• Home  
  • ಪುತ್ತೂರು ಚಾಕು ಹಿಡಿದು ಹಿಂಬಾಲಿಸಿದ ಪ್ರಕರಣ: ಸಂತ್ರಸ್ತರ ಮನೆಗೆ ಸಂಸದ ಭೇಟಿ- ಸರ್ಕಾರಕ್ಕೆ ಎಚ್ಚರಿಕೆ
- DAKSHINA KANNADA - HOME - LATEST NEWS

ಪುತ್ತೂರು ಚಾಕು ಹಿಡಿದು ಹಿಂಬಾಲಿಸಿದ ಪ್ರಕರಣ: ಸಂತ್ರಸ್ತರ ಮನೆಗೆ ಸಂಸದ ಭೇಟಿ- ಸರ್ಕಾರಕ್ಕೆ ಎಚ್ಚರಿಕೆ

ಪುತ್ತೂರು: ಕೆಲಸಕ್ಕೆ ತೆರಳುತ್ತಿದ್ದ ಯುವತಿಯೋರ್ವಳಿಗೆ ಚಾಕು ಹಿಡಿದು ಹಿಂಬಾಲಿಸಿದ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ಸಂತ್ರಸ್ತರ ಮನೆಗೆ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಸೇರಿ ಹಲವು ಬಿಜೆಪಿ ಮುಖಂಡರು ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಭೇಟಿಯ ಬಳಿಕ ಮಾತನಾಡಿದ ಸಂಸದ, ಒಂದು ರೀತಿಯಲ್ಲಿ ನಡೆದಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲು ತೆರಳಿದ ಯುವತಿಯ ಪೋಷಕರನ್ನು ಗಂಟೆಗಳ ಕಾಲ ಠಾಣೆಯಲ್ಲಿ ಕುಳ್ಳಿರಿಸಿ ಸಂತೈಸಬೇಕಾದ ಪೊಲೀಸರೇ ರಾಜಕೀಯ ಒತ್ತಡಕ್ಕೆ ಮಣಿದು ಕೌಂಟರ್‌ ಕೇಸ್‌ ದಾಖಲಿಸಿದ್ದು […]

Share News

ಪುತ್ತೂರು: ಕೆಲಸಕ್ಕೆ ತೆರಳುತ್ತಿದ್ದ ಯುವತಿಯೋರ್ವಳಿಗೆ ಚಾಕು ಹಿಡಿದು ಹಿಂಬಾಲಿಸಿದ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ಸಂತ್ರಸ್ತರ ಮನೆಗೆ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಸೇರಿ ಹಲವು ಬಿಜೆಪಿ ಮುಖಂಡರು ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

ಭೇಟಿಯ ಬಳಿಕ ಮಾತನಾಡಿದ ಸಂಸದ, ಒಂದು ರೀತಿಯಲ್ಲಿ ನಡೆದಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲು ತೆರಳಿದ ಯುವತಿಯ ಪೋಷಕರನ್ನು ಗಂಟೆಗಳ ಕಾಲ ಠಾಣೆಯಲ್ಲಿ ಕುಳ್ಳಿರಿಸಿ ಸಂತೈಸಬೇಕಾದ ಪೊಲೀಸರೇ ರಾಜಕೀಯ ಒತ್ತಡಕ್ಕೆ ಮಣಿದು ಕೌಂಟರ್‌ ಕೇಸ್‌ ದಾಖಲಿಸಿದ್ದು ವಿಷಾದಾನೀಯ. ಕಾಂಗ್ರೆಸ್‌ನ ಒತ್ತಡಕ್ಕೆ ಮಣಿದು ಸಂತ್ರಸ್ತೆಯ ಕುಟುಂಬಸ್ಥರ ಮೇಲೆ ಕೇಸ್‌ ದಾಖಲಿಸುತ್ತಿದ್ದೀರಾ ಎಂದರೆ, ಜೊತೆಗೆ ಘಟನೆ ಕೋಮುಭಾವನೆ ಕೆರಳಿಸುವ ಭಾವನೆ ಎಂಬ ವಾತಾವರಣ ಎಂದು ಮಾತನಾಡಿದ್ದೀರಿ, ಪೊಲೀಸರಿಗೆ ನೀಡಿದ ದೂರಿನಲ್ಲಿ ಯಾವುದೇ ಧರ್ಮದ ಉಲ್ಲೇಖವಿಲ್ಲ. ನನ್ನ ಮೇಲೆ ಚೇಷ್ಟೆ & ಹಲ್ಲೆ ನಡೆಸಲು ಬಂದಿದ್ದಾರೆ ಎಂದಷ್ಟೇ ಬರೆದಿದ್ದಾರೆ. ಅವಳಿಗಾದ ಅನ್ಯಾಯಕ್ಕೆ ನ್ಯಾಯ ನೀಡುವ ಬದಲು 5 ಗಂಟೆ ಠಾಣೆಯಲ್ಲಿ ಕೂರಿಸಿ ಭಯವನ್ನ ಹುಟ್ಟಿಸುವ ಪ್ರಯತ್ನ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಫ್‌ಐಆರ್‌ನಲ್ಲಿ ಸರಿಯಾದ ಸೆಕ್ಷನ್‌ ದಾಖಲಿಸದೇ, ತಕ್ಷಣ ಆರೋಪಿಯ ದೂರನ್ನು ಪಡೆದು ಸಂತ್ರಸ್ತರ ವಿರುದ್ಧವೇ ದಬ್ಬಾಳಿಕೆ ಮಾಡುವ ಪ್ರಯತ್ನ ಮಾಡಿದ್ದೀರಿ. ಇದನ್ನು ಬಿಜೆಪಿ ಖಂಡಿಸುತ್ತದೆ. ಸ್ಥಳೀಯ ಶಾಸಕ ಹಾಗೂ ರಾಜ್ಯ ಸರ್ಕಾರಕ್ಕೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ ಎಂದರು. ಪಕ್ಷ ನಮ್ಮ ಕಾರ್ಯಕರ್ತರ ಜೊತೆ ಇದೆ ಎಂದು ಹೇಳಿದರು. ಈ ವೇಳೆ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಸೇರಿ ಹಲವು ಮುಖಂಡರು ಇದ್ದರು.

 

Share News