canaratvnews

ಪುತ್ತಿಲ, ತಿಮರೋಡಿ, ಹಸೈನಾರ್ ಸೇರಿ ಕಾನೂನು ಉಲ್ಲಂಘಿಸುವ 36 ಮಂದಿಗೆ ದ.ಕ.ದಿಂದ ಗಡಿಪಾರು ಶಿಕ್ಷೆ

ಮಂಗಳೂರು, ಜೂ. 2: ದ.ಕ. ಜಿಲ್ಲೆಯಲ್ಲಿ ಅಶಾಂತಿಗೆ ಕಾರಣರಾಗುವ ಹಲವರನ್ನು ಗಡಿಪಾರು ಮಾಡಲು ಸಿದ್ಧತೆ ನಡೆದಿದೆ. ದ.ಕ. ಜಿಲ್ಲಾ ಪೊಲೀಸ್ ಇಲಾಖೆ ತಯಾರಿಸಿರುವ ಪಟ್ಟಿಯಲ್ಲಿ 36 ಮಂದಿಯ ಹೆಸರಿದ್ದು, ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಮಹೇಶ್ ಶೆಟ್ಟಿ ತಿಮರೋಡಿ, ಹಸೈನಾರ್, ಅಬ್ದುಲ್ ಖಾದರ್ ಒಳಗೊಂಡಿದ್ದಾರೆ.

ಆ ಮೂಲಕ ದ.ಕ. ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟ ಸಂದೇಶ ನೀಡಿದ್ದು, ಕಾನೂನು ಎಲ್ಲರಿಗೂ ಒಂದೇ. ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಾಲಾಗುವುದು ಎಂಬ ಸ್ಪಷ್ಟ ಸಂದೇಶ ರವಾನಿಸಿದೆ. ನೂತನ ಎಸ್ಪಿ ಕೆ. ಅರುಣ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಜಿಲ್ಲೆಯಲ್ಲಿ ಹದಗೆಟ್ಟಿರುವ ಶಾಂತಿ ಸುವ್ಯವಸ್ಥೆ ಸರಿಪಡಿಸಲು ಕ್ರಮ ವಹಿಸಿದ್ದಾರೆ.

ಧರ್ಮ ಪಕ್ಷದ ಮಿತಿ ಇಲ್ಲದೆ ಗಡಿಪಾರು:

ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗದೆ, ಪಕ್ಷಕ್ಕೆ ಸೀಮಿತವಾಗದೆ ನಿಯಮ ಮೀರುವವರನ್ನು ಪತ್ತೆ ಹಚ್ಚಿ ಗಡಿಪಾರು ಮಾಡಲು ಕ್ರಮ ವಹಿಸಲಾಗಿದೆ. ಹಿಂದೂ ಹಾಗೂ ಮುಸಲ್ಮಾನ ನಾಯಕರು ಒಳಗೊಂಡಿರುವುದರಿಂದ ಒಂದು ವರ್ಗ ಎನ್ನುವ ವಿವಾದಕ್ಕೆ ಎಡೆ ಇಲ್ಲದಂತಾಗಿದೆ.

Share News
Exit mobile version