ಮಂಗಳೂರು. ನ 02: ಕ್ಯಾಥೋಲಿಕ್ ಸಭಾ ಎಪಿಸ್ಕೊಪಲ್ ಸಿಟಿ ವಾರಾಡೊ – ಮತ್ತು ಪ್ರೇರಣ್ ಡಿಯೋಸೆಸನ್ ಸಮಿತಿಯು, C.O.D.P ಮತ್ತು ಸೇಂಟ್ ಅಲೋಶಿಯಸ್ ಸಿವಿಲ್ ಸರ್ವೀಸಸ್ ಕಾಲೇಜು ವಿಭಾಗದ ಸಹಯೋಗದೊಂದಿಗೆ 2 ನೇ ಹಂತದ ನಾಗರಿಕ ಸೇವೆಗಳ ಸೆಮಿನಾರ್ “ಪ್ರೇರಣ್ ಕ್ಯಾಚ್ ದೆಮ್ ಯಂಗ್” ಅನ್ನು ಕ್ಯಾಥೋಲಿಕ್ ಸಮುದಾಯದ ಯುವಕರಿಗಾಗಿ ಆಯೋಜಿಸಲಾಗಿತ್ತು. ಮಂಗಳೂರಿನ ಎಂ.ಸಿ.ಸಿ ಬ್ಯಾಂಕ್ ಈ ವಿಚಾರ ಸಂಕಿರಣವನ್ನು ಪ್ರಾಯೋಜಿಸಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ನಗರದ ಬಜ್ಜೋಡಿಯಲ್ಲಿ ಇರುವ ಶಾಂತಿ ಕಿರಣ್ ಹಾಲ್ ನಲ್ಲಿ ಮಂಗಳೂರು ಡಿಯೋಸೆಸನ್ ಪಾಸ್ಟೋರಲ್ ಸೆಂಟರ್ ನಿರ್ದೇಶಕ ರೆವರೆಂಡ್ ಫಾದರ್ ಸಂತೋಷ್ ರೋಡ್ರಿಗಸ್ ಅವರು ಈ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು.

“ನಮ್ಮ ಸುತ್ತಲೂ ಲಭ್ಯವಿರುವ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯ ಮೂಲಕ ನಮ್ಮ ರಾಷ್ಟ್ರಕ್ಕೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲು ಸಿದ್ಧರಾಗಿರಿ” ಎಂಬ ಸ್ಪೂರ್ತಿದಾಯಕ ಸಂದೇಶವನ್ನು ನೀಡಿದರು. ಪ್ರವೀಣ್ ಲಿಯೋ ಲಾಸ್ರಾದೊ ಪ್ರೇರಣ್ ಡಯಾಸಿಸ್ ಸಮಿತಿಯ ಸಂಯೋಜಕರು, ಎಂ. ಸಿ. ಸಿ. ಬ್ಯಾಂಕಿನ ಮಂಗಳೂರು ಇದರ ಚೇರ್-ಮ್ಯಾನ್ – ಅನಿಲ್ ಲೋಬೊ, ಕ್ಯಾಥೋಲಿಕ್ ಸಭಾ ಎಪಿಸ್ಕೋಪಲ್ ಸಿಟಿ ವರಾಡೋ ಇದರ ಅತ್ಮಿಕ ನಿರ್ದೇಶಕಾರಾದ ವಂದನೀಯ ಗುರು ಜಾನ್ ವಾಸ್, ಅಧ್ಯಕ್ಷರಾದ ಶ್ರೀಮತಿ ಐಡಾ ಫುರ್ಟಾಡೋ, ಕಾರ್ಯದರ್ಶಿ ರೋಹನ್ ಎಲ್ ಸಿಕ್ವೇರಾ, ದೀಪಕ್ ಡಿ ಸೋಜಾ ಅತ್ತಾವರ್ (ಕಾರ್ಯಕ್ರಮದ ಸಂಚಾಲಕ), ಸಂಪನ್ಮೂಲ ವ್ಯಕ್ತಿಗಳು, ಇನ್ಸ್ಟಿಟ್ಯೂಟ್ ಫಾರ್ ಇಂಡಿವಿಜುವಲ್ ಡೆವಲಪ್ಮೆಂಟ್ ಇದರ ನಿರ್ದೇಶಕ ಪ್ರೊ. ರೊನಾಲ್ಡ್ ಪಿಂಟೋ, ಸೇಂಟ್ ಅಲೋಶಿಯಸ್ ಕಾಲೇಜಿನ ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಪ್ರೊ. ಆಲ್ವಿನ್ ಡಿಸೋಜಾ, ಸರ್ವಜನ್ಯಾ ಐಎಎಸ್ ಅಕಾಡೆಮಿಯ ನಿರ್ದೇಶಕ ಎಲ್. ಎನ್. ಸುರೇಶ್ ಎಂ. ಎಸ್. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಈ ವಿಚಾರ ಸಂಕಿರಣದ 2 ನೇ ಹಂತವನ್ನು ಉದ್ಘಾಟಿಸಿದರು.
ಎಪಿಸ್ಕೋಪಲ್ ಸಿಟಿ ವರಾಡೋದ ಎಲ್ಲಾ 11 ಚರ್ಚುಗಳ 142ಕ್ಕೂ ಹೆಚ್ಚು ಯುವ ಸ್ಪರ್ಧಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಕ್ಯಾಥೋಲಿಕ್ ಸಭಾ ಎಪಿಸ್ಕೋಪಲ್ ಸಿಟಿ ವರಾಡೋ ಇದರ – ಸ್ರಿ ಹಿತಾಸಕ್ತಿ ಸಂಚಾಲಕಿ ಶ್ರೀಮತಿ ಲಿಜ್ಜಿ ಪಿಂಟೋ ಕಾರ್ಯಕ್ರಮದ ನಿರೂಪಣೆ ಮಾಡಿದರು, ಖಜಾಂಚಿ ಶ್ರೀಮತಿ ಜೆಸಿಂತಾ ಲೋಬೊ ಹಾಗೂ ತಂಡ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು, ರೆವರೆಂಡ್ ಫಾದರ್ ಜಾನ್ ವಾಸ್ ಅಶೀರ್ವಚಿಸಿದರು ಮತ್ತು ಕಾರ್ಯದರ್ಶಿ ಶ್ರೀ ರೋಹನ್ ಎಲ್ ಸಿಕ್ವೇರಾ ಕೃತಜ್ಞತೆ ಸಲ್ಲಿಸಿದರು.