Site icon canaratvnews

17 ಬಡ ವಿದ್ಯಾರ್ಥಿಗಳಿಗೆ ಶಾಸಕ ಅಶೋಕ್ ರೈ ಯವರಿಂದ ಪುಸ್ತಕ ವಿತರಣೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ಕಲಿಯುತ್ತಿರುವ ಆರ್ಥಿಕ ಸಂಕಷ್ಟದಲ್ಲಿರುವ ಒಟ್ಟು 17 ಬಡ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕವನ್ನು ಶಾಸಕ ಅಶೋಕ್ ರೈ ಅವರು ನೀಡಿದ್ದಾರೆ.


ತೀರಾ ಬಡತನದಲ್ಲಿರುವ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವ ನಿಟ್ಟಿನಲ್ಲಿ ಶಾಸಕರು ತನ್ನ ಸ್ವಂತ‌ನಿಧಿಯಿಂದ ಪುಸ್ತಕವನ್ನು ನೀಡಿದ್ದಾರೆ. ಈ‌ಸಂಧರ್ಭದಲ್ಲಿ‌ಮಾತನಾಡಿದ ಶಾಸಕರು ತನ್ನ ಕ್ಷೇತ್ರದಲ್ಲಿ ಅನೇಕ ಸಂಕಷ್ಟದಲದಲಿರುವ ಕುಟುಂಬಗಳು, ಅನಾರೋಗ್ಯದಿಂದ ಮನೆ ಯಜಮಾನ ಕೆಲಸಕ್ಕೂ ಹೋಗಲಾರದೆ ಕಷ್ಟದಲ್ಲಿರುವ ಕುಟುಂಬದ ಮಕ್ಕಳಿಗೆ ಬರೆಯುವ ಪುಸ್ತಕವನ್ನು ನೀಡಲಾಗಿದೆ.

ಬಡವರ ಮಕ್ಕಳು ಆರ್ಥಿಕ ಸಂಕಷ್ಟದ ಕಾರಣಕ್ಕೆ ವಿದ್ಯೆಯಿಂದ ವಂಚಿತರಾಗಬಾರದು ಎಂಬುದೇ ನನ್ನ‌ಉದ್ದೇಶವಾಗಿದೆ ಎಂದು ಹೇಳಿದರು.
ವಸಂತಿ ನಾಯ್ಕ ಕೆದಂಬಾಡಿ, ಸುಚಿತ್ರ ಕೊಂಬೆಟ್ಟು,‌ಮೊಹಮ್ಮದ್ ಮಝೀಂ, ಫಾತಿಮತ್ ಮಝ್ವಾನ ಪುತ್ತೂರು,‌ಮೀನಾಕ್ಷಿ ಉಪ್ಪಿನಂಗಡಿಯವರ ಮಕ್ಕಳಾದ ಸಂದ್ಯಾ ,ಶ್ರಾವ್ಯ, ಶ್ರೇಯ, ಸೃಜನ್, ಶರಣ್, ಲೀಲಾವತಿ ಮಕ್ಕಳಾದ ತನುಷಾ, ವೇಧಿಶ್, ಖತೀಜತ್ ಅಫಿಯಾ ಕೆಮ್ಮಿಂಜೆ, ಅನನ್ಯ ಸಂಪ್ಯ, ಜಿತೇಶ್ ಒಳಮೊಗ್ರು, ದಿವ್ಯಜ್ಯೋತಿ‌ ವಿಟ್ಲ ಕಸ, ಸವಿತಾ ರವರಿಗೆ ಪುಸ್ತಕ ವಿತರಿಸಲಾಯಿತು. ಈ ಸಂದರ್ಭದಲ್ಲಿ‌ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ ಮತ್ತಿತರರಿದ್ದರು.

Share News
Exit mobile version