• Home  
  • ವಿಪರೀತ ಮಳೆಗೆ ತಾಲೂಕಿನ ಬಹುತೇಕ ರಸ್ತೆಗಳು ಹದಗೆಟ್ಟಿದೆ ಅನುದಾನ ರೆಡೀ ಇದೆ- ಮಳೆ ಕಡಿಮೆಯಾದ ಕೂಡಲೇ ದುರಸ್ಥಿ ಕಾಮಗಾರಿ ಶಾಸಕ ಅಶೋಕ್ ರೈ
- DAKSHINA KANNADA - HOME

ವಿಪರೀತ ಮಳೆಗೆ ತಾಲೂಕಿನ ಬಹುತೇಕ ರಸ್ತೆಗಳು ಹದಗೆಟ್ಟಿದೆ ಅನುದಾನ ರೆಡೀ ಇದೆ- ಮಳೆ ಕಡಿಮೆಯಾದ ಕೂಡಲೇ ದುರಸ್ಥಿ ಕಾಮಗಾರಿ ಶಾಸಕ ಅಶೋಕ್ ರೈ

ಪುತ್ತೂರು ಜುಲೈ 25 : ಈ ಬಾರಿ ವಿಪರೀತ ಮಳೆಯಾಗುತ್ತಿದೆ. ಭಾರೀ ಮಳೆಗೆ ಕಳೆದ ಮೂರು ವರ್ಷದ ಹಿಂದೆ ಮಾಡಿದ ರಸ್ತೆಗಳ ಡಮರೂ ಎದ್ದು ಹೋಗಿದೆ, ಪುತ್ತೂರು ಉಪ್ಪಿ ವಂಗಡಿ ರಸ್ತೆ ಮತ್ರ ಹದಗೆಟ್ಟಿದ್ದಲ್ಲ ಕ್ಷೇತ್ರದ ಬಹುತೇಕ ರಸ್ತೆಗಳು ಮಳೆಯ ಕಾರಣಕ್ಕೆ ಹೊಂಡಗಳು ಬಿದ್ದಿದೆ. ಮಳೆಯ ಬಿಡುವಿನ ನಡುವೆ ದುರಸ್ಥಿ ಕಾರ್ಯವೂ ಅಲ್ಲಲ್ಲಿ ನಡೆಯುತ್ತಿದೆ, ಮಳೆ ಕಡಿಮೆಯಾದ ತಕ್ಷಣ ಎಲ್ಲಾ ರಸ್ತೆಗಳ ಕಾಮಗಾರಿಯೂ ಪೂರ್ಣಗೊಳ್ಳಲಿದೆ ಎಂದು ಶಾಸಕ ಅಶೋಕ್ ರೈ ಮಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.’

ಕಳೆದ ಮೂರು ವರ್ಷದ ಹಿಂದೆ ನಿರ್ಮಾಣವಾದ ಪುತ್ತೂರು ಉಪ್ಪಿನಂಗಡಿ ರಸ್ತೆಯ ಅಲ್ಲಲ್ಲಿ ಹೊಂಡಗಳು ಬಿದ್ದಿದೆ. ಮಳೆಯ ಕಾರಣಕ್ಕೆ ಈ ರೀತಿಯಾಗಿದೆ. ಈ ರಸ್ತೆಯಲ್ಲಿ ಹೊಂಡ ಮುಚ್ಚುವ ಕೆಲಸ ನಡೆಯುತ್ತಲೇ ಇದೆ. ಮಳೆಗೆ ರಸ್ತೆ ಹೊಂಡ ಮುಚ್ಚುವ ಕೆಲಸ ನಡೆದರೂ ಮತ್ತೆ ಮಳೆಗೆ ಕೊಚ್ಚಿ ಹೋಗುತ್ತಿದೆ ಎಲ್ಲೆಲ್ಲಿ ರಸ್ತೆ ಹೊಂಡ ಬಿದ್ದಿದೆಯೇ ಆದನ್ನೆಲ್ಲಾ ಪೇಟೆ ಹಾಸುವ ಕೆಲಸವನ್ನು ಇಲಾಖೆ ಮಾಡಲಿದೆ ಈಗಾಗಲೇ ನಾನು ಸೂಚನೆಯನ್ನು ನೀಡಿದ್ದೇನೆ’ ಎಂದು ಹೇಳಿದರು.

