Site icon canaratvnews

ಐವನ್ ಡಿಸೋಜ ಅಧ್ಯಕ್ಷತೆಯಲ್ಲಿ ಸರ್ವಧರ್ಮ ಕ್ರಿಸ್ಮಸ್‌ ಆಚರಣೆಯ ಪೂರ್ವಭಾವಿ ಸಭೆ

ಮಂಗಳೂರು: ಸರ್ವಧರ್ಮಗಳ ಭಾವೈಕ್ಯದ ಸಂಗಮವಾದ ಕ್ರಿಸ್ಮಸ್ ಆಚರಣೆ ಬಗ್ಗೆ ಪೂರ್ವಬಾವಿ ಸಭೆಯು ಐವನ್ ಡಿಸೋಜ ಅಧ್ಯಕ್ಷತೆಯಲ್ಲಿ ಇತ್ತಿಚೆಗೆ ನಡೆಯಿತು.

ಕಳೆದ 10 ವರ್ಷಗಳಿಂದ ಕ್ರಿಸ್ಮಸ್, ದೀಪಾವಳಿ, ರಮಝಾನ್ ಹಬ್ಬಗಳನ್ನು ಅಚರಿಸುತ್ತಾ ಬರಲಾಗಿದೆ. ಸಮಾಜದ ಎಲ್ಲಾ ವರ್ಗಗಳ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ಬಾರಿ ಕ್ರಿಸ್ಮಸ್ ಹಬ್ಬವು ಡಿ.22ರಂದು ಅಪರಾಹ್ನ 3ರಿಂದ 10ರವರೆಗೆ ಜೆಪ್ಪುಸೈಂಟ್ ಅಂತೋನಿ ಆಶ್ರಮ ತೆರೆದ ಮೈದಾನದಲ್ಲಿ ನಡೆಯಲಿದೆ.

ಈ ಹಬ್ಬದ ಪ್ರಯುಕ್ತ ಕ್ಯಾರಲ್ ಹಾಡುಗಳ ಸ್ಪರ್ಧೆ ಮತ್ತು ಕ್ರಿಸ್ಮಸ್ ಗೆ ಸಂಬಂಧಪಟ್ಟ ವಿವಿಧ ವಿನೋದಾವಳಿಗಳು ನಡೆಯಲಿದೆ ಎಂದರು. ಈ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮದ ಸಂಚಾಲಕ ಬ್ರಿಷ್ಟನ್ ರೊಡ್ರಿಗಸ್, ಮಾಜಿ ಕಾರ್ಪೊರೇಟರ್ಗಳಾದ ಜೆ.ನಾಗೇಂದ್ರ ಕುಮಾರ್, ಭಾಸ್ಕರ್ ರಾವ್, ಅಪ್ಪಿಲತಾ, ವಿಕಾಸ್ ಶೆಟ್ಟಿ, ಪಿಯೂಸ್ ಮೊಂತೆರೋ, ಸೇಸಮಕ್ಕ, ಸತೀಶ್ ಪೆಂಗಲ್, ವಿಜಯ್ ಅರಾನ್ಹ, ಟಿ.ಸಿ. ಗಣೇಶ್, ಜೇಮ್ಸ್ ಪ್ರವೀಣ್, ರಿತೇಶ್ ಶಕ್ತಿನಗರ, ಅನಂದ ಸೋನ್ಸ್ ಇಮ್ರಾನ್, ನೀತು ಡಿಸೋಜ, ಆಲ್ಸ್ಟೀನ್ ಡಿಕುನ್ಹ, ಡಿಂಪಲ್ ಉಪಸ್ಥಿತರಿದ್ದರು.

Share News
Exit mobile version