canaratvnews

ಗಲ್ಫ್ ಸಂಘರ್ಷ: ಭಾರತದಲ್ಲಿ ಪೆಟ್ರೋಲ್‌ ದರ ಪ್ರತಿ ಲೀಟರ್ ಗೆ 2 ರೂ. ಹೆಚ್ಚಳ…!

ಹೊಸದಿಲ್ಲಿ: ಗಲ್ಫ್ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದ ಕಚ್ಚಾ ತೈಲ ಬೆಲೆ ಏರಿಕೆಯ ಬಿಸಿ ಗ್ರಾಹಕರನ್ನೂ ನಿಧಾನವಾಗಿ ತಟ್ಟುತ್ತಿದೆ. ದೇಶದ ತೈಲ ಮಾರಾಟ ಕಂಪನಿಗಳು ಇಂದು ಪ್ರಿಮಿಯಮ್ ಪೆಟ್ರೋಲ್ ದರವನ್ನು ಪ್ರತಿ ಲೀಟರ್ ಗೆ 2 ರೂ. ನಷ್ಟು ಹೆಚ್ಚಿಸಿವೆ. ಆದರೆ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾಗಿಲ್ಲ.

ಅಂತೆಯೇ ಕೈಗಾರಿಕಾ ಡೀಸೆಲ್ ದರ ಲೀಟರ್ ಗೆ 22 ರೂಪಾಯಿ ಹೆಚ್ಚಳವಾಗಿದೆ. ಇದೇ ವೇಳೆ ದೇಶದ ಅತಿದೊಡ್ಡ ಇಂಧನ ಮಾರಾಟ ಸಂಸ್ಥೆಯಾದ ಇಂಡಿಯನ್ ಆಯಿಲ್, ತಾರ್ಕಿಕ ಬೆಲೆನಿಗದಿ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲು ಮನವಿ ಮಾಡಿದೆ.

Share News
Exit mobile version