LATEST NEWS

ಸಂಪಾಜೆಯಿಂದ ಮಂಗಳೂರಿಗೆ 120 ಕಿ.ಮೀ ‘ಸ್ವಚ್ಛತೆಯ ದಂಡಯಾತ್ರೆ’: ನಾಗರಾಜ್ ಬಜಾಲ್‌ಗೆ ನಾಗರಿಕರಿಂದ ಗೌರವ ಸಮರ್ಪಣೆ

ಮಂಗಳೂರು; ದಕ್ಷಿಣ ಕನ್ನಡ ಕೊಡಗು ಜಿಲ್ಲೆಯ ಗಡಿಭಾಗ ಪಶ್ಚಿಮ ಘಟ್ಟದ ತಪ್ಪಲಿನ ಸಂಪಾಜೆ ಯಿಂದ ಅಕ್ಟೋಬರ್ 9ರಿಂದ ಹಸಿರುದಳ ಯೋಜನೆಯ ವ್ಯವಸ್ಥಾ ಪಕ ನಾಗರಾಜ್ ಸ್ವಚ್ಛ ದಂಡಯಾತ್ರೆ (ಕಸ ಸಂಗ್ರಹದ ಜೊತೆ ಪಾದಯಾತ್ರೆ) ಯನ್ನು ಆರಂಭಿಸಿ ಸಂಪಾಜೆಯಿಂದ ಅರಂತೋಡು, ಸುಳ್ಯ, ಜಾಲ್ಸೂರು, ಕಾವು, ಪುತ್ತೂರು, ಮಾಣಿ ಹಾಗೂ ಕಲ್ಲಡ್ಕ ಮಾರ್ಗವಾಗಿ ಬಿ.ಸಿ.ರೋಡ್ಮಾರ್ಗವಾಗಿ 120 ಕಿ.ಮೀ ಪಾದಯಾತ್ರೆ ನಡೆಸಿ ಮಂಗಳೂರು ತಲುಪಿದಾಗ ಅವರನ್ನು ಅಳಪೆ ಪಡೀಲ್ ಬಯಲು ರಂಗ ಮಂದಿರದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ನಾಗರಿಕರು ಸೇರಿ ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ನಾಗರಾಜ್ ಬಜಾಲ್ ಮಾತನಾಡುತ್ತಾ,”ಸ್ವಚ್ಛತೆಯ ಅಭಿಯಾನ ಹಲವು ವರ್ಷಗಳಿಂದ ನಡೆಯುತ್ತಿದ್ದರೂ ಜನರಲ್ಲಿ ಈ ಬಗ್ಗೆ ಜಾಗೃತಿಯ ಕೊರತೆ ಇದೆ ಸುಮಾರು 20 ಟನ್ ಗೂ ಅಧಿಕ ತ್ಯಾಜ್ಯ ನಾನು ಪಾದಯಾತ್ರೆಯ ಸಂದರ್ಭದಲ್ಲಿ ಹೆಕ್ಕುತ್ತಾ,ಅದನ್ನು ವಿಂಗಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ.ಈ ಸಂದರ್ಭದಲ್ಲಿ ಕೆಲವರು ಇವನಿಗೆ ಹುಚ್ಚು ಎಂದು ವ್ಯಂಗ್ಯ ವಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಕೆಲವು ಗ್ರಾಮಪಂಚಾ ಯತ್ ಗಳು ಸಂಘ ಸಂಸ್ಥೆಗಳು ಉತ್ತಮ ಬೆಂಬಲ ನೀಡಿದ್ದಾರೆ.ಯುವಜನರು ವಿದ್ಯಾರ್ಥಿಗಳು ಸಹಕಾರ ನೀಡಿರುವುದನ್ನು ಸ್ಮರಿಸಿದರು. ಜನರು ಹಸಿ-ಒಣ ಕಸವನ್ನು ವಿಂಗಡಿಸದೆ, ಒಟ್ಟಿಗೆ ಕಟ್ಟಿ ರಸ್ತೆ ಬದಿಗೆ ಎಸೆಯುತ್ತಿದ್ದಾರೆ. ಇವುಗಳಲ್ಲಿ ಅಪಾಯಕಾರಿಗಳು ಒಡೆದ ಗಾಜುಗಳು, ಹಳೆಯ ಬ್ಲೇಡ್ ಮತ್ತು ಆಸ್ಪತ್ರೆಯ ಸಿರಿಂಜ್ಗಳು ಕೂಡ ಮಿಶ್ರಣವಾಗುತ್ತಿವೆ. ಇತ್ತೀಚೆಗಷ್ಟೇ ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂತಹ ಕಸವಿಲೇವಾರಿ ಮಾಡುವಾಗ ಮಹಿಳಾ ಪೌರಕಾರ್ಮಿಕ ರೊಬ್ಬರ ಕೈಗೆ ಸಿರಿಂಜ್ ಚುಚ್ಚಿ ಗಂಭೀರ ಗಾಯ ಗೊಂಡು ಆಸ್ಪತ್ರೆ ಸೇರಬೇಕಾದ ಘಟನೆ ನಡೆದಿತ್ತು. ಅಷ್ಟೇ ಅಲ್ಲದೆ, ರಸ್ತೆ ಬದಿಯಲ್ಲಿ ನೂರಾರು ಸಂಖ್ಯೆಯಲ್ಲಿ ಎಸೆಯಲಾಗುವ ಬಳಸಿ ಬಿಸಾಡಿದ ಡೈಪರ್ಗಳು ಪರಿಸರ ಮತ್ತು ನೈರ್ಮಲ್ಯಕ್ಕೆ ಸ್ವಚ್ಛತಾ ಕಾರ್ಮಿಕರಿಗೆ ಅಪಾಯಕಾರಿಯಾಗಿದೆ ಈ ಬಗ್ಗೆ ಸೂಕ್ತ ಕ್ರಮ ಆಗಬೇಕಾಗಿದೆ. ಜನರಲ್ಲಿಜಾಗೃತಿಯಾಗ ಬೇಕಾಗಿದೆ ಎಂದು ನಾಗರಾಜ್ ಬಜಾಲ್ ತಿಳಿಸಿದ್ದಾರೆ ‌

