ಭಾರೀ ಮಳೆಯಿಂದಾಗಿ ವಿಟ್ಲ ಸಮೀಪದ ಕೇಪು ಮೈರದ ಬಳಿಯಲ್ಲಿ ರಸ್ತೆಗೆ ಬೃಹತ್ ಮರ ಉರುಳಿ ನಾಲ್ಕೈದು ವಿದ್ಯುತ್ ಕಂಬ ವಿದ್ಯುತ್ ತಂತಿಗೆ ಹಾನಿಯಾದ ಘಟನೆ ನಡೆದಿದೆ. ಈ ವೇಳೆ ರಸ್ತೆಯಲ್ಲಿ ತೆರಳುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದ್ದು, ಕೇರಳ ನೊಂದಣಿಯ ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದವರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಘಟನೆಯಿಂದ ಹಲವು ಸಮಯ ರಸ್ತೆ ಸಂಚಾರ ಉಂಟಾಗಿತ್ತು. ಬಳಿಕ ಮೆಸ್ಕಾಂ, ಅರಣ್ಯ ಇಲಾಖೆ ಸಿಬಂದಿಗಳು ಸೇರಿದಂತೆ ಸ್ಥಳೀಯರ ಸಹಕಾರದಿಂದ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ಸಂಚಾರಕ್ಕೆ ಅನುವು ಮಾಡಲಾಗಿದೆ. ಮೆಸ್ಕಾಂ ಸಿಬಂದಿಗಳು ವಿದ್ಯುತ್ ಕಂಬಗಳನ್ನು ದುರಸ್ತಿಗೊಳಿಸಿದ್ದು, ಶನಿವಾರ ರಾತ್ರಿ ಕುದ್ದುಪದವು, ಪೆರುವಾಯಿ, ಮಾಣಿಲ ಗ್ರಾಮದಲ್ಲಿ ವಿದ್ಯುತ್ ಕೈ ಕೊಟ್ಟಿದ್ದು ಗ್ರಾಮಸ್ಥರು ಪರದಾಡುವಂತಾಗಿದೆ.







