canaratvnews

ಉಜಿರೆ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ- ಇಬ್ಬರ ಬಂಧನ

ಉಜಿರೆ: ವೇಶ್ಯಾವಾಟಿಕೆ ಚಟುವಟಿಕೆ ನಡೆಯುತ್ತಿರುವ ಖಚಿತ ಮಾಹಿತಿ ಹಿನ್ನೆಲೆ ಬೆಳ್ತಂಗಡಿ ಪೊಲೀಸ್ ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಸುಬ್ಬಾಪುರ್ ಮಠ ನೇತೃತ್ವದಲ್ಲಿ ಪೊಲೀಸರು ಶನಿವಾರ ರಾತ್ರಿ ಬೆಳ್ತಂಗಡಿ ಮತ್ತು ಉಜಿರೆಯಲ್ಲಿರುವ ಖಾಸಗಿ ವಸತಿಗೃಹಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಉಜಿರೆಯ ಬಸ್‌ನಿಲ್ದಾಣದ ಬಳಿ ಇರುವ ಶ್ರೀದುರ್ಗಾ ವಸತಿಗೃಹದಲ್ಲಿ ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ವಸತಿಗೃಹದ ಮ್ಯಾನೇಜರ್ ಸತೀಶ್ ಪೂಜಾರಿ ಮತ್ತು ಕನ್ಯಾಡಿ ನಿವಾಸಿ ಯೋಗೀಶ್ ಆಚಾರ್ಯ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ವಸತಿಗೃಹದ ಮಾಲೀಕ ರಮೇಶ್ ಶೆಟ್ಟಿ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Share News
Exit mobile version