ಮಂಗಳೂರು : ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯ ಸಿಎಚ್‌ಟಿ (CHT) ಘಟಕದಲ್ಲಿ ಕಳೆದ ಸೆಪ್ಟೆಂಬರ್ 30 ರಂದು ಸಂಭವಿಸಿದ ದುರದೃಷ್ಟಕರ ಅಪಘಾತದಲ್ಲಿ ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದ ಉದ್ಯೋಗಿ ಶ್ರೀ ರಾಜೇಶ್ ಎ. ಡಿಸಿಲ್ವಾ ಅವರು ಚಿಕಿತ್ಸೆ ಫಲಕಾರಿಯಾ ಗದೆ ಅಕ್ಟೋಬರ್ 17 ಕೊನೆಯುಸಿರೆಳೆದಿದ್ದಾರೆ.

ಉದ್ಯೋಗಿಯ ಈ ದುರಂತ ನಿಧನಕ್ಕೆ ಎಂಆರ್‌ಪಿಎಲ್ ಆಡಳಿತ ಮಂಡಳಿಯು ತೀವ್ರ ಸಂತಾಪ ಹಾಗೂ ಆಳವಾದ ದುಃಖ ವ್ಯಕ್ತಪಡಿಸಿದೆ.
ಈ ಆಳವಾದ ದುಃಖದ ಸಂದರ್ಭದಲ್ಲಿ ಎಂಆರ್‌ಪಿಎಲ್ ಆಡಳಿತ ಮಂಡಳಿಯು ಶೋಕತಪ್ತ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಮೃತರ ಕುಟುಂಬದ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ, ಸಂಸ್ಥೆಯು ₹90 ಲಕ್ಷ ರೂಪಾಯಿಗಳ ಎಕ್ಸ್-ಗ್ರೇಷಿಯಾ (Ex-gratia) ಪರಿಹಾರ ಒಳಗೊಂಡಂತೆ ಒಟ್ಟು ₹1.20 ಕೋಟಿ ರೂಪಾಯಿಗಳ ಭಾರಿ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಿದೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ಭರಿಸಲಾಗದ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಎಂಆರ್‌ಪಿಎಲ್ ಮ್ಯಾನೇಜ್‌ಮೆಂಟ್ ಪ್ರಾರ್ಥಿಸಿದೆ.
