• Home  
  • ಆತ್ಮಗಳ ಸದ್ಗತಿಗೆ ಕ್ರೈಸ್ತರಿಂದ ವಿಶೇಷ ಪ್ರಾರ್ಥನೆ
- COMMUNITY NEWS - HOME - LATEST NEWS

ಆತ್ಮಗಳ ಸದ್ಗತಿಗೆ ಕ್ರೈಸ್ತರಿಂದ ವಿಶೇಷ ಪ್ರಾರ್ಥನೆ

ಮಂಗಳೂರು, ನ. 2: ಎಲ್ಲ ಧರ್ಮಗಳಲ್ಲೂ ಕುಟುಂಬಸ್ಥರನ್ನು ಸ್ಮರಿಸುವ ಸಂಪ್ರದಾಯವಿದೆ. ಅಂತೆಯೇ ಕೆಥೋಲಿಕರು ಕೂಡ ವಿಶಿಷ್ಟವಾಗಿ ನೆನಪಿಸಿಕೊಳ್ಳುತ್ತಾರೆ. ನ. 2ರಂದು ಕೆಥೋಲಿಕ್ ಧರ್ಮಸಭೆಯಲ್ಲಿ ಮೃತಪಟ್ಟಿರುವ ಭಕ್ತ ವಿಶ್ವಾಸಿಗಳನ್ನು ಭಕ್ತಿ ಪೂರ್ವಕವಾಗಿ ಸ್ಮರಿಸಲಾಯಿತು.ಆಲ್ ಸೋಲ್ಸ್ ಡೇಯನ್ನು ದ.ಕ. ಹಾಗೂ ಉಡುಪಿ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ ಹಾಗೂ ಸಮಾಧಿಯಲ್ಲಿ ಪ್ರಾರ್ಥನೆ ನಡೆಸುವ ಮೂಲಕ ಆಚರಿಸಲಾಯಿತು. ಮೃತಪಟ್ಟ ಸದಸ್ಯರ ನೆಚ್ಚಿನ ತಿನಿಸುಗಳನ್ನು ಮನೆಯಲ್ಲಿ ತಯಾರಿಸಿ ಕೆಲವು ಕುಟುಂಬದವರು ಮೃತರನ್ನು ಸ್ಥರಿಸಿದರು.ನಮ್ಮೊಂದಿಗಿದ್ದು ನಮ್ಮನ್ನು ಅಗಲಿದವರು ಅನೇಕರು ದೇವರ ವಾಕ್ಯದಂತೆ ನಡೆಯದೆ ಸ್ವರ್ಗಸ್ಥರಾಗದೇ ಶುದ್ದೀಕರಣದ ಸ್ಥಳದಲ್ಲಿದ್ದು, ಅಂತಹ ಆತ್ಮಗಳಿಗೆ ಸ್ವರ್ಗ ಪ್ರಾಪ್ತಿಯಾಗಲು ನ.2ರಂದು ಪವಿತ್ರ ಸಭೆಯನ್ನು ನಡೆಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ತಮ್ಮ ಕುಟುಂಬಸ್ಥರ ಸಮಾಧಿ ಸ್ಥಳಗಳನ್ನು ಶುಚಿಗೊಳಿಸಿ, ಹೂ ಅರ್ಪಿಸಿ, ದೀಪ, ಮೋಂಬತ್ತಿಗಳನ್ನಿಟ್ಟು ಧರ್ಮಗುರುಗಳಿಂದ ಆಶೀರ್ವಚನ ಹಾಗೂ ಶುದ್ದೀಕರಣದ ಮೂಲಕ ಆತ್ಮಗಳನ್ನು ಸ್ಥರಿಸಲಾಯಿತು. ಆದರ್ಶ ಜೀವನ ನಡೆಸಿದವರು ಸ್ವರ್ಗಸ್ವ ರಾಗುತ್ತಾರೆ. ಉಳಿದ ಆತ್ಮಗಳು ಶುದ್ದೀಕರಣ(ಪರ್ಗೆಟರಿ) ಸ್ಥಳದಲ್ಲಿರುತ್ತವೆ ಎನ್ನುವುದು ಕೆಥೋಲಿಕರ ನಂಬಿಕೆ. ಅಂಥ ಆತ್ಮಗಳು ಸ್ವರ್ಗ ಸೇರಲು ಪ್ರಾರ್ಥನೆ ನಡೆಸುವ ದಿನವಾಗಿದೆ.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678