canaratvnews

ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ತೆನೆ ಹಬ್ಬದ ಸಂಭ್ರಮ

ವಿಟ್ಲ: ಪೆರುವಾಯಿಯ ಫಾತಿಮಾ ಮಾತೆಯ ದೇವಾಲಯದಲ್ಲಿ ಮೋಂತಿ ಹ\nಬ್ಬದ ಪ್ರಯುಕ್ತ ವಿಶೇಷ ಬಲಿಪೂಜೆ ನಡೆಯಿತು.ಕೆನರಾ ಕಮ್ಯೂನಿಕೇಷನ್ ನ ನಿರ್ದೇಶಕ ಅನಿಲ್ ಐವನ್ ಫೆರ್ನಾಂಡೀಸ್ ಅವರು ವಿಶೇಷ ಬಲಿಪೂಜೆ ನಡೆಸಿಹಬ್ಬದ ವಿಶೇಷತೆಗಳು ಹಾಗೂ ಕೌಟುಂಬಿಕ ಸಂಬಂಧಗಳ ಮೌಲ್ಯಗಳ ಬಗ್ಗೆ ವಿಶೇಷ ಪ್ರವಚನವಿತ್ತರು. ಬಲಿಪೂಜೆಯ ಮೊದಲು ಮೇರಿ ಮಾತೆಗೆ ಮಕ್ಕಳು ಹೂವನ್ನು ಅರ್ಪಿಸಿದರು. ಇದೇ ವೇಳೆ ಹೊಸ ತೆನೆಯನ್ನು ಆರ್ಶಿವದಿಸಿದರು.ಬಲಿಪೂಜೆಯ ನಂತರ ಎಲ್ಲಾ ಭಕ್ತಾಧಿಗಳಿಗೆ ಸಿಹಿತಿನಿಸು ಹಾಗೂ ಕಬ್ಬುವನ್ನು ವಿತರಿಸಿದರು. ಈ ಹಬ್ಬಕ್ಕೆ ಪೂರ್ವಭಾವಿಯಾಗಿ 9 ದಿನಗಳ ನೊವೇನಾ ನಡೆಯಿತು. ಮಕ್ಕಳು 9 ದಿನಗಳ ಕಾಲ ತಮ್ಮ ಹಿತ್ತಲಲ್ಲಿ ಸಿಕ್ಕ ಹೂಗಳನ್ನು ಚರ್ಚಿಗೆ ತಂದು ಮೇರಿ ಮಾತೆಗೆ ಅರ್ಪಿಸುತ್ತಾರೆ. ಈ ವೇಳೆ ಮಕ್ಕಳಿಗೆ ಸಿಹಿತಿನಿಸುಗಳನ್ನು ಹಂಚುತ್ತಾರೆ.
ಕೊನೆಯ ದಿನವಾದ ಇಂದು ಎಲ್ಲರ ಮನೆಗಳಲ್ಲಿ ಕುಟುಂಬ ಸಮೇತ ಸಸ್ಯಹಾರಿ ಭೋಜನವಿರುತ್ತದೆ. ಇಂದು ಪರವೂರಿನಲ್ಲಿರುವ ಎಲ್ಲಾ ಕುಟುಂಬಸ್ಥರು ತಮ್ಮ ಮೂಲ ಮನೆಗಳಲ್ಲಿ ಕುಟುಂಬ ಸಮೇತ ಊಟ ಸೇವಿಸುತ್ತಾರೆ. ಇದೊಂದು ಕುಟುಂಬ ಸಂಬಂಧ ಬೆಸೆಯುವ ಹಬ್ಬವಾಗಿದೆ.ಬಲಿಪೂಜೆಯಲ್ಲಿ ಪೆರುವಾಯಿ ದೇವಾಲಯದ ಧರ್ಮಗುರು ವಂ. ಸೈಮನ್ ಡಿಸೋಜ ಅವರು ಭಾಗವಹಿಸಿದ್ದರು. ಈ ವೇಳೆ ಉಪಾಧ್ಯಕ್ಷ ಡೆನಿಸ್ ಡಿಸೋಜ, ಕಾರ್ಯದರ್ಶಿ ವೈಲೆಟ್ ಕುವೆಲ್ಲೊ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share News
Exit mobile version