ಮಳೆಯ ಕಾರಣಕ್ಕೆ ರಸ್ತೆ ಹೊಂಡ ಬಿದ್ದಿದೆ. ಮಳೆಗೆ ಡಾಮರು ಹಾಕಲು ಸಾಧ್ಯವಿಲ್ಲ ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ ಪರಿಸ್ಥಿತಿ ಈ ರೀತಿ ಇರುವಾಗ ಜನರಿಗೂ ಸ್ವಲ್ಪ ತಾಳ್ಮೆ ಇರಬೇಕು. ಹೊಂಡ ಮುಚ್ಚಲು ಅನುದಾನ ರೆಡಿ ಇದೆ, ಎಲ್ಲಾ ವ್ಯವಸ್ಥೆಗಳು ಇದೆ ಆದರೆ ಮಳೆಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ವಿಚಾರ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ರಸ್ತೆ ಹೊಂಡ ಬಿದ್ದಿರುವ ವಿಚಾರ ಗೊತ್ತಿರುವ ಕಾರಣ ವಾಹನ ಚಾಲಕರು ಅತಿ ವೇಗದಿಂದ ವಾಹನವನ್ನು ಚಲಾಯಿಸದೆ ನಿಧಾನಕ್ಕೆ ತೆರಳಬೇಕು. ಮಳೆ ಮುಗಿದ ಕೂಡಲೇ ಹೊಂಡ ಮುಚ್ಚುವ ಕಾಮಗಾರಿ ಪ್ರಾರಂಭವಾಗಲಿದೆ ಅಲ್ಲಿಯ ತನಕ ತಾಳ್ಮೆಯಿಂದ ಇದ್ದು ಸಹಕಾರ ನೀಡಬೇಕು ಎಂದು ಹೇಳಿದರು.

ವಿರೋಧ ಪಕ್ಷದವರು ಆರೋಪ ಮಾಡುತ್ತಾರೆ

ರೀತಿ ರಸ್ತೆ ಹೊಂಡ ಬಿದ್ದಿದೆ, ದುರಸ್ತಿ ಮಾಡಿಲ್ಲ ಎಂದು ವಿರೋಧ ಪಕ್ಷದವರು ರಾಜಕೀಯ ಆರೋಪ ಮಾಡುತ್ತಿದ್ದಾರೆ. ಮಳೆಯಲ್ಲಿ ಹೊಂಡ ಮುಚ್ಚಲು ಸಾಧ್ಯವಿಲ್ಲ ಎಂಬುದು ಅವರಿಗೂ ಗೊತ್ತಿದೆ ಆದರೆ ರಜಕೀಯ ದುರುದ್ದೇಶದಿಂದ ಈ ಆರೋಪ ಮಾಡುತ್ತಿದ್ದಾರೆ.ಯಾರೇ ಏನೇ ಹೇಳಿದರೂ, ಆರೋಪ ಮಾಡಿದರೂ ಮಳೆ ವಿಪರೀತವಾಗಿ ಸುರಿಯುತ್ತಿರುವ ಕಾರಣ ಹೊಂಡ ಮುಚ್ಚಲು ಸಾಧ್ಯವಿಲ್ಲದ ಕಾರಣ ಮಳೆ ಕಡಿಮೆಯಾದ ತಕ್ಷಣ ಹೊಂಡ ಬಿದ್ದಿರುವ ಎಲ್ಲಾ ರಸ್ತೆಗಳ ಹೊಂಡ ಮುಚ್ಚುವ ಕಾಮಗಾರಿ ನಡೆಯಲಿದ್ದು ಜನತೆ ಸಹಕಾರ ನೀಡುವಂತೆ ಶಾಸಕರು ವಿನಂತಿಸಿದ್ದಾರೆ.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678