ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ವಾರ್ಷಿಕ ಮಹೋತ್ಸವ ಹಿನ್ನೆಲೆ ಪರಮ ಪ್ರಸಾದದ ಮೆರವಣಿಗೆ ಹಾಗೂ ಆರಾಧನೆ ರವಿವಾರ ನಡೆಯಿತು. ಜಪ್ಪು ಸೆಮಿನರಿಯ ಪ್ರಾಧ್ಯಾಪಕ ವಂ. ಡಾ. ಆಂಟನಿ ಜಾರ್ಜ್ ಪಿಂಟೊ ಅವರು ಪ್ರಧಾನ ಯಾಜಕರಾಗಿ ಭಾಗವಹಿಸಿ ಬಲಿಪೂಜೆ ಅರ್ಪಿಸಿದರು.

ಪ್ರವಚನ ನೀಡಿದ ಅವರು, ಸಾಮೂಹಿಕ ಪ್ರಾರ್ಥನೆ ನಮ್ಮ ಕೋರಿಕೆಗಳನ್ನು ದೇವರಿಗೆ ಸಲ್ಲಿಸಲು ಇರುವ ಮುಖ್ಯ ಹಾದಿಯಾಗಿದೆ. ಸೇವಾ ಮನೋಭಾವನೆಯಿಂದ ಬದುಕಿದಾಗ ನಮ್ಮ ಜೀವನ ಪಾವನವಾಗುತ್ತದೆ ಎಂದರು.
ಚರ್ಚ್ ಧರ್ಮಗುರು ವಂ. ಸೈಮನ್ ಡಿಸೋಜ ಬಲಿಪೂಜೆಯಲ್ಲಿ ಭಾಗವಹಿಸಿದ್ದರು. ಉಪಾಧ್ಯಕ್ಷ ಡೆನೀಸ್ ಮೊಂತೇರೊ, ಕಾರ್ಯದರ್ಶಿ ವೈಲೆಟ್ ಕುವೆಲ್ಲೊ ಸಹಕರಿಸಿದರು. ಬಳಿಕ ನಡೆದ ಪರಮ ಪ್ರಸಾದ ಮೆರವಣಿಗೆಯಲ್ಲಿ ನೂರಾರು ಕ್ರೈಸ್ತರು ಭಕ್ತಿಯಿಂದ ಭಾಗವಹಿಸಿದ್ದರು.














