canaratvnews

ಪೊಳಲಿ ಚೆಂಡು ಹಸ್ತಾಂತರ

ಮೂಡುಬಿದಿರೆ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಅಂಗವಾಗಿ ತಯಾರಿಸಲಾದ ಚೆಂಡನ್ನು ಸೋಮವಾರ ಮೂಡುಬಿದಿರೆಯಲ್ಲಿ ಪೊಳಲಿ ಕ್ಷೇತ್ರಕ್ಕೆ ಹಸ್ತಾಂತರಿಸಲಾಯಿತು.

ನುರಿತ ಚಮ್ಮಾರ ಪದ್ಮನಾಭ ಅವರು 27 ವರ್ಷಗಳಿಂದ ಕ್ಷೇತ್ರದ ಜಾತ್ರೆಗೆ ಚೆಂಡು ತಯಾರಿಸಿಕೊಡುತ್ತಿದ್ದಾರೆ. ಈ ಚೆಂಡನ್ನು ಸೋಮವಾರ ಬೆಳಿಗ್ಗೆ ಪದ್ಮನಾಭ ಅವರ ಮನೆಯಂಗಳದಲ್ಲಿರುವ ಮಹಮ್ಮಾಯಿ ದೇವಿಯ ಸನ್ನಿಧಿಯಲ್ಲಿ ಪೂಜಿಸಲಾಯಿತು. ಬಳಿಕ ಪೊಳಲಿ ಕ್ಷೇತ್ರದ ಪರವಾಗಿ ಬಂದ ಕಡಪುಕರಿಯ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಪೊಳಲಿ ತಂಡದಲ್ಲಿ ಕೃಷ್ಣಪ್ಪ ಕಲ್ಕುಡ, ಉಮೇಶ, ಪ್ರಸಾದ್ ಗಾಣಿಗ ನರಿಕೊಂಬು, ಪ್ರಕಾಶ್ ಕಲ್ಕುಡ, ಸತೀಶ್ ಹರೇಕಳ, ಲೋಕಯ್ಯ ಸಪಳಿಗ, ಗಂಗಾಧರ, ಗೋಪಾಲ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಇದ್ದರು. ಪೊಳಲಿ ಕ್ಷೇತ್ರದ ಪ್ರಸಾದವನ್ನು ಪದ್ಮನಾಭ ಅವರ ತಾಯಿ ಲಿಂಗಮ್ಮ ಸ್ವೀಕರಿಸಿದರು.

ಪದ್ಮನಾಭ ಅವರೊಂದಿಗೆ ಚಂದ್ರಶೇಖರ, ರವಿಚಂದ್ರ, ವಿಶ್ವನಾಥ ದೇವಾಡಿಗ, ರವಿಚಂದ್ರ , ಶಿವಾನಂದ, ಲಕ್ಷ್ಮೀನಾರಾಯಣ, ಚುವ್ವ ಅವರು ಚೆಂಡನ್ನು ಪೊಳಲಿಯವರಿಗೆ ಹಸ್ತಾಂತರಿಸಿದರು. ಕ್ಷೇತ್ರದ ಪ್ರಮುಖ ಆಕರ್ಷಣೆಯಾಗಿರುವ ಪುರಲ್ದ ಚೆಂಡು ಉತ್ಸವ ಏ.6ರಿಂದ 10ರವರೆಗೆ ನಡೆಯಲಿದ್ದು, ಈ ಚೆಂಡನ್ನು ಉಪಯೋಗಿಸಲಾಗುತ್ತದೆ.

Share News
Exit mobile version