ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ನಿಧನದಿಂದ ತೆರವಾದ ಪೋಪ್ ಸ್ಥಾನಕ್ಕೆ ಮತ್ತೋರ್ವರು ಆಯ್ಕೆಯಾಗಿದ್ದಾರೆ. ಇದರ ಸಂಕೇತವಾಗಿ ಕೆಲವೇ ಹೊತ್ತಿನ ಮುಂಚೆ ಚಿಮಣಿ ಮೂಲಕ ಬಿಳಿ ಹೊಗೆ ಹೊರ ಸೂಸಿದೆ.
ಇಂದು ಬೆಳಗ್ಗೆ ಇಲ್ಲಿನ ಸಿಸ್ಟೈನ್ ಚಾಪೆಲ್‌ನ ಚರ್ಚ್ ಚಿಮಣಿಯಿಂದ ಕಪ್ಪು ಹೊಗೆ ಹೊರಬಂದಿತ್ತು. ಇದೀಗ ಮತ್ತೆ ನಡೆದ ಗೌಪ್ಯ ಮತದಾನದಲ್ಲಿ ನೂತನ ಪೋಪ್ ಆಯ್ಕೆಯಾದ ಬಗ್ಗೆ ಮಾಹಿತಿ ಹೊರಬಿದ್ದಿದೆ.
ವಿಶ್ವದ ನಾನಾ ದೇಶಗಳನ್ನು ಪ್ರತಿನಿಧಿಸುವ 133 ಕಾರ್ಡಿನಲ್‌ಗಳು ನೂತನ ಪೋಪ್ ಅವರನ್ನು ಆಯ್ಕೆ ಮಾಡುತ್ತಾರೆ. ಪೋಪ್ ಆಗಿ ಆಯ್ಕೆಯಾಗಬಯಸುವವರು ಕನಿಷ್ಠ 89 ಅಥವಾ ಮೂರನೇ ಎರಡರಷ್ಟು ಮತಗಳನ್ನು ಪಡೆಯಬೇಕು.