canaratvnews

ಏ.26 ರಂದು ಪೋಪ್‌ ಫ್ರಾನ್ಸಿಸ್‌ ಅಂತ್ಯಕ್ರಿಯೆ: ಹಲವು ದೇಶದ ಗಣ್ಯರು ಭಾಗಿ

ವ್ಯಾಟಿಕನ್ಸಿಟಿ: ಸೋಮವಾರ ನಿಧನರಾದ ಕ್ರೈಸ್ತರ ಪರಮೋಚ್ಚ ಗುರುಗಳಾದ ಪೋಪ್‌ ಫ್ರಾನ್ಸಿಸ್‌ ಅವರ ಅಂತ್ರಕ್ರಿಯೆಯನ್ನು ಶನಿವಾರ ಬೆಳಗ್ಗೆ 10 ಗಂಟೆಗೆ ನಡೆಸಲು ನಿರ್ಧರಿಸಲಾಗಿದೆ.

 ಪೋಟೋ ಕೃಪೆ (VATICAN MEDIA Divisione)

ವ್ಯಾಟಿಕನ್‌ನಲ್ಲಿ ಮಂಗಳವಾರ ನಡೆದ ಕಾರ್ಡಿನಲ್‌ಗಳ ಮೊದಲ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಂತೆಯೇ, ಪೋಪ್‌ರ ಮೃತದೇಹವನ್ನು ಸೇಂಟ್ ಪೀಟರ್ಸ್ ಬೆಸಿಲಿಕಾಗೆ ತಂದ ಬಳಿಕ ಬುಧವಾರದಿಂದ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು.

ಏ.26ರಂದು ಬೆಳಗ್ಗೆ 10 ಗಂಟೆಗೆ ಸೇಂಟ್‌ ಪೀಟರ್‌ ಸ್ಕೈರ್‌ನಲ್ಲಿ ಅಂತ್ರಕ್ರಿಯೆಯ ಬಲಿಪೂಜೆ ನಡೆಸಲಾಗುವುದು. ಈ ಬಲಿಪೂಜೆಯು ಕಾಲೇಜ್‌ ಆಫ್‌ ಕಾರ್ಡಿನಲ್ಸ್‌ನ ಡೀನ್‌ನ ಕಾರ್ಡಿನಲ್‌ ಜೀಯೋವಾನಿ ಬಟಿಸ್ಟಾ ಅವರ ನೇತೃತ್ವದಲ್ಲಿ ನಡೆಯಲಿದೆ.

ಅಂತ್ಯಕ್ರಿಯೆಯಲ್ಲಿ ಅಮೇರಿಕ ಅಧ್ಯಕ್ಷ ಟ್ರಂಪ್‌ ಹಾಗೂ ಪತ್ನಿ ಮೆಲಾನಿಯಾ ಭಾಗಿಯಾಗಲಿದ್ದಾರೆ. ಜೊತೆಗೆ ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್‌ ಮಿಲೀ ಕೂಡ ಆಗಮಿಸುವ ನಿರೀಕ್ಷೆಯಿದೆ.

Share News
Exit mobile version