• Home  
  • ಬಹುಕೋಟಿ ವಂಚನೆ ಪ್ರಕರಣ: ಆರೋಪಿ ರೋಶನ್ ಸಲ್ದಾನ ಕಚೇರಿಗಳಲ್ಲಿ ಶೋಧ
- DAKSHINA KANNADA - HOME - LATEST NEWS

ಬಹುಕೋಟಿ ವಂಚನೆ ಪ್ರಕರಣ: ಆರೋಪಿ ರೋಶನ್ ಸಲ್ದಾನ ಕಚೇರಿಗಳಲ್ಲಿ ಶೋಧ

ಮಂಗಳೂರು: ಬಹುಕೋಟಿ ವಂಚನೆ ಪ್ರಕರಣದ ಆರೋಪಿ ರೋಶನ್ ಸಲ್ದಾನ ಮತ್ತಿತರರ ಪ್ರಕರಣಕ್ಕೆ ಸಂಬಂಧಿಸಿದಂತೆ ಡೈರೆಕ್ಟೊರೇಟ್ ಆಫ್ ಎನ್‌ಫೋರ್ಸ್‌ಮೆಂಟ್ ಮಂಗಳೂರು ಸಬ್ ರೆನಲ್ ಕಚೇರಿಯು ಹಣ ವರ್ಗಾವಣೆ ತಡೆ ಕಾಯ್ದೆಯಡಿ ನಗರದ 5 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ನೆಪದಲ್ಲಿ ಅನೇಕ ಉದ್ಯಮಿಗಳಿಂದ ಸ್ಟಾಂಪ್ ಟ್ಯೂಟಿಗಾಗಿ ಹಣ ವಸೂಲಿ ಮಾಡಿ, ಭರವಸೆ ನೀಡಿದ ಸಾಲಗಳನ್ನು ನೀಡದೆ ವಂಚನೆ ಮಾಡಿದ ರೋಶನ್ ಸಲ್ದಾನ, ಆತನ ಪತ್ನಿ ಡಫ್ನಿ ನೀತು ಡಿಸೋಜ ಮತ್ತಿತರರ ವಿರುದ್ಧ ಕಾನೂನು ಜಾರಿ ಸಂಸ್ಥೆಗಳು ದಾಖಲಿಸಿದ ಅನೇಕ ಎಫ್‌ಐಆರ್‌ಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯ (ED) ತನಿಖೆ ಆರಂಭಿಸಿದೆ.

ಪ್ರಮುಖ ಆರೋಪಿ ರೋಶನ್ ಸಲ್ದಾನ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಶೋಧ ಕಾರ್ಯಾಚರಣೆಯ ವೇಳೆ ಈ ಆರೋಪಿಗಳು ಸ್ಟಾಂಪ್ ಡ್ಯೂಟಿ ನೆಪದಲ್ಲಿ ಅನೇಕ ಉದ್ಯಮಿಗಳಿಂದ ಹೊಸದಾಗಿ ರಚಿಸಲಾದ ನಕಲಿ ಸಂಸ್ಥೆಗಳ ಮೂಲಕ ಸುಮಾರು 39 ಕೋ.ರೂ.ಗಳನ್ನು ಸಂಗ್ರಹಿಸಿರುವುದು ಕಂಡುಬಂದಿದೆ. ಅದಕ್ಕೆ ಸಂಬಂಧಿಸಿದ ಡೈರಿಗಳು ಮತ್ತು ದಾಖಲೆಗಳು ಲಭ್ಯವಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹೀಗೆ ಸಂಗ್ರಹಿಸಿದ ಹಣವನ್ನು ಆರೋಪಿಗಳು ವೈಯಕ್ತಿಕ ಮತ್ತು ಸ್ವಂತ ವ್ಯಾಪಾರ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ. ಅದರ ಪ್ರಮುಖ ಭಾಗವನ್ನು ನಕಲಿ ಸಂಸ್ಥೆಗಳ ಮೂಲಕ ಬೇರೆಡೆಗೆ ವರ್ಗಾಯಿಸಿದ್ದಾರೆ ಎಂಬುದು ಕೂಡ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಶೋಧ ಕಾರ್ಯಾಚರಣೆಯ ಸಂದರ್ಭ ಬ್ಯಾಂಕ್ ಖಾತೆಗಳಲ್ಲಿದ್ದ 3.75 ಕೋ.ರೂ.ಗಳನ್ನು ಸ್ಥಗಿತಗೊಳಿಸಲಾಗಿದೆ.

ಅಲ್ಲದೆ ತನಿಖೆಯ ವೇಳೆ ಆರೋಪಿ ರೋಶನ್ ಸಲ್ದಾನನು ತಾನು ನಿರ್ವಹಿಸುತ್ತಿದ್ದ ಕಾಲ್ಪನಿಕ ಸಂಸ್ಥೆಗಳಿಂದ ತನ್ನ ಪತ್ನಿ ಡಫ್ನಿ ನೀತು ಡಿಸೋಜಳ ಹೆಸರಿನಲ್ಲಿ 5 ಮೀನುಗಾರಿಕೆ ದೋಣಿಗಳನ್ನು ಖರೀದಿಸಲು 5.75 ಕೋ.ರೂ. ವರ್ಗಾಯಿಸಿರುವುದು ಪತ್ತೆಯಾಗಿದೆ. ಅವುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಶೋಧದ ವೇಳೆ ವಶಪಡಿಸಿಕೊಳ್ಳಲಾದ ಮತ್ತು ಸ್ಥಗಿತಗೊಳಿಸಲಾದವುಗಳ ಒಟ್ಟು ಮೌಲ್ಯ 9.5 ಕೋ.ರೂ. ಆಗಿದೆ ಎಂದು ಪ್ರಕಟನೆ ತಿಳಿಸಿದೆ.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678