ವಿಟ್ಲ: ಬಂಟ್ವಾಳ ತಾಲೂಕಿನ ಪೆರುವಾಯಿಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಹಾಗೂ ಶಿಕ್ಷಕ -ರಕ್ಷಕ ಸಭೆ ನಡೆಯಿತು. ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಸಮಾರಂಭದ ಉದ್ಘಾಟಿಸಿದರು. ನಂತರ ಮಾತನಾಡಿ, ಎಲ್ಲಾ ಧರ್ಮದ ಸಾರವು ಒಂದೇ. ವಿದ್ಯೆ ನಮ್ಮ ಜೀವನದ ಏಳಿಗೆಗೆ ಪ್ರಮುಖವಾದ ಆಯುಧ ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಆರ್ಶೀವಚನವಿತ್ತರು. ಇದೇ ವೇಳೆ ತಮ್ಮ ಹುಟ್ಟು ಹಬ್ಬದ ನಿಮಿತ್ತ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಿದರು.
ಮುಖ್ಯ ಅತಿಥಿಗಳಾದ ಎಸ್ .ನಾರಾಯಣ ಮಾತನಾಡಿ, ಅನುದಾನಿತ ಶಾಲೆಗಳಿಗೆ ಸರಕಾರದಿಂದ ಯಾವುದೇ ಅನುದಾನ ದೊರೆಯುವುದಿಲ್ಲ ಅನುದಾನಿತ ಶಾಲೆಗಳನ್ನು ಉಳಿಸುವ ಕೆಲಸ ನಮ್ಮಿಂದಲೇ ಆಗಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಸಚಿನ್ ಅಡ್ವಾಯಿ ಅವರು ವಹಿಸಿದರು. ಮುಖ್ಯಅತಿಥಿಯಾದ ಉದ್ಯಮಿ ಗೌತಮ್ ಶೆಟ್ಟಿ, ಶಾಲಾ ಮುಖ್ಯಯೋಪಾಧ್ಯಯರಾದ
ಪ್ರಭಾಕರ ಯಂ, ಪ್ರಗತಿಪರ ಕೃಷಿಕರು ಹಿರಿಯ ವಿದ್ಯಾರ್ಥಿಯಾದ ರಘುರಾಮ ಶೆಟ್ಟಿ ಪಾತಣಿಗೆ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮನೋರಾಜ್ ರೈ ಅಡ್ವಾಯಿ, ಆಡಳಿತ ಮಂಡಳಿ ಸದಸ್ಯರಾದ ರಾಜೇಂದ್ರನಾಥ ರೈ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾದ ಶ್ರೀನಿವಾಸ ಶೆಟ್ಟಿ ಕೆಳಗಿನ ಮನೆ ಉಪಸ್ಥಿತರಿದ್ದರು.
ಹಳೆವಿದ್ಯಾರ್ಥಿಯಾದ ಸುಂದರ್ ಸ್ವಾಗತಿಸಿ ನಿರೂಪಿಸಿದರು. ಮುಖ್ಯೋಪಾಧ್ಯಯರು ವಂದಿಸಿದರು. ಶಿಕ್ಷಕಿಯರಾದ ಅಶ್ವಿನಿ, ಮಾಲತಿ, ವರ್ಷಿತ, ನಳಿನಾಕ್ಷಿ ಯವರು ಸಹಕರಿಸಿದರು.