canaratvnews

“ಚರ್ಚ್‌ಗಳು ಬಡವರ ಪರವಾಗಿ ಇರಬೇಕು” ಎಂದಿದ್ದ ಪೋಪ್‌ ಫ್ರಾನ್ಸಿಸ್‌

ವ್ಯಾಟಿಕನ್‌ ಸಿಟಿ: ಪೋಪ್ ಫ್ರಾನ್ಸಿಸ್ ಅವರು ತಮ್ಮ ಸರಳತೆ ಹಾಗೂ ಸಹಾನೂಭೂತಿಯ ಮೂಲಕ ಜನರ ಪೋಪ್‌ ಎಂದು ಹೆಗ್ಗಳಿಕೆ ಗಳಿಸಿದ್ದರು. ಇದೇ ಕಾರಣಕ್ಕೆ ಜಗತ್ತಿನಾದ್ಯಂತ ಕೋಟ್ಯಂತರ ಮಂದಿಯ ಪ್ರೀತಿಗೆ ಪಾತ್ರರಾಗಿದ್ದ ಸಂದರ್ಭದಲ್ಲೇ, ಚರ್ಚ್‌ನೊಳಗಿನ ಸಂಪ್ರದಾಯವಾದಿಗಳಿಂದ ವಿರೋಧವನ್ನೂ ಎದುರಿಸಿದ್ದಾರೆ.

“ಚರ್ಚ್ಗಳು ಬಡವರ ಪರವಾಗಿ ಇರಬೇಕು”

13ನೇ ಶತಮಾನದಲ್ಲಿ ಪೋಪ್‌ ಆಗಿದ್ದ, ತನ್ನೆಲ್ಲಾ ಸಂಪತ್ತನ್ನು ತ್ಯಜಿಸಿ ಬಡವರಿಗಾಗಿ ಜೀವನವನ್ನು ಮುಡಿಪಾಗಿಟ್ಟ ಸೇಂಟ್‌ ಫ್ರಾನ್ಸಿಸ್‌ ಬಳಿಕ ಫ್ರಾನ್ಸಿಸ್‌ ಎಂಬ ಹೆಸರನ್ನು ಪಡೆದ ಮೊದಲ ಪೋಪ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.‘ಚರ್ಚ್‌ಗಳು ಬಡವರ ಪರವಾಗಿ ಇರಬೇಕೆಂದು ಬಯಸುತ್ತಿದ್ದೇನೆ’ ಎಂದು 266ನೇ ಪೋಪ್‌ ಆಗಿ ಆಯ್ಕೆಯಾದ ಮೂರು ದಿನಗಳ ಬಳಿಕ ಅವರು ಹೇಳಿದ್ದರು.

ಕೈದಿಗಳ ಪಾದಗಳನ್ನು ತೊಳೆದು ಮುತ್ತಿಟ್ಟಿದ್ದರು

ಅವರು ಐಷಾರಾಮಿ ಜೀವನ ಸಾಗಿಸುವ ಅವಕಾಶವಿದ್ದರೂ ಅದನ್ನೆಲ್ಲ ತ್ಯಜಿಸಿ ಸರಳ ಬದುಕಿನ ಮಾರ್ಗ ಹಿಡಿದರು. ವಿಧವೆಯರು, ಅತ್ಯಾಚಾರ ಸಂತ್ರಸ್ತರು ಮತ್ತು ಕೈದಿಗಳ ಜತೆ ದೂರವಾಣಿ ಕರೆಮಾಡಿ ಮಾತನಾಡುತ್ತಿದ್ದರು. ಜೊತೆಗೆ ವ್ಯಾಟಿಕನ್‌ನಲ್ಲಿ ತಮ್ಮ ಮೊದಲ ಈಸ್ಟರ್ ಆಚರಿಸುವ ಮುನ್ನ ಅವರು ರೋಮ್‌ನ ಜೈಲಿನಲ್ಲಿ ಕೈದಿಗಳ ಪಾದಗಳನ್ನು ತೊಳೆದು ಮುತ್ತಿಟ್ಟಿದ್ದರು.

2024ರ ಈಸ್ಟರ್ ಆಚರಣೆ ವೇಳೆ ಮಹಿಳಾ ಕೈದಿಯ ಪಾದ ತೊಳೆದು ಮುತ್ತಿಡುತ್ತಿರುವುದು

ಹಲವರ ವಿರೋಧ ಕಟ್ಟಿಕೊಂಡಿದ್ದರು

ಪಾದ್ರಿಗಳಿಂದ ನಡೆಯುವ ಲೈಂಗಿಕ ದೌರ್ಜನ್ಯದಂತಹ ವಿಷಯಗಳ ಬಗ್ಗೆಯೂ ಮಾತನಾಡಿದ್ದ ಅವರು ಹಲವು ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ ಹಲವರ ವಿರೋಧ ಕಟ್ಟಿಕೊಂಡಿದ್ದರು.

Share News
Exit mobile version