ನಾಗರಾಜ್ ಬಜಾಲ್ ಅವರು ಕಳೆದ ವರ್ಷ ಕಾರವಾರದಿಂದ ಮಂಗಳೂರಿನವರೆಗೆ ಸುಮಾರು 300 ಕಿಲೋಮೀಟರ್ ದೂರ ಪಾದಯಾತ್ರೆ ನಡೆಸಿ ಹೆದ್ದಾರಿಯುದ್ದಕ್ಕೂ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದ್ದರು. ಅಷ್ಟೇ ಅಲ್ಲದೆ, ರಾಷ್ಟ್ರೀಯ ಹೆದ್ದಾರಿಯ ಅಡ್ಯಾರ್ ಹಾಗೂ ಫರಂಗಿಪೇಟೆ ವ್ಯಾಪ್ತಿಯಲ್ಲಿ ರಸ್ತೆ ಬದಿಗೆ ಕಸ ಎಸೆಯುವುದನ್ನು ತಡೆಯಲು ‘ಕಸ ಎಸೆಯಬೇಡಿ’ ಎಂಬ ಫಲಕವನ್ನು ಕೈಯಲ್ಲಿ ಹಿಡಿದು ನಿಂತು ವಾಹನ ಸವಾರರಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಪ್ಲಾಸ್ಟಿಕ್ ಚೀಲದ ಬದಲು ಬಟ್ಟೆ ಚೀಲ ವಿತರಿಸಿ ಗಮನ ಸೆಳೆದಿದ್ದರು.

