• Home  
  • ತಣ್ಣೀರುಬಾವಿ ಬೀಚ್‌ನಲ್ಲಿ ಇಂದು-ನಾಳೆ ಮ್ಯೂಸಿಕ್ ಫೆಸ್ಟಿವಲ್: ಪೊಲೀಸರಿಂದ ಸಂಚಾರಿ ಸಲಹೆ
- DAKSHINA KANNADA - HOME

ತಣ್ಣೀರುಬಾವಿ ಬೀಚ್‌ನಲ್ಲಿ ಇಂದು-ನಾಳೆ ಮ್ಯೂಸಿಕ್ ಫೆಸ್ಟಿವಲ್: ಪೊಲೀಸರಿಂದ ಸಂಚಾರಿ ಸಲಹೆ

 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ ಕರಾವಳಿ ಉತ್ಸವ ಕಾರ್ಯಕ್ರಮದ ಪ್ರಯುಕ್ತ ತಣ್ಣೀರುಬಾವಿ ಬೀಚ್‌ನಲ್ಲಿ  ಜ.3 ಹಾಗೂ 4 ರಂದು ಸಂಜೆ ಮ್ಯೂಸಿಕ್ ಫೆಸ್ಟಿವಲ್, ಕೈಲಾಶ್ ಖೇರ್ ನೈಟ್, ವಿಜಯ ಪ್ರಕಾಶ್ ನೈಟ್ ಕಾರ್ಯಕ್ರಮಗಳು ನಡೆಯಲಿರುತ್ತದೆ. ಸದರಿ ಕಾರ್ಯಕ್ರಮಗಳಿಗೆ  ಗಣ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವವರಿದ್ದು, ಈ ಸಮಯ ಕೊಟ್ಟಾರಚೌಕಿ – ಪಣಂಬೂರು ರಾಷ್ಟ್ರೀಯ ಹೆದ್ದಾರಿ ಮತ್ತು ತಣ್ಣೀರುಬಾವಿ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಗಳು ಇರುತ್ತದೆ. ಮೇಲಿನ ಕಾರ್ಯಕ್ರಮಗಳು ನಡೆಯುವ […]

Share News
 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ ಕರಾವಳಿ ಉತ್ಸವ ಕಾರ್ಯಕ್ರಮದ ಪ್ರಯುಕ್ತ ತಣ್ಣೀರುಬಾವಿ ಬೀಚ್‌ನಲ್ಲಿ  ಜ.3 ಹಾಗೂ 4 ರಂದು ಸಂಜೆ ಮ್ಯೂಸಿಕ್ ಫೆಸ್ಟಿವಲ್, ಕೈಲಾಶ್ ಖೇರ್ ನೈಟ್, ವಿಜಯ ಪ್ರಕಾಶ್ ನೈಟ್ ಕಾರ್ಯಕ್ರಮಗಳು ನಡೆಯಲಿರುತ್ತದೆ. ಸದರಿ ಕಾರ್ಯಕ್ರಮಗಳಿಗೆ  ಗಣ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವವರಿದ್ದು, ಈ ಸಮಯ ಕೊಟ್ಟಾರಚೌಕಿ – ಪಣಂಬೂರು ರಾಷ್ಟ್ರೀಯ ಹೆದ್ದಾರಿ ಮತ್ತು ತಣ್ಣೀರುಬಾವಿ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಗಳು ಇರುತ್ತದೆ.
ಮೇಲಿನ ಕಾರ್ಯಕ್ರಮಗಳು ನಡೆಯುವ ಸಮಯ ಕುದುರೆಮುಖ ಜಂಕ್ಷನ್‌ನಿಂದ ತಣ್ಣೀರುಬಾವಿ ಬೀಚ್ ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ.
ಕಾರ್ಯಕ್ರಮಗಳಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ತಣ್ಣೀರು ಬಾವಿ ಬೀಚ್ ರಸ್ತೆಯಲ್ಲಿ ನಿಗಧಿಪಡಿಸಿದ Parking place ಗಳಲ್ಲಿ ಮಾತ್ರ ನಿಲ್ಲಿಸುವುದು.
ಕಾರ್ಯಕ್ರಮದ ಮಾರ್ಗದಲ್ಲಿ ವಾಹನ ನಿಲುಗಡೆಯ ಸೂಚನಾ ಫಲಕದ ಫ್ಲೆಕ್ಸ್ ಗಳನ್ನು ಅಳವಡಿಸಿದ್ದು, ಮಾರ್ಗಸೂಚಿಯನ್ನು ಅನುಸರಿಸುವುದು ಹಾಗೂ ಕಾರ್ಯಕ್ರಮ ಪ್ರಾರಂಭವಾಗುವ ಮುಂಚಿತವಾಗಿ ಬಂದು ನಿರ್ಧಿಷ್ಟ ಸ್ಥಳದಲ್ಲಿ ನಿಲ್ಲಿಸುವುದು.
ನಿಗದಿ ಪಡಿಸಿರುವ ಪಾರ್ಕಿಂಗ್ ಸ್ಥಳಗಳು
1.ಫೀಜಾ ಕ್ರಿಕೆಟ್ ಗ್ರೌಂಡ್  (ಹೋಟೆಲ್ ನಿತ್ಯಾಧರ ಮುಂಭಾಗದ ಪಾರ್ಕಿಂಗ್ ಮೈದಾನ)
2.ಡೆಲ್ಟಾ ಮೈದಾನ ಪಾರ್ಕಿಂಗ್
3.ರಫ್ತಾರ್ ಪಾರ್ಕಿಂಗ್
4.ಬೆಂಗ್ರೆ ತಣ್ಣೀರು ಬಾವಿ ಮಸೀದಿ ಪಾರ್ಕಿಂಗ್ ಸ್ಥಳ
5.ಕಟ್ಟೆ ಗ್ರೌಂಡ್ ಪಾರ್ಕಿಂಗ್ ಸ್ಥಳ
6.ದೋಸ್ತ್ ಗ್ರೌಂಡ್
7.ಫಾತಿಮ  ಚರ್ಚ್ ಪಾರ್ಕಿಂಗ್
8.ಎ.ಜೆ ಶೆಟ್ಟಿ ರವರ ಗ್ರೌಂಡ್ (ಎಸ್.ಇ.ಝ್ ರಸ್ತೆ)
ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಸುಲ್ತಾನ್ ಬತ್ತೇರಿಯಿಂದ ಫೇರಿಯನ್ನು ತಮ್ಮ ಅನುಕೂಲಕ್ಕಾಗಿ ಉಪಯೋಗಿಸಬಹುದಾಗಿದೆ. ಸದರಿ ಕಾರ್ಯಕ್ರಮಗಳ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾದ್ಯತೆಗಳು ಇರುವುದರಿಂದ ಸಾರ್ವಜನಿಕರು ರಸ್ತೆಯಲ್ಲಿ ಅನಾವಶ್ಯಕವಾಗಿ ನಿಲ್ಲದೇ ಶಿಸ್ತನ್ನು ಕಾಪಾಡುವುದು ಮತ್ತು ಪೊಲೀಸರು ನೀಡುವ ಸೂಚನೆಗಳನ್ನು ಪಾಲಿಸಲು ಕೋರಿದೆ.
Share News