• Home  
  • ಪುತ್ತೂರಿನ ಒಂದು ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಿದ್ದಲ್ಲಿ 20 ಎಕ್ರೆ ನಿವೇಶನ ಮಂಜೂರು ಕ್ಯಾಂಪ್ಕೋ ಗೆ ಶಾಸಕ ಅಶೋಕ್ ರೈ ವಾಗ್ದಾನ
- DAKSHINA KANNADA

ಪುತ್ತೂರಿನ ಒಂದು ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಿದ್ದಲ್ಲಿ 20 ಎಕ್ರೆ ನಿವೇಶನ ಮಂಜೂರು ಕ್ಯಾಂಪ್ಕೋ ಗೆ ಶಾಸಕ ಅಶೋಕ್ ರೈ ವಾಗ್ದಾನ

ಪುತ್ತೂರು: ಕ್ಯಾಂಪ್ಕೋಬಹುದೊಡ್ಡ ಸಂಸ್ಥೆಯಾಗಿ ಇಂದು ಬೆಳೆದು ನಿಂತಿದೆ, ಜಿಲ್ಲೆಯ ನೂರಾರು ಜನರಿಗೆ ಇದು ಉದ್ಯೋಗ ಕಲ್ಪಿಸುವುದರ ಜೊತೆಗೆ ಜಿಲ್ಲೆಯ ಕೀರ್ತಿಯನ್ನು ದೇಶ ವಿದೇಶಗಳಿಗೂ ಪಸರಿಸಿದೆ, ಕ್ಯಾಂಸ್ಕೋ ಇನ್ನೂ ಬೆಳೆಯಬೆಕಿದೆ, ಜಿಲ್ಲೆಯ ಕೃಷಿಕರ ಪರವಾಗಿ ಗಟ್ಟಿನಿಲ್ಲಬೇಕಿದೆ, ಕ್ಯಾಂಪ್ಕೋ ಸಂಸ್ಥೆಯಲ್ಲಿ ಪುತ್ತೂರಿನ ಮಂದಿಗೆ ಉದ್ಯೋಗ ನೀಡುವುದರ ಜೊತೆಗೆ ಜಿಲ್ಲೆಯ ಒಂದು ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಿದ್ದಲ್ಲಿ ಸಂಸ್ಥೆಗೆ 20 ಎಕ್ರೆ ನಿವೇಶನ ಮಂಜೂರು ಮಾಡಿಸುವುದಾಗಿ ಶಾಸಕ ಅಶೋಕ್‌ ರೈ ಹೇಳಿದರು. ಅವರು ವಿಟ್ಲದಲ್ಲಿ ಕ್ಯಾಂಪ್ಕೋ ಶಾಖೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ […]

Share News

ಪುತ್ತೂರು: ಕ್ಯಾಂಪ್ಕೋಬಹುದೊಡ್ಡ ಸಂಸ್ಥೆಯಾಗಿ ಇಂದು ಬೆಳೆದು ನಿಂತಿದೆ, ಜಿಲ್ಲೆಯ ನೂರಾರು ಜನರಿಗೆ ಇದು ಉದ್ಯೋಗ ಕಲ್ಪಿಸುವುದರ ಜೊತೆಗೆ ಜಿಲ್ಲೆಯ ಕೀರ್ತಿಯನ್ನು ದೇಶ ವಿದೇಶಗಳಿಗೂ ಪಸರಿಸಿದೆ, ಕ್ಯಾಂಸ್ಕೋ ಇನ್ನೂ ಬೆಳೆಯಬೆಕಿದೆ, ಜಿಲ್ಲೆಯ ಕೃಷಿಕರ ಪರವಾಗಿ ಗಟ್ಟಿನಿಲ್ಲಬೇಕಿದೆ, ಕ್ಯಾಂಪ್ಕೋ ಸಂಸ್ಥೆಯಲ್ಲಿ ಪುತ್ತೂರಿನ ಮಂದಿಗೆ ಉದ್ಯೋಗ ನೀಡುವುದರ ಜೊತೆಗೆ ಜಿಲ್ಲೆಯ ಒಂದು ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಿದ್ದಲ್ಲಿ ಸಂಸ್ಥೆಗೆ 20 ಎಕ್ರೆ ನಿವೇಶನ ಮಂಜೂರು ಮಾಡಿಸುವುದಾಗಿ ಶಾಸಕ ಅಶೋಕ್‌ ರೈ ಹೇಳಿದರು. ಅವರು ವಿಟ್ಲದಲ್ಲಿ ಕ್ಯಾಂಪ್ಕೋ ಶಾಖೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕ್ಯಾಂಪ್ಕೋ ಇಲ್ಲದೇ ಇರುತ್ತಿದ್ದರೆ ಇಂದು ಮಾರ್ವಾಡಿಗಳು ಅಡಿಕೆಯನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದರು ಎಂಬುದನ್ನು ಹೇಳುವುದಕ್ಕೆ ಸಾಧ್ಯವಿಲ್ಲ, ಇಂದು ಅಡಿಕೆಗೆ ಉತ್ತಮ ಧಾರಣೆ ಸಿಗುವಲ್ಲಿ ಕ್ಯಾಂಪ್ಕೋ ಕಾರಣವಾಗಿದೆ ಎಂದು ಹೇಳಿದರು. ಕ್ಯಾಂಪ್ಕೋದಲ್ಲಿ ಇತರೆ ಕಡೆಗಿಂತ ಅಡಿಕೆಗೆ ಸ್ವಲ್ಪ ಬೆಲೆ ಕಡಿಮೆ ಇರಬಹುದು ಆದರೆ ಕ್ಯಾಂಪ್ಕೋ ಸರಕಾರಿ ನಿಬಂಧನೆಯಡಿ ಕೆಲಸ ಮಾಡುವದರಿಂದ ದರದಲ್ಲಿ ಸ್ವಲ್ಪ ವ್ಯತ್ಯಾಸಗಳು ಉಂಟಾಗಬಹುದು ಎಂದು ಹೇಳಿದರು.ಜಿಲ್ಲೆಯಲ್ಲಿ ಅನೇಕ ವಿದ್ಯಾವಂತ ನಿರುದ್ಯೋಗಿಗಳಿದ್ದಾರೆ, ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗಬೇಕಿದೆ, ನಮ್ಮ ಯುವಕ, ಯುವತಿಯರಿಗೆ ಉದ್ಯೋಗ ಕೊಡಬೇಕಿದೆ. ಕ್ಯಾಂಪ್ಕೋ ಮನಸ್ಸು ಮಾಡಿದ್ದಲ್ಲಿ ಇದು ಸಾಧ್ಯವಾಗುತ್ತದೆ, ಹೇಗೆ ಉದ್ಯೋಗ ಸೃಷ್ಟಿಮಾಡಬಹುದು ಎಂಬುದರ ಬಗ್ಗೆ ಸಂಸ್ಥೆಯ ಅಧ್ಯಕ್ಷರಿಗೆ ತಿಳಿದಿದೆ, ಈ ವಿಚಾರದಲ್ಲಿ ನಾನು ಸಂಸ್ಥೆಗೆ ನೆರವು ನೀಡಲಿದ್ದು, ಕ್ಯಾಂಪ್ಕೋ ಸಂಸ್ಥೆಗೆ ನಿವೇಶನವನ್ನು ನೀಡಲು ಸಿದ್ದನಾಗಿದ್ದೇನೆ ಎಂದು ಶಾಸಕರು ಹೇಳಿದರು.

Share News