• Home  
  • ಕುತ್ತಿಗೆಗೆ ಶೂ ಲೇಸ್‌ನಿಂದ ಬಿಗಿದು ಇಂಟರ್‌ಲಾಕ್‌ಗೆ ಕಟ್ಟಿದ ಸ್ಥಿತಿಯಲ್ಲಿ ಕೊಳೆತ ಶವ ಪತ್ತೆ
- DAKSHINA KANNADA - HOME - LATEST NEWS

ಕುತ್ತಿಗೆಗೆ ಶೂ ಲೇಸ್‌ನಿಂದ ಬಿಗಿದು ಇಂಟರ್‌ಲಾಕ್‌ಗೆ ಕಟ್ಟಿದ ಸ್ಥಿತಿಯಲ್ಲಿ ಕೊಳೆತ ಶವ ಪತ್ತೆ

ಮಂಗಳೂರು: ಕುತ್ತಿಗೆಗೆ ಶೂ ಲೇಸ್ ನಿಂದ ಬಿಗಿದು ಇಂಟರ್ ಲಾಕ್ ಕಲ್ಲಿಗೆ ಕಟ್ಟಿದ ಸ್ಥಿತಿಯಲ್ಲಿ ಕೊಳೆತ ಶವವೊಂದು ಮಂಗಳೂರಿನ ಫಲ್ಗುಣಿ ನದಿ ತೀರದಲ್ಲಿ ಪತ್ತೆಯಾದ ಬಗ್ಗೆ ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ವಿವರ ಫೆ.8 ರಂದು ರಿಯಾಸ್ ಫೆರಾವೊ ಎಂಬವರು KIOCL-ತೋಕೂರು ರಸ್ತೆಯಲ್ಲಿ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದ ವೇಳೆ KISCO ಗೇಟಿನ ಮುಂಭಾಗದಲ್ಲಿ ಫಲ್ಗುಣಿ ನದಿ ತೀರದ ಅನ್ನೋಡಿ ಎಂಬಲ್ಲಿ ನೀರಿನಲ್ಲಿ ಒಂದು ಮೃತದೇಹ ತೇಲುತ್ತಿರುವುದನ್ನು ಕಂಡು ಬಂದಿದೆ. ತಕ್ಷಣ ಅವರು ಪೊಲೀಸರಿಗೆ […]

Share News

ಮಂಗಳೂರು: ಕುತ್ತಿಗೆಗೆ ಶೂ ಲೇಸ್ ನಿಂದ ಬಿಗಿದು ಇಂಟರ್ ಲಾಕ್ ಕಲ್ಲಿಗೆ ಕಟ್ಟಿದ ಸ್ಥಿತಿಯಲ್ಲಿ ಕೊಳೆತ ಶವವೊಂದು ಮಂಗಳೂರಿನ ಫಲ್ಗುಣಿ ನದಿ ತೀರದಲ್ಲಿ ಪತ್ತೆಯಾದ ಬಗ್ಗೆ ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ವಿವರ

ಫೆ.8 ರಂದು ರಿಯಾಸ್ ಫೆರಾವೊ ಎಂಬವರು KIOCL-ತೋಕೂರು ರಸ್ತೆಯಲ್ಲಿ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದ ವೇಳೆ KISCO ಗೇಟಿನ ಮುಂಭಾಗದಲ್ಲಿ ಫಲ್ಗುಣಿ ನದಿ ತೀರದ ಅನ್ನೋಡಿ ಎಂಬಲ್ಲಿ ನೀರಿನಲ್ಲಿ ಒಂದು ಮೃತದೇಹ ತೇಲುತ್ತಿರುವುದನ್ನು ಕಂಡು ಬಂದಿದೆ.

ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿದ್ದಾಗ ಮೃತದೇಹವು ಸಂಪೂರ್ಣ ಚರ್ಮ ಜಾರಿದ, ಕೊಳೆತು ಹೋದ ಸ್ಥಿತಿಯಲ್ಲಿ ಕಂಡು ಬಂದಿದೆ. ಈ ಮೃತದೇಹವು ಸುಮಾರು 7-8 ದಿನಗಳಿಂದ ನೀರಿನಲ್ಲಿ ಇದ್ದುದು ಎಂದು ಅಂದಾಜಿಸಲಾಗಿದೆ.

ಜೊತೆಗೆ ಮೃತದೇಹದ ಕುತ್ತಿಗೆಗೆ ಶೂ ಲೇಸ್ ನಿಂದ ಬಿಗಿದುಕೊಂಡು ಇನ್ನೊಂದು ತುದಿಯನ್ನು ಇಂಟರ್ ಲಾಕ್ ಕಲ್ಲಿಗೆ ಬಿಗಿದು ಕಟ್ಟಿರುವುದು ಕಂಡು ಬಂದಿದ್ದು, ಈ ಅಪರಿಚಿತ 45-50 ವರ್ಷ ಪ್ರಾಯದ ವ್ಯಕ್ತಿಯ ಕುತ್ತಿಗೆಗೆ ಯಾರೋ ವ್ಯಕ್ತಿಗಳು ಶೂಲೇಸಿನಿಂದ ಬಿಗಿದು ಇನ್ನೊಂದು ಬದಿಗೆ ಇಂಟರ್ ಲಾಕ್ (ಪೇವರ್) ಕಲ್ಲಿನಿಂದ ಬಿಗಿದು  ನೀರಿನಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿದ್ದು, ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.

Share News