canaratvnews

ದೇಶವ್ಯಾಪ್ತಿ ಕ್ರೈಸ್ತರ ಮೇಲೆ ನಡೆದ ದಾಳಿ ಖಂಡಿಸಿ ಮಂಗಳೂರಿನಲ್ಲಿ ಮೌನ ಪ್ರತಿಭಟನೆ

ಮಂಗಳೂರು: ಕ್ರಿಸ್‌ಮಸ್ ಹಬ್ಬದ ವೇಳೆ ದೇಶವ್ಯಾಪ್ತಿ ಕ್ರೈಸ್ತರ ಮೇಲೆ ನಡೆದ ದಾಳಿಗಳನ್ನು ಖಂಡಿಸಿ, ಸಂತ ಸೆಬಾಸ್ಟಿಯನ್ ಚರ್ಚ್, ಬೆಂದೂರು, ಮಂಗಳೂರು ವತಿಯಿಂದ ಜ.3ರಂದು ಸಂಜೆ 6 ಗಂಟೆಗೆ ಚರ್ಚಿನ ಮುಂಭಾಗದಲ್ಲಿ ಮೌನ ಪ್ರತಿಭಟನೆ ಆಯೋಜಿಸಲಾಯಿತು.

ಈ ಮೌನ ಪ್ರತಿಭಟನೆಯಲ್ಲಿ ಚರ್ಚಿನ ಧರ್ಮಗುರುಗಳಾದ ವಂ. ವಾಲ್ಟರ್ ಡಿಸೋಜಾ, ಸಹಾಯಕ ಧರ್ಮಗುರುಗಳಾದ ವಂ. ವಿವೇಕ್ ಪಿಂಟೋ ಹಾಗೂ ವಂ. ಓಜ್ಮೊಂಡ್ ಡಿಸೋಜಾ, ವಂ. ಅರುಣ್ ಲೋಬೊ (ಪ್ರಾಂಶುಪಾಲರು), ಉಪಾಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ವಂ. ವಾಲ್ಟರ್ ಡಿಸೋಜಾ ಎಲ್ಲರನ್ನು ಸ್ವಾಗತಿಸಿ, ಈ ಮೌನ ಪ್ರತಿಭಟನೆಯ ಉದ್ದೇಶವನ್ನು ವಿವರಿಸಿದರು.

ಭಕ್ತಾಧಿಗಳು ಮುಂಬತ್ತಿಯನ್ನು ಬೆಳಗಿಸಿ ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡುವುದರ ಮೂಲಕ, ತಮ್ಮ ನೋವನ್ನು ತೊರ್ಪಡಿಸಿದರು. ಹಾಗೂ ಶಾಂತಿ ಮತ್ತು ನ್ಯಾಯಕ್ಕಾಗಿ ತಮ್ಮ ಏಕತೆ ಮತ್ತು ಸೌಹಾರ್ದತೆಯನ್ನು ವ್ಯಕ್ತಪಡಿಸಿದರು. ಚರ್ಚಿನ ಭಕ್ತಾಧಿಗಳು, ಕಾನ್ವೆಂಟ್ ಭಗಿನಿಯರು, ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.

Share News
Exit mobile version