ಮುಂದೆ ಹತ್ತು ಗ್ರಾಮಗಳಲ್ಲಿ ಮಾದರಿಯಾಗಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಪಣ ತೊಟ್ಟಿರುವುದಾಗಿ ತಿಳಿಸಿದ್ದಾರೆ.

*ಸ್ವಚ್ಛತಾ ಯಾತ್ರಿಕನಿಗೆ ಸನ್ಮಾನ:-

ಅಳಪೆ ಪಡೀಲ್ ಬಯಲು ರಂಗ ಮಂದಿರದಲ್ಲಿ ಹಸಿರುದಳದ ನಾಗರಾಜ್ ಬಜಾಲ್ ಹಾಗೂ ಅವರಿಗೆ ಬೆಂಬಲ ನೀಡಿದ ಕುಟುಂಬದ ಸದಸ್ಯರ ನ್ನು ಅವರನ್ನು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ನಾಗರಿಕರು ಸೇರಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ನಗರ ದಕ್ಷಿಣ ವಲಯದ ಶಾಸಕರಾದ ಡಿ. ವೇದ ವ್ಯಾಸ್ ಕಾಮತ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ,ಲಯನ್ಸ್ 317-ಡಿ ಜಿಲ್ಲಾ ಪ್ರಥಮ ಉಪ ಜಿಲ್ಲಾ ಗವರ್ನರ್ ಲಯನ್ ಗೋವರ್ಧನ ಶೆಟ್ಟಿ,ಡಿ. ವೈ. ಎಫ್. ಐ ರಾಜ್ಯ ಕಾರ್ಯದರ್ಶಿಯಾದ ಸಂತೋಷ್ ಕುಮಾರ್ ಬಜಾಲ್, ಜನತಾ ವ್ಯಾಯಾಮ ಶಾಲೆ ಯ ಅಧ್ಯಕ್ಷ ದೀಪಕ್ ಬಜಾಲ್,ಪಕ್ಕ ಲಡ್ಕ ಯುವಕ ಮಂಡಲ ಬಜಾಲ್ ನ ಕಾರ್ಯದರ್ಶಿ ಯಶರಾಜ್ ,ಸಂತ ಅಲೋಶಿಯಶ್ ಐಟಿಐ ಕಾಲೇಜಿನ ಪ್ರಾಂಶುಪಾಲರು ರೋಷನ್ ಡಿಸೋಜ,
ಸಂತ ಅಲೋಸಿಸ್ ಐಟಿಐ ಕಾಲೇಜಿನ ತರಬೇತಿ ಅಧಿಕಾರಿಗಳಾದ ವಿಲ್ಸನ್ ಮತ್ತು ನಾಯಲ್ ಲೋಬೊ, ಪಾವೂರು ಗ್ರಾಮ ಪಂಚಾಯಿತಿನ ಮಾಜಿ ಸದಸ್ಯರಾದ ವೆಲೇರಿಯನ್ ಡಿಸೋಜಾ, ಲಯನ್ ಅಲ್ಫೋನ್ಸ ಡಿ ಕುಟಿನ್ಹಾ, ಹಸಿರು ದಳ ಸಂಸ್ಥೆ ಮಂಗಳೂರು ಇದರ ವ್ಯವಸ್ಥಾಪಕ ಲಕ್ಷ್ಮೀಕಾಂತ್ ಎಸ್‌ಬಿಐ ಫೌಂಡೇಷನ್, ಹಸಿರು ದಳದ ಸದಸ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.ಹಸಿರು ದಳದ ಮೇಲ್ವಿಚಾರಕಿ ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕ ಸಾಂತಪ್ಪ ಸ್ವಾಗತಿಸಿದರು. ಮೇಲ್ವಿಚಾರಕ ಪ್ರಜ್ವಲ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ರಚಿತಪ್ರಿಯಾ. ಎನ್ ವಂದಿಸಿದರು.

Share News