*ಪೆರುವಾಯಿ ಫಾತಿಮಾ ಮಾತೆಯ ದೇವಾಲಯ ಮುಚ್ಚಿರಪದವು ಇದರ ವಾರ್ಷಿಕ ಮಹೋತ್ಸವ*
canaratvnews.com
ವಿಟ್ಲ.: ಪೆರುವಾಯಿ ಫಾತಿಮಾ ಮಾತೆಯ ದೇವಾಲಯ ಮುಚ್ಚಿರಪದವು ಇದರ ವಾರ್ಷಿಕ ಮಹೋತ್ಸವವು ಇತ್ತೀಚೆಗೆ ಬಹಳ ವಿಜೃಂಭಣೆಯಿಂದ ನೆರವೇರಿತು. ಈ ಮಹೋತ್ಸವಕ್ಕೆ ಮಂಗಳೂರು ಧರ್ಮಪ್ರಾಂತ್ಯದ ನಿವೃತ ಧರ್ಮಾಧ್ಯಕ್ಷರಾದ ಪರಮಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪೌಲ್ ಡಿಸೋಜಾ ಇವರು ಪ್ರಧಾನ ಗುರುಗಳಾಗಿ ಆಗಮಿಸಿ ಬಲಿ ಪೂಜೆಯನ್ನು ನೆರವೇರಿಸಿದರು.
ಏಸು ನಮ್ಮ ಭರವಸೆ, ಮತ್ತೆ ಮರಿಯಮ್ಮ ನಮ್ಮ ಆಶ್ರಯ ಎಂದು ವಂದನೀಯ ಅರುಣ್ ವಿಲ್ಸನ್ ಲೋಬೊ ಇವರು ಸಂದೇಶ ನೀಡಿದರು. ಈ ಸುಸಂದರ್ಭದಲ್ಲಿ ಪರಮಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪೌಲ್ ಡಿಸೋಜ ಹಾಗೂ ವಂದನೀಯ ಪೀಟರ್ ಸೆರಾವೋ ಇವರ 59 ನೇ ಯಾಜಕೀ ಗುರು ದೀಕ್ಷಾ ದಿನದ ಸಂದರ್ಭ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.ಅದೇ ರೀತಿ ಧರ್ಮ ಕೇಂದ್ರ ಕ್ಕೆ ಧಾನ ನೀಡಿದ ಮಹನೀಯರನ್ನು ಗೌರವಿಸಲಾಯಿತು. ಫಾತಿಮಾ ಮಾತೆಯ ದೇವಾಲಯದ ಧರ್ಮಗುರುಗಳಾದ ವಂದನೀಯ ಸೈಮನ್ ಡಿಸೋಜ ರವರು ಎಲ್ಲಾ ರೀತಿಯಲ್ಲೂ ಸಹಕಾರ ನೀಡಿದವರಿಗೆ ಧನ್ಯವಾದ ಸಮರ್ಪಿಸಿದರು. ಈ ಸಂಧರ್ಭದಲ್ಲಿ ಪರಮಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪೌಲ್ ಡಿಸೋಜ, ವಂದನೀಯ ಪೀಟರ್ ಸೆರಾವೋ, ವಂದನೀಯ ಫಾ. ಅರುಣ್ ವಿಲ್ಸನ್ ಲೋಬೊ, ಸಂತ ಜಾನ್ ಪೌಲ್ ಎರಡನೇ ವಲಯದ ವಿಗಾರ್ ವಾರ್ ವಂದನೀಯ ಫಾ. ಐವನ್ ರೊಡ್ರಿಗಸ್, ಈ ಹಿಂದೆ ಪೆರುವಾಯಿ ಧರ್ಮಕೇಂದ್ರದಲ್ಲಿ ಸೇವೆ ಸಲ್ಲಿಸಿದ ವಂದನೀಯ ಫಾ. ಆಂಡ್ರೂ ಡಿಕೋಸ್ತ, ವಂದನೀಯ ಫಾ. ವಿಶಾಲ್ ಮೊನಿಸ್, ವಂದನೀಯ ಫಾ. ಜಾನ್ ಡಿಸೋಜ, ವಿಟ್ಲಾ ವಲಯದ ಹಾಗೂ ಅತಿಥಿ ಗುರುಗಳಾದ ವಂದನೀಯ ಫಾ. ಆಂಟೋನಿ, ವಂದನೀಯ ಫಾ. ರಿಚರ್ಡ್ ಡಿಸೋಜ, ವಂದನೀಯ ಫಾ. ಫೆಡ್ರಿಕ್ ಮೊಂತೆರೋ, ವಂದನೀಯ ಫಾ. ರೊನಾಲ್ಡ್ ಲೋಬೊ, ವಂದನೀಯ ಫಾ. ಸಂತೋಷ್ ಡಿಸೋಜ, ವಂದನೀಯ ಫಾ. ಪ್ಯಾಟ್ರಿಕ್, ವಂದನೀಯ ಫಾ ಹ್ಯಾರಿ, ವಂದನೀಯ ಫಾ. ಮಾರಿಯೋ, ವಂದನೀಯ ಫಾ. ಪ್ರವೀಣ್ ಮೊಂತೆರೋ, ವಂದನೀಯ ಫಾ. ಅನಿಲ್ ಕ್ಯಾನುಟ್ ಡಿಮೆಲ್ಲೋ, ದಿಯಾಕೋನ್ ಅವಿಲ್ ಸಂತುಮಯೋರ್ಫಾತಿಮಾ ಮಾತೆಯ ದೇವಾಲಯದ ಗುರುಗಳಾದ ವಂದನೀಯ ಫಾ. ಸೈಮನ್ ಡಿಸೋಜ, ಪಾಲನಾ ಪರಿಷತ್ತಿನ ಉಪಾಧ್ಯಕ್ಷ ಶ್ರೀ ಡೆನಿಸ್ ಮೊಂತೆರೋ, ಕಾರ್ಯದರ್ಶಿ ಶ್ರೀಮತಿ ವೈಲೆಟ್ ಕುವೆಲ್ಲೊ, ಸಂತೋಷ್ ಮೊಂತೆರೋ ಹಾಗು ಭಕ್ತಾದಿಗಳು ಉಪಸ್ಥಿತರಿದ್ದರು.