ನವದೆಹಲಿ: ಇತ್ತೀಚೆಗೆ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಮಸೂದೆಗಳನ್ನು ಜಾರಿ ಮಾಡುವ ಮೂಲಕ ಕಾರ್ಮಿಕರಿಗೆ ಶುಭ ಸುದ್ದಿ ನೀಡಿತ್ತು. ಇದೀಗ ಇಂದು ಲೋಕಸಭೆಯಲ್ಲಿ ಮತ್ತೊಂದು ಮಹತ್ವದ ಮಸೂದೆ ಪ್ರಸ್ತಾಪವಾಗಿದ್ದು,
ಕಚೇರಿ ಸಮಯ ಮುಗಿದ ನಂತರ ಫೋನ್ ಕರೆಗಳು, ಇಮೇಲ್‌ಗಳು ಮತ್ತು ವರ್ಕ್ ಮೆಸೇಜ್‌ಗಳಿಂದ ಮುಕ್ತಿ ನೀಡುವ ಉದ್ದೇಶದಿಂದ ರೈಟ್ ಟು ಡಿಸ್ಕನೆಕ್ಟ್ ಬಿಲ್ 2025 (Right to Disconnect Bill2025) ಅನ್ನು ಪರಿಚಯಿಸಲಾಗಿದೆ. ಈ ಬಿಲ್ ಉದ್ಯೋಗಿಗಳ ಮಾನಸಿಕ ಆರೋಗ್ಯ ಮತ್ತು ವೈಯಕ್ತಿಕ ಸಮಯವನ್ನು ರಕ್ಷಿಸುವ ಮಹತ್ವದ ಹೆಜ್ಜೆಯಾಗಿ ಕಾಣುತ್ತಿದೆ.

ಲೋಕಸಭೆಯಲ್ಲಿ ಎನ್‌ಸಿಪಿ (ಎಸ್ಪಿ) ಸಂಸದೆ ಸುಪ್ರಿಯಾ ಸುಳೆ ಅವರು ಮಂಡಿಸಿದ “ರೈಟ್ ಟು ಡಿಸ್ಕನೆಕ್ಟ್ ಬಿಲ್ 2025” ಅನ್ನು ಖಾಸಗಿ ಸದಸ್ಯ ಬಿಲ್ ಆಗಿ ಮಂಡಿಸಿದ್ದಾರೆ. ಈ ಬಿಲ್ ಪ್ರಕಾರ ನೌಕರರಿಗೆ ಅಧಿಕೃತ ಕೆಲಸದ ಅವಧಿಯ ನಂತರ ಫೋನ್‌ಕಾಲ್‌ಗಳು ಮತ್ತು ಇಮೇಲ್‌ಗಳಿಗೆ ಪ್ರತಿಕ್ರಿಯಿಸದಿರುವ ಹಕ್ಕನ್ನು ನೀಡುವ ಬಗ್ಗೆ ಪ್ರಸ್ತಾಪಿಸಲಾಗಿದ್ದು,
ರಜಾ ದಿನಗಳಲ್ಲಿಯೂ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಕರೆ ಅಥವಾ ಇಮೇಲ್‌ಗೆ ಉತ್ತರಿಸದ ಹಕ್ಕು ಎಲ್ಲಾ ಉದ್ಯೋಗಿಗಳಿಗೆ ಸಿಗಲಿದೆ. ಉದ್ಯೋಗಿಗಳಿಗೆ ಆ ಸಂದೇಶಗಳನ್ನು ನಿರಾಕರಿಸುವ ಹಕ್ಕು ಕೂಡ ಇರುತ್ತದೆ.

