾಜ್ಯಸಭಾ ಸ್ಥಾನಗಳಲ್ಲಿ ಹಾಗೂ ಪ್ರಸ್ತುತ ಇರುವ ಕಾಂಗ್ರೆಸ್ ಸಂಸದರಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಒಂದೂ ಸ್ಥಾನ ಸಿಕ್ಕಿಲ್ಲ. ಪಕ್ಷದ ಇತರ ಸಮುದಾಯಗಳ ಒಳಗೊಳ್ಳುವಿಕೆಯನ್ನು ನಾವು ಸ್ವಾಗತಿಸುತ್ತೇವೆ, ಆದರೆ ಕ್ರಿಶ್ಚಿಯನ್ ಸಮುದಾಯವನ್ನು ಕಡೆಗಣಿಸಿರುವುದು ವಿಷಾದನೀಯ.

ಶಿಕ್ಷಣ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಕ್ಷೇತ್ರಗಳ ಮೂಲಕ ರಾಜ್ಯ ಹಾಗೂ ದೇಶದ ಪ್ರಗತಿಗೆ ಕ್ರಿಶ್ಚಿಯನ್ ಸಮುದಾಯ ಅಪಾರ ಕೊಡುಗೆ ನೀಡಿದೆ.

ಸದ್ಯ ತೆರವಾಗುತ್ತಿರುವ ಮೂರು ರಾಜ್ಯಸಭಾ ಸ್ಥಾನಗಳ ಪೈಕಿ, ಕನಿಷ್ಠ ಒಂದು ಸ್ಥಾನವನ್ನು ಸಮುದಾಯದ ಹಿರಿಯ ಅಥವಾ ಸಮರ್ಥ ಯುವ ನಾಯಕರಿಗೆ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ತಾರತಮ್ಯವನ್ನು ಸರಿಪಡಿಸಬೇಕು.

ದೆಹಲಿ ಮಟ್ಟದಲ್ಲಿ ಕ್ರೈಸ್ತ ಮುಖಂಡರ ಕಸರತ್ತು. ನಡೆಸುತ್ತಿದ್ದು ಸದ್ಯ ರೇಸ್‌ನಲ್ಲಿ ಮಂಗಳೂರು ದಕ್ಷಿಣದ ಮಾಜಿ ಶಾಸಕ ಜೆ.ಆರ್. ಲೋಬೊ. ಜೊತೆಗೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿರುವ ಎಐಸಿಸಿ ಕಾರ್ಯದರ್ಶಿ ನಿವೇದಿತ್ ಆಳ್ವ ಮಾಜಿ ಕಾರ್ಪೊರೇಟರ್ ನವೀನ್ ಡಿ’ಸೋಜಾ ರಾಜ್ಯದಲ್ಲಿ ಪಕ್ಷಕ್ಕಾಗಿ ಶ್ರಮಿಸಿದ ಸ್ಥಳೀಯ ಕ್ರಿಶ್ಚಿಯನ್ ನಾಯಕರಿಗೆ ಈ ಬಾರಿ ಕಡ್ಡಾಯವಾಗಿ ಅವಕಾಶ ನೀಡಬೇಕು.

ನೆರೆರಾಜ್ಯದ ನಾಯಕರ ಕುರಿತು ಚರ್ಚೆಗೆ ಸಮುದಾಯದ ತೀವ್ರ ಆಕ್ಷೇಪ:

ಸದ್ಯ ಲಭ್ಯವಿರುವ ಉನ್ನತ ಮೂಲಗಳ ಮಾಹಿತಿ ಪ್ರಕಾರ, ಕ್ರಿಶ್ಚಿಯನ್ ಸಮುದಾಯದ ಕೋಟಾದಡಿ ರಾಜ್ಯಸಭಾ ಸ್ಥಾನವನ್ನು ನೆರೆರಾಜ್ಯವಾದ ಆಂಧ್ರಪ್ರದೇಶದ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅಮರ್ ಜಹಾನ್ ಬೇಗ್ ಅವರಿಗೆ ನೀಡುವ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ಕರ್ನಾಟಕದ ಕ್ರಿಶ್ಚಿಯನ್ ಸಮುದಾಯದ ಹಿತದೃಷ್ಟಿಯಿಂದ ಮತ್ತು ಇಲ್ಲಿನ ರಾಜಕೀಯ ಅಸ್ತಿತ್ವಕ್ಕಾಗಿ ಕರ್ನಾಟಕದ ಸ್ಥಳೀಯ ಸಮರ್ಥ ನಾಯಕರಿಗೇ ಈ ಪ್ರಾತಿನಿಧ್ಯ ಸಿಗಬೇಕು. ಹೊರಗಿನವರಿಗೆ ಸ್ಥಾನ ನೀಡುವುದನ್ನು ಸಮುದಾಯವು ಕಡ್ಡಾಯವಾಗಿ ವಿರೋಧಿಸುತ್ತದೆ.

Share News
Exit mobile version