HOMELATEST NEWSNATIONAL

“ಎಥನಾಲ್ ಮಿಶ್ರಣ ಮಾಡದೇ ಇದ್ದಿದ್ದರೇ ಪೆಟ್ರೋಲ್ ಬೆಲೆ ₹125 ದಾಟುತ್ತಿತ್ತು”

ನವದೆಹಲಿ: ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣ (Ethanol Blending) ಇಲ್ಲದೇ ಇದ್ದಿದ್ದರೆ ಪೆಟ್ರೋಲ್ 125 ರೂಗಳವರೆಗೆ ಆಗುತ್ತಿತ್ತು ಎಂದು ಪೆಟ್ರೋಲಿಯಂ ಸಚಿವಾಲಯ ಸಮರ್ಥಿಸಿಕೊಂಡಿದೆ ಎಂದು ಎಂದು ಆಂಗ್ಲ ದೈನಿಕ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 135 ಡಾಲರ್‌ ತಲುಪಿದಾಗ, ಶುದ್ಧ ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಲೀಟರ್‌ಗೆ ₹125 ದಾಟುತ್ತಿತ್ತು. ಆದರೆ ದೇಶೀಯವಾಗಿ ಪೂರೈಕೆಯಾಗುವ ಎಥನಾಲ್ ಅನ್ನು 20% ಪ್ರಮಾಣದಲ್ಲಿ (E20) ಮಿಶ್ರಣ ಮಾಡಿದ್ದರಿಂದ ಗ್ರಾಹಕರಿಗೆ ಪ್ರತಿ ಲೀಟರ್‌ಗೆ ಸುಮಾರು ₹30 ರಷ್ಟು ಉಳಿತಾಯವಾಯಿತು. ಎಥನಾಲ್ ಮಿಶ್ರಿತ ಪೆಟ್ರೋಲ್ ಆದ್ದರಿಂದ ಬೆಲೆ ನಿಯಂತ್ರಣದಲ್ಲಿರಲು ಸಾಧ್ಯವಾಗಿದೆ ಎಂದು ಸರ್ಕಾರ ವಾದಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